ETV Bharat / state

'ಬರ'ದ ಬರೆ ಮಧ್ಯೆ ರಾಜ್ಯಕ್ಕೆ ಮತ್ತೊಂದು ಕಂಟಕ: ಕೇಂದ್ರ ಸಹಾಯಾನುದಾನ ಬಿಡುಗಡೆಯಲ್ಲಿ ಭಾರಿ ಕುಸಿತ! - ಬರ ಪರಿಹಾರ

ರಾಜ್ಯ ಕಾಂಗ್ರೆಸ್​ ಸರ್ಕಾರಕ್ಕೆ ಕೇಂದ್ರದ ಸಹಾಯಾನುದಾನ ಬಿಡುಗಡೆಯಾಗಿದ್ದು ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಬಿಡುಗಡೆಯಾದ ಕೇಂದ್ರದ ಸಹಾಯಾನುದಾನ ಮೊತ್ತದಲ್ಲಿ ಶೇ 63ರಷ್ಟು ಕುಸಿತವಾಗಿದೆ.

ಸಿದ್ದರಾಮಯ್ಯ, ನರೇಂದ್ರ ಮೋದಿ
ಸಿದ್ದರಾಮಯ್ಯ, ನರೇಂದ್ರ ಮೋದಿ
author img

By ETV Bharat Karnataka Team

Published : Nov 2, 2023, 8:25 PM IST

ಬೆಂಗಳೂರು: ಕಾಂಗ್ರೆಸ್​ ಸರ್ಕಾರ ಬಂದ 6 ತಿಂಗಳ ಅವಧಿಯಲ್ಲಿ ಕೇಂದ್ರದ ಸಹಾಯಾನುದಾನ ಬಿಡುಗಡೆಯಲ್ಲಿ ಭಾರೀ ಕುಸಿತ ಕಂಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಆಗಿದೆ.‌ ಕಾಂಗ್ರೆಸ್ ಸರ್ಕಾರಕ್ಕೆ ಈ ಬಾರಿ ಬರದ ಬರೆ ಅಪ್ಪಳಿಸಿದೆ. ಹೀಗಾಗಿ ತನ್ನ ಐದು ತಿಂಗಳ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಬಹುವಾಗಿ ಹಣಕಾಸು ನಿರ್ವಹಣೆಗೆ ಹೆಚ್ಚಿನ ಒತ್ತು ಕೊಡಬೇಕಾಯಿತು. ಆದಾಯ ಹೆಚ್ಚಿಸಲು ಅನೇಕ ಮಾರ್ಗೋಪಾಯಗಳ ಮೂಲಕ ಕಾಂಗ್ರೆಸ್ ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ.

ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಡಬಲ್ ಇಂಜಿನ್ ಸರ್ಕಾರ ಇದ್ದರೆ ರಾಜ್ಯದಲ್ಲಿ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಬಿಜೆಪಿ ಚುನಾವಣೆ ವೇಳೆ ವ್ಯಾಖ್ಯಾನಿಸುತ್ತಿತ್ತು. ಅದಕ್ಕೆ ಪೂರಕ ಎಂಬಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕೇಂದ್ರದಿಂದ ಬರುವ ಸಹಾಯಾನುದಾನಕ್ಕೆ ಬ್ರೇಕ್ ಬಿದ್ದಿದೆಯಾ ಎಂಬ ಅನುಮಾನ ಮೂಡಿದೆ. ಈಗಾಗಾಲೇ ಬರದ ಸಂಕಷ್ಟವನ್ನು ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಕೇಂದ್ರದ ಸಹಾಯಾನುದಾನ ಬಿಡುಗಡೆಯಾಗದಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಕೇಂದ್ರದ ಸಹಾಯಾನುದಾನ ಬಿಡುಗಡೆ ಶೇ63ರಷ್ಟು ಕುಸಿತ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​​ ಸರ್ಕಾರ ಬಂದು ಐದು ತಿಂಗಳು ಆಗಿದೆ. ಆದರೆ, ಇತ್ತ ಕೇಂದ್ರದಿಂದ ರಾಜ್ಯಕ್ಕೆ ಬರುವ ಸಹಾಯಾನುದಾನ ಬಿಡುಗಡೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗಣನೀಯ ಕುಸಿತ ಕಂಡಿದೆ. ಆರ್ಥಿಕ ಇಲಾಖೆ ನೀಡಿರುವ ಅಂಕಿ - ಅಂಶದಂತೆ ಈವರೆಗೆ ರಾಜ್ಯಕ್ಕೆ ಬಿಡುಗಡೆಯಾಗಿಯಾಗಿರುವ ಸಹಾಯನುದಾನದಲ್ಲಿ ಭಾರೀ ಕುಸಿತವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಿಡುಗಡೆಯಾದ ಕೇಂದ್ರದ ಸಹಾಯಾನುದಾನ ಮೊತ್ತದಲ್ಲಿ ಶೇ 63ರಷ್ಟು ಕುಸಿತವಾಗಿದೆ.

ಈ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರದ ಸಹಾಯಾನುದಾನ ರೂಪದಲ್ಲಿ 15,355 ಕೋಟಿ ರೂ. ಹಂಚಿಕೆಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಕೇಂದ್ರದ ಸಹಾಯಾನುದಾನ ಸುಮಾರು 22,281 ಕೋಟಿ ರೂ. ಹಂಚಿಕೆಯಾಗಿತ್ತು. ಈ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿರುವ ಕೇಂದ್ರ ಸಹಾಯಾನುದಾನದಲ್ಲಿ ಸುಮಾರು 6,926 ಕೋಟಿ ರೂ. ಕುಸಿತವಾಗಿದೆ. ಅದರ ಜೊತೆಗೆ ರಾಜ್ಯಕ್ಕೆ ಈ ಆರ್ಥಿಕ ವರ್ಷದಲ್ಲಿ ಒಟ್ಟು ಹಂಚಿಕೆಯಾದ ಕೇಂದ್ರ ಸಹಾಯಾನುದಾನದಲ್ಲಿ ಈವರೆಗೆ ಬಿಡುಗಡೆಯಾದ ಮೊತ್ತ ಅತ್ಯಲ್ಪವಾಗಿದೆ.

ಈ ವರ್ಷ ಆರು ತಿಂಗಳಲ್ಲಿ ರಾಜ್ಯದ ಪಾಲಿನ ಕೇಂದ್ರ ಸಹಾಯಾನುದಾನದ ಪೈಕಿ 5,179.10 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಅದೇ ಕಳೆದ ಆರ್ಥಿಕ ವರ್ಷದ ಆರು ತಿಂಗಳಲ್ಲಿ ರಾಜ್ಯಕ್ಕೆ 14,154.39 ಕೋಟಿ ರೂ. ಕೇಂದ್ರದ ಸಹಾಯಾನುದಾನ ಬಿಡುಗಡೆಯಾಗಿತ್ತು. ಕಳೆದ ಬಾರಿ ಹಂಚಿಕೆಯಾದ 22,281 ಕೋಟಿ ರೂ. ಕೇಂದ್ರದ ಸಹಾಯಾನುದಾನದ ಪೈಕಿ ಆರು ತಿಂಗಳಲ್ಲಿ ಒಟ್ಟು 63.53% ಮೊತ್ತ ಬಿಡುಗಡೆಯಾಗಿತ್ತು. ಅದೇ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ ಹಂಚಿಕೆಯಾದ 15,355 ಕೋಟಿ ರೂ. ಕೇಂದ್ರ ಸಹಾಯಾನುದಾನ ಮೊತ್ತದ ಪೈಕಿ ಆರು ತಿಂಗಳಲ್ಲಿ ಕೇವಲ 33.73% ಮಾತ್ರ ಬಿಡುಗಡೆಯಾಗಿದೆ ಎಂದು ಆರ್ಥಿಕ ಇಲಾಖೆ ನೀಡಿದ ಅಂಕಿ - ಅಂಶದಲ್ಲಿ ಸ್ಪಷ್ಟವಾಗಿದೆ.

ಮಾಸಿಕವಾರು ಕೇಂದ್ರ ಸಹಾಯಾನುದಾನ ಬಿಡುಗಡೆ: ಹಣಕಾಸು ಇಲಾಖೆ ನೀಡಿರುವ ಅಂಕಿ - ಅಂಶದ ಪ್ರಕಾರ, ಪ್ರಸಕ್ತ ಆರ್ಥಿಕ ವರ್ಷದ ಮೊದಲ ಮಾಸ ಎಪ್ರಿಲ್​ನಲ್ಲಿ ಯಾವುದೇ ಕೇಂದ್ರ ಸರ್ಕಾರದಿಂದ ಸಹಾಯಾನುದಾನ ಬಿಡುಗಡೆಯಾಗಿರಲಿಲ್ಲ. ಮೇ ತಿಂಗಳಲ್ಲಿ ರಾಜ್ಯಕ್ಕೆ 388 ಕೋಟಿ ರೂ. ಮೊದಲ ಕೇಂದ್ರದ ಸಹಾಯಾನುದಾನ ಮೊತ್ತವನ್ನು ಬಿಡುಗಡೆ ಮಾಡಲಾಯಿತು.

ಇನ್ನು ಜೂನ್ ತಿಂಗಳಲ್ಲಿ 42.69 ಕೋಟಿ ರೂ. ಕೇಂದ್ರದ ಸಹಾಯಾನುದಾನ ಬಿಡುಗಡೆಯಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಜೂನ್​ವರೆಗೆ ಒಟ್ಟು ಬಿಡುಗಡೆಯಾದ ಕೇಂದ್ರದ ಅನುದಾನದಲ್ಲಿ 96% ಕುಸಿತ ಕಂಡಿತ್ತು. ಇನ್ನು ಜುಲೈ ತಿಂಗಳಲ್ಲಿ ರಾಜ್ಯಕ್ಕೆ 1,129 ಕೋಟಿ ರೂ. ಬಿಡುಗಡೆಯಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಜುಲೈವರೆಗೆ ಒಟ್ಟು ಕೇಂದ್ರದ ಸಹಾಯಾನುದಾನ ಬಿಡುಗಡೆಯಲ್ಲಿ 86% ಕುಸಿತವಾಗಿದೆ.

ಆಗಸ್ಟ್ ತಿಂಗಳಲ್ಲಿ 1,549 ಕೋಟಿ ರೂ. ಕೇಂದ್ರದ ಸಹಾಯಾನುದಾನ ಮೊತ್ತ ಬಿಡುಗಡೆಯಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಆಗಸ್ಟ್​ವರೆಗೆ ಒಟ್ಟು ಬಿಡುಗಡೆಯಾದ ಸಹಾಯಾನುದಾದಲ್ಲಿ 75%ದಷ್ಟು ಕುಸಿತವಾಗಿದೆ. ಇನ್ನು ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯಕ್ಕೆ 2,070 ಕೋಟಿ ರೂ‌. ಕೇಂದ್ರದ ಸಹಾಯಾನುದಾನ ಬಿಡುಗಡೆಯಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಜುಲೈವರೆಗೆ ಒಟ್ಟು ಕೇಂದ್ರದ ಸಹಾಯಾನುದಾನ ಬಿಡುಗಡೆಯಲ್ಲಿ 63.41% ಕುಸಿತವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಬಂದಾಗಿದ್ದ ಅಧಿಕಾರಕ್ಕಾಗಿ ಹೊಡೆದಾಟ ನಡೆದೇ ಇದೆ : ಶಾಸಕ ಅರವಿಂದ ಬೆಲ್ಲದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.