ETV Bharat / state

ಕೌಟುಂಬಿಕ ಕಲಹ ಹಿನ್ನೆಲೆ: ರೈಲು ಹಳಿ ಮೇಲೆ ಮಲಗಿ ವ್ಯಕ್ತಿ ಆತ್ಮಹತ್ಯೆ - ಯಲಹಂಕದ ಫುಟ್​ಪಾತ್

ಯಲಹಂಕದ ಫುಟ್​ಪಾತ್ ಮೇಲೆ ಬಾಳೆಹಣ್ಣು ಮಾರಾಟ ಮಾಡ್ತಿದ್ದ ವ್ಯಕ್ತಿ, ರೈಲ್ವೆ ಹಳಿಗಳ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ರೈಲಿನ ಹಳಿ ಮೇಲೆ ಮಲಗಿ ವ್ಯಕ್ತಿ ಆತ್ಮಹತ್ಯೆ
ರೈಲಿನ ಹಳಿ ಮೇಲೆ ಮಲಗಿ ವ್ಯಕ್ತಿ ಆತ್ಮಹತ್ಯೆ
author img

By

Published : Jun 22, 2020, 1:22 PM IST

ಬೆಂಗಳೂರು: ಕೌಟುಂಬಿಕ ಕಲಹ ಹಾಗೂ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ರೈಲ್ವೆ ಹಳಿಗಳ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಯಲಹಂಕದ ಫುಟ್​ಪಾತ್ ಮೇಲೆ ಬಾಳೆಹಣ್ಣು ಮಾರಾಟ ಮಾಡ್ತಿದ್ದ ವ್ಯಕ್ತಿ ಲಾಕ್​ಡೌನ್ ಆದ ಬಳಿಕ ವ್ಯಾಪಾರವಿಲ್ಲದೇ ಸಂಕಷ್ಟ ಅನುಭವಿಸಿದ್ದ. ಅಷ್ಟೇ ಅಲ್ಲದೆ, ಕುಟುಂಬ ಕಲಹದಿಂದ ಬೇಸತ್ತಿದ್ದ ಈತ ಕಂಠಪೂರ್ತಿ ಕುಡಿದು ರೈಲ್ವೆ ಹಳಿಗಳ ಮೇಲೆ ಮಲಗಿದ್ದಾನೆ. ಈ ವೇಳೆ, ರೈಲು ಈತನ ಮೇಲೆಯೇ ಚಲಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸದ್ಯ ಯಲಹಂಕ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.