ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯೋರ್ವನನ್ನು ಬಾಣಸವಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮನಗರ ಮೂಲದ ರಿಯಾಜ್ ಬಂಧಿತ ಆರೋಪಿ. ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರುತ್ತಿರುವುದನ್ನು ಗಮನಿಸಿದ ಬಾಣಸವಾಡಿ ಪೊಲೀಸರು, ಈತನನ್ನು ಸೆರೆ ಹಿಡಿದಿದ್ದು, 2 ಲಕ್ಷ, 75 ಸಾವಿರ ರೂ. ಮೌಲ್ಯದ 10 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.