ಆನೇಕಲ್: ಕೊರೊನಾ, ಲಾಕ್ಡೌನ್ ನಡುವೆ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಸ ಅತಿಥಿಯ ಆಗಮನವಾಗಿದೆ.
ಮೈಸೂರು ಜಯಚಾಮರಾಜೇಂದ್ರ ಮೃಗಾಲಯದಿಂದ ಒಂದು ವರ್ಷದ ಯಧುನಂದನ್ ಎಂಬ ಗಂಡು ಜಿರಾಫೆ, ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕರೆದುಕೊಂಡು ಬರಲಾಗಿದೆ. ಈ ಮೂಲಕ ಉದ್ಯಾನದಲ್ಲಿ ಎರಡು ವರ್ಷದಿಂದ ಒಂಟಿಯಾಗಿದ್ದ ಗೌರಿ ಎಂಬ ಜಿರಾಫೆಗೆ ಇದೀಗ ಬಂದ ಗಂಡು ಜಿರಾಫೆ ಜೊತೆಯಾಗಿದೆ.
ಇಂದು ಉದ್ಯಾನದಲ್ಲಿ ಎರಡು ಜಿರಾಫೆಗಳು ನಲಿದಾಡುತ್ತಿದ್ದ ದೃಶ್ಯಗಳನ್ನು ಕಂಡು ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.