ಬೆಂಗಳೂರು: ಹೆಣ್ಣಿನ ವಿಚಾರಕ್ಕೆ ಇಬ್ಬರ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಪ್ರದೀಪ್ ಕೊಲೆಯಾದ ವ್ಯಕ್ತಿ. ಹನುಮಂತ ನಗರ ನಿವಾಸಿಯಾಗಿರುವ ಪ್ರದೀಪ್ ನಿನ್ನೆ ರಾತ್ರಿ ಕಾಮಾಕ್ಷಿಪಾಳ್ಯ ಬಳಿಯ ವೃಷಾಭಾವತಿ ನಗರಕ್ಕೆ ಹೋಗಿ ವಿಜಯ್ ಅಲಿಯಾಸ್ ವಿನೋದ್ ಎಂಬಾತನ ಜೊತೆ ಜಗಳವಾಡಿದ್ದ. ಯಾಕಂದ್ರೆ ವಿಜಯ್ ಮತ್ತು ಪ್ರದೀಪ್ ಇಬ್ಬರು ಓರ್ವ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ರಂತೆ. ಆ ವಿಚಾರ ಪ್ರದೀಪ್ಗೆ ಗೊತ್ತಾಗಿ ವಿನೋದ್ ಅಲಿಯಾಸ್ ವಿಜಯ್ಗೆ ವಾರ್ನಿಂಗ್ ಮಾಡಿದ್ದನಂತೆ. ಗಲಾಟೆ ವೇಳೆ ವಿನೋದ್ ಕೂಡ ಅವಾಜ್ ಹಾಕಿದ್ದ. ನಂತ್ರ ಅಲ್ಲಿದ್ದವರು ಜಗಳ ಬಿಡಿಸಿ ಕಳಿಸಿದ್ರು ಎನ್ನಲಾಗಿದೆ.
ಆದ್ರೆ ಪ್ರದೀಪ್ ತಡರಾತ್ರಿ ಒಂದು ಗಂಟೆ ಸಮಯಕ್ಕೆ ಮತ್ತೆ ಬಂದು ವಿನೋದ್ ಅಲಿಯಾಸ್ ವಿಜಯ್ ಜೊತೆ ಗಲಾಟೆ ಮಾಡಿದ್ದ. ಈ ವೇಳೆ ಕೋಪಗೊಂಡಿದ್ದ ವಿನೋದ್ ಪ್ರದೀಪ್ ಎದೆಗೆ ಚಾಕು ಹಾಕಿದ್ದಾನೆ. ನಂತ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರದೀಪ್ನನ್ನು ತಾನೇ ಆಸ್ಪತ್ರೆಗೆ ಸೇರಿಸಿ ರಸ್ತೆ ಮಧ್ಯೆ ಬಿದ್ದಿದ್ದವನನ್ನು ಆಸ್ಪತ್ರೆಗೆ ಸೇರಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ಈ ವೇಳೆ ವಿನೋದ್ ಅಲಿಯಾಸ್ ವಿಜಯ್ಗೆ ಪ್ರದೀಪ್ ಸತ್ತು ಹೋಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಮೆಲ್ಲಗೆ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ಸದ್ಯ ಕೇಸ್ ದಾಖಲು ಮಾಡಿಕೊಂಡಿರುವ ಕಾಮಾಕ್ಷಿಪಾಳ್ಯ ಪೊಲೀಸರು, ಆರೋಪಿ ವಿಜಯ್ ಅಲಿಯಾಸ್ ವಿನೋದ್ಗಾಗಿ ಶೋಧ ನಡೆಸುತ್ತಿದ್ದಾರೆ.