ETV Bharat / state

ಪುಡಿರೌಡಿಗಳ ಅಟ್ಟಹಾಸ: ರಸ್ತೆಯಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಚಾಕು ಇರಿತ - ಬೆಂಗಳೂರು ಕೊಲೆ

ಉತ್ತರ ಪ್ರದೇಶದ ವ್ಯಕ್ತಿಯೋರ್ವನನ್ನು ಪುಡಿರೌಡಿಗಳು ಚಾಕು ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ರಸ್ತೆಯಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಚಾಕು ಇರಿತ

author img

By

Published : Jun 28, 2020, 9:51 AM IST

ಬೆಂಗಳೂರು: ಪುಡಿರೌಡಿಗಳ ಅಟ್ಟಹಾಸ ನಗರದಲ್ಲಿ ಮುಂದುವರೆದಿದೆ. ವ್ಯಕ್ತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ರಮೇಶ್ ಕುಮಾರ್ ಖಾತ್ರಿ (45) ವರ್ಷ ಕೊಲೆಯಾದ ವ್ಯಕ್ತಿ. ಮೂಲತಃ ಉತ್ತರ ಪ್ರದೇಶದವನಾದ ರಮೇಶ್​ ಶ್ರೀರಾಂಪುರದಲ್ಲಿ ಪತ್ನಿ ಜೊತೆ ವಾಸವಾಗಿದ್ದರು. ಬ್ಯಾಟರಾಯನಪುರ ಪೊಲೀಸ್ ಠಾಣೆಯ ಮೈಸೂರು ರಸ್ತೆಯ ಕ್ರೈಸ್ತ ಧರ್ಮೀಯರ ಸಮಾಧಿ ಬಳಿ ರಾತ್ರಿ 10 ಗಂಟೆಗೆ ರಮೇಶ್ ಕುಮಾರ್ ಖಾತ್ರಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಆರೋಪಿಗಳು ಬಂದು ಎದೆಯ ಬಲಭಾಗದ ಪಕ್ಕೆಗೆ ಚಾಕುವಿನಿಂದ ಇರಿದಿದ್ದಾರೆ. ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.

ಕೊಲೆಯಾದ ವ್ಯಕ್ತಿಯ ಬಳಿಯಿದ್ದ ಯಾವುದೇ ಬೆಲೆ ಬಾಳುವ ವಸ್ತು ಕಳ್ಳತನವಾಗಿಲ್ಲ. ಯಾವ ಉದ್ದೇಶದ ಹಿನ್ನೆಲೆಯಲ್ಲಿ ಕೃತ್ಯ ಎಸಗಿದ್ದಾರೆಂಬ ಬಗ್ಗೆ ತಿಳಿದುಬಂದಿಲ್ಲ.

ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.