ETV Bharat / state

ರಾಜ್ಯದಲ್ಲಿ ಮಳೆ ಹಾನಿ, ಮಂಕಿಪಾಕ್ಸ್ ಮುನ್ನೆಚ್ಚರಿಕೆ: ಮಹತ್ವದ ಸಭೆ ನಡೆಸಲಿರುವ ಸಿಎಂ - Meeting with DCs today led by CM

ಮಳೆ ಹೆಚ್ಚಾಗಿರುವ ರಾಜ್ಯದ ಜಿಲ್ಲೆಗಳ ಡಿಸಿಗಳ ಜತೆ ಸಭೆ ನಡೆಯಲಿದೆ. ಜೊತೆಗೆ ಮಂಕಿಪಾಕ್ಸ್​ ಹೆಚ್ಚಳ ಕುರಿತೂ ಚರ್ಚಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Meeting with DCs today led by CM
ಸಿಎಂ ಬಸವರಾಜ್ ಬೊಮ್ಮಾಯಿ
author img

By

Published : Aug 2, 2022, 3:51 PM IST

ಬೆಂಗಳೂರು: ಮಳೆ ಹೆಚ್ಚಾಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ. ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಆಗಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತೇನೆ. ಈ ಮೂಲಕ ಕ್ರಮಕ್ಕೆ ಸೂಚಿಸಲಾಗುತ್ತದೆ. ಇದರ ಜತೆಗೆ ಮಂಕಿಪಾಕ್ಸ್ ರೋಗದ​ ನಿಯಂತ್ರಣ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಆಗಸ್ಟ್​ 4 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸಿಐಐ ಕಾರ್ಯಕ್ರಮ ನಿಗದಿಯಾಗಿದ್ದು ಅವರು ಪಾಲ್ಗೊಳ್ಳುವರು. ತಾಜ್ ಹೋಟೆಲ್​ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾತ್ರ ಶಾ ಪಾಲ್ಗೊಳ್ಳಲಿದ್ದು ಬೇರೆ ಯಾವುದೇ ಕಾರ್ಯಕ್ರಮ ನಿಗದಿಯಾಗಿಲ್ಲ ಎಂದು ಇದೇ ವೇಳೆ ಸಿಎಂ ತಿಳಿಸಿದ್ದಾರೆ.

ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನದ ಅಪರೂಪದ ಬಿಳಿ ಹುಲಿ 'ವನ್ಯಾ', ಸಿಂಹಿಣಿ 'ಸನಾ' ಸಾವು

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.