ETV Bharat / state

ವಿದ್ಯುತ್​ ವೈರ್​ ತಗುಲಿ ಕಾರ್ಮಿಕನ ಸ್ಥಿತಿ ಗಂಭೀರ: ಅಧಿಕಾರಿಗಳು, ಕಟ್ಟಡ ಮಾಲೀಕನ ವಿರುದ್ಧ ಮೇಯರ್​ ಗರಂ - BBMP officials

ಬೆಂಗಳೂರಲ್ಲಿ ಹೈಟೆನ್ಷನ್​​ ತಂತಿ ತಾಗಿ ಕೂಲಿ ಕಾರ್ಮಿಕನೋರ್ವ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ್ದ ಮೇಯರ್​ ಗಂಗಾಂಬಿಕೆ ಅಧಿಕಾರಿಗಳ ಗೈರುಹಾಜರಿ ಕಂಡು ಗರಂ ಆದರು.

ಅಧಿಕಾರಿಗಳ ಬೇಜವಾಬ್ದಾರಿಗೆ ಆಸ್ಪತ್ರೆ ಪಾಲದ ಕೂಲಿ ಕಾರ್ಮಿಕ
author img

By

Published : May 28, 2019, 9:05 PM IST

ಬೆಂಗಳೂರು: ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರದೂರಿಂದ ಬಂದಿದ್ದ ಕೂಲಿ ಕಾರ್ಮಿಕನೋರ್ವ ಮನೆ ಮಾಲೀಕನ ಬೇಜವಾಬ್ದಾರಿಯಿಂದ ಆಸ್ಪತ್ರೆ ಸೇರಿದ ಘಟನೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಮಂಜುನಾಥ ನಗರದಲ್ಲಿ ನಡೆದಿದೆ.

ಹೌದು, ಮನೆ ಮಾಲೀಕ, ಕೆಪಿಟಿಸಿಎಲ್​ ಹಾಗೂ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಮಿಳುನಾಡಿನ ಸತೀಶ್ ಎಂಬ ಯುವಕ ಆಸ್ಪತ್ರೆ ಪಾಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ.

ಸತೀಶ್​ ಸೋಮವಾರ ಸಂಜೆ ನಿರ್ಮಾಣ ಹಂತದ ಬಿಲ್ಡಿಂಗ್​​​​ ಮೇಲೆ ಕೆಲಸ ಮಾಡುತ್ತಿದ್ದ. ಈ ವೇಳೆ ಮನೆ ಮೇಲೆ ಹಾದು ಹೋಗಿರುವ ಹೈಟೆನ್ಷನ್​​ ತಂತಿ ತಾಗಿದ್ದು ಸತೀಶ್ ಸ್ಥಳದಲ್ಲೇ ಬಿದ್ದಿದ್ದ. ಹೈಟೆನ್ಷನ್​​ ತಂತಿ ಸ್ಪರ್ಶದಿಂದ ಸತೀಶನ ದೇಹದ ಶೇ.70 ರಷ್ಟು ಭಾಗ ಸುಟ್ಟಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಚಿಕಿತ್ಸೆ ನೀಡಿರುವ ಆಸ್ಪತ್ರೆ ವೈದ್ಯರು ಇನ್ನೂ ಎರಡು ದಿನಗಳ ಕಾಲ ಏನು ಹೇಳಲಾಗದು ಎಂದಿದ್ದಾರೆ.

ಹೈಟೆನ್ಷನ್​​ ತಂತಿ ಸ್ಪರ್ಶದಿಂದ ಕೂಲಿ ಕಾರ್ಮಿಕ ಸತೀಶ ಎಂಬುವನ ದೇಹದ ಶೇ.70 ರಷ್ಟು ಭಾಗ ಸುಟ್ಟು ಹೋಗಿದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ ಮೇಯರ್ ಗಂಗಾಂಬಿಕೆ

ಈ ವಿಚಾರ ತಿಳಿಯುತ್ತದ್ದಂತೆ ಮೇಯರ್ ಗಂಗಾಂಬಿಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ, ಈ ವೇಳೆ ಹಲವು ಅಧಿಕಾರಿಗಳ ಗೈರುಹಾಜರಿ ಕಂಡು ಗರಂ ಆದರು. ಈ ಬಗ್ಗೆ ಸ್ಥಳದಲ್ಲಿದ್ದ ಕೆಲ ಅಧಿಕಾರಿಗಳಿಂದ ಮಾಹಿತಿ ಪಡೆದ ಮೇಯರ್, ಬಿಬಿಎಂಪಿ ನೋಟಿಸ್​ಗೆ​ ಕ್ಯಾರೆ ಅನ್ನದ ಮನೆ ಮಾಲೀಕನ ವಿರುದ್ಧ ದೂರು ದಾಖಲಿಸುವಂತೆ ಆದೇಶಿಸಿದರು. ಅಲ್ಲದೇ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧವೂ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.

Intro:ಬಿಬಿಎಂಪಿ ಅಧಿಕಾರಿಗಳು, ಮನೆ ಮಾಲೀಕನ ಬೇಜವಾಬ್ದಾರಿಗೆ ಕೂಲಿ ಕಾರ್ಮಿಕ ಆಸ್ಪತ್ರೆ ಪಾಲು!

ಬೆಂಗಳೂರು- ತುತ್ತಿನ ಚೀಲ ತುಂಬಿಸೋಕೆ ದೂರದೂರಿಂದ ಬಂದಿದ್ದ ಕೂಲಿ ಕಾರ್ಮಿಕ, ಮನೆ ಮಾಲೀಕನ ಬೇಜವಾಬ್ದಾರಿಯಿಂದ ಪ್ರಾಣಕ್ಕೇ ಕುತ್ತು ತಂದುಕೊಂಡು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ..
ಹೌದು ಮನೆ ಮಾಲೀಕ, ಕೆಪಿಟಿಸಿಎಲ್ ಹಾಗೂ, ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಮಿಳುನಾಡಿನ ಸತೀಶ್ ಎಂಬ ಯುವಕ ಆಸ್ಪತ್ರೆ ಪಾಲಾಗಿದ್ದಾನೆ.
ನಗರದಲ್ಲಿ ಕಳೆದ ಎರಡು ತಿಂಗಳಿನಿಂದ ವಿದ್ಯುತ್ ಅವಗಡಗಳು ಸಂಭವಿಸುತ್ತಾನೆ ಇದೆ. ನಿನ್ನೆ ಸಂಜೆ ಏಳು ಗಂಟೆ ಸುಮಾರಿಗೆ ನಿರ್ಮಾಣ ಹಂತದ ಬಿಲ್ಡಿಂಗ್ ಮೇಲೆ ಕೆಲಸ ಮಾಡುವ ವೇಳೆ ಮನೆ ಮೇಲೆ ಹಾದು ಹೋಗಿದ್ದ ಹೈಟೆನ್ಷನ್ ವೈರ್ ನ ಪವರ್ ತಗುಲಿ ತಮಿಳುನಾಡಿನ ಚೆಂಗ್ಗಮ್ ಮೂಲದ ಬಾರ್ ಬೆಂಡರ್ ಸತೀಶ್ ಸ್ಥಳದಲ್ಲೇ ಬಿದ್ದಿದ್ದಾನೆ. ದೇಹ 70 ರಷ್ಟು ಸುಟ್ಟು ಹೋಗಿದ್ದರಿಂದ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ..ವೈದ್ಯರು ಇನ್ನೂ ಎರಡು ದಿನಗಳ ಕಾಲ ಏನು ಹೇಳೋದಕ್ಕೆ ಆಗೋದಿಲ್ಲ ಅಂದಿದ್ದಾರಂತೆ..
ಈ ವಿಚಾರ ತಿಳಿಯುತ್ತಿದ್ದ ಹಾಗೇ ಇಂದು ಸ್ಥಳಕ್ಕೆ ಮೇಯರ್ ಗಂಗಾಂಬಿಕೆ ಭೇಟಿ ನೀಡಿದ್ರು ಆದ್ರೆ ಸ್ಥಳದಲ್ಲಿ ಬಿಬಿಎಂಪಿಯ ಯಾವೊಬ್ಬ ಅಧಿಕಾರಿಗಳು ಕೂಡ ಹಾಜರ್ ಇರ್ಲಿಲ್ಲ .. ಕೆಪಿಟಿಸಿಎಲ್ ರಾಜಾಜಿನಗರದ ಅಧಿಕಾರಿಗಳು ಹಾಜರ್ ಇದ್ರು ಮೇಯರ್ ಕೆಪಿಟಿಸಿಎಲ್ ನ ಹೈಟೆನ್ಷನ್ ವೈರ್ ಹಾದು ಹೋಗಿದೆ, ನೀವು ಇಲ್ಲಿ ಮನೆ ಕಟ್ಟಲು ಹೇಗೆ ವಿದ್ಯುತ್ ಸಂಪರ್ಕ ನೀಡಿದ್ದೀರಾ ಅಂತ ಗರಂ ಆದ್ರು. ಈ ವೇಳೆ ಕೆಪಿಟಿಸಿಎಲ್ ನ ಅಧಿಕಾರಿಗಳು ಮೇಡಂ ನಾವು ಈಗಾಗಲೇ ಮನೆ ಮಾಲೀಕ ಜಯರಾಜುವಿಗೆ ನೋಟಿಸ್ ನೀಡಿದ್ದೀವಿ ಆದ್ರೂ ಕ್ಯಾರೆ ಅನ್ನದೆ ಮನೆ ಕಟ್ಟಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಇದನ್ನು ತಡೆಯಬೇಕಾಗಿತ್ತು ಅಂದ್ರು. ಇದರಿಂದ ಕೆರಳಿದ ಮೇಯರ್ ಎಲ್ರಿ ಇನ್ನೂ ಬಿಬಿಎಂಪಿ ಅಧಿಕಾರಿಗಳು ಬಂದಿಲ್ವ ಅಂತ ರೇಗಿದ್ರು.
ಹೀಗಾಗಿ ಮನೆ ಮಾಲೀಕನ ವಿರುದ್ಧ ಕೇಸ್ ದಾಖಲಿಸುವಂತೆ ಆದೇಶ ಮಾಡ್ತಿನಿ, ನಿರ್ಲಕ್ಷ್ಯ ತೋರಿರುವ ನಮ್ಮ ಬಿಬಿಎಂಪಿ ಅಧಿಕಾರಿಗಳ ವಿರುದ್ಧವು ಕ್ರಮ ಕೈಗೊಳ್ತಿನಿ ಅಂತ ಮೇಯರ್ ಗಂಗಾಂಬಿಕೆ ಗರಂ ಆದ್ರು.
ಒಟ್ನಲ್ಲಿ ಹೈಟೆನ್ಷನ್ ವೈರ್ ಕೆಳಗೆ ಅನಧಿಕೃತವಾಗಿ ಮನೆ ಕಟ್ಟಲು ಮುಂದಾಗಿದ್ದ, ಮನೆ ಮಾಲೀಕನ ತಪ್ಪೋ, ಕೆಪಿಟಿಸಿಎಲ್ ಲೈನ್ ಕೆಳಗೆ ಮನೆ ನಿರ್ಮಾಣ ಮಾಡುತ್ತಿದ್ರು ಸುಮ್ಮನಿದ್ದ ಕೆಪಿಟಿಸಿಎಲ್ನನವ್ರ ತಪ್ಪೋ, ಇಲ್ಲ ಎಲ್ಲಾ ಗೊತ್ತಿದ್ರು ಅನಧಿಕೃತ ಬಿಲ್ಡಿಂಗ್ ಕಾಮಗಾರಿಯನ್ನು ತಡೆಯದೆ ನಿರ್ಲಕ್ಷ್ಯವಹಿಸಿದ ಬಿಬಿಎಂಪಿ ಅಧಿಕಾರಿಗಳ ತಪ್ಪೋ ಗೊತ್ತಿಲ್ಲ ಆದ್ರೆ ಬಡ ಕೂಲಿ ಕಾರ್ಮಿಕ ಪ್ರಾಣಕ್ಕಾಗಿ ಹೋರಾಡುತ್ತಿದ್ದಾನೆ.
Visual sent through mojo

ಸೌಮ್ಯಶ್ರೀ
KN_BNG_01_28_bbmp_Kptcl_script_sowmya_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.