ಬೆಂಗಳೂರು: ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವಿಗೀಡಾದ ಮಹಿಳೆಯ ಮೆದುಳು ನಿಷ್ಕ್ರಿಯಗೊಂಡಿದ್ದು, ಕುಟುಂಬದವರು ಅಂಗಾಂಗಳ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದರು.
ನಗರದಲ್ಲಿ ಬೈಕ್ ಅಪಘಾತದಲ್ಲಿ ಸುಮಾರು 36 ವರ್ಷದ ಮಹಿಳೆಯ ತಲೆಗೆ ತೀವ್ರವಾಗಿ ಗಾಯವಾಗಿತ್ತು. ಕೂಡಲೇ ಆಕೆಯನ್ನು ಬನ್ನೇರುಘಟ್ಟ ಅಪೊಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಈ ಘಟನೆಯಲ್ಲಿ ಮಹಿಳೆಯ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿದ್ದು ಆಕೆಯ ಅಂಗಾಂಗ ದಾನಕ್ಕೆ ಕುಟುಂಬದವರು ಮುಂದಾಗಿದ್ದರು. ಹೀಗಾಗಿ ಎಂ.ಎಸ್ ರಾಮಯ್ಯ ಹಾರ್ಟ್ ಸೆಂಟರ್‌ಗೆ ಅಂಗಾಂಗಗಳನ್ನು ರವಾನೆ ಮಾಡಲಾಗಿತ್ತು.
ಈ ಮಹಿಳೆಯ ಹೃದಯವನ್ನು ಆಂಧ್ರದ 38 ವರ್ಷದ ಮಹಿಳೆಗೆ ವೈದ್ಯರು ಹೃದಯ ಕಸಿ ಮಾಡಲಾಗಿದೆ. ಈ ಮೂಲಕ ಎಂಎಸ್ ರಾಮಯ್ಯ ಹಾರ್ಟ್ ಸೆಂಟರ್ 35ನೇ ಹೃದಯ ಕಸಿ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಆಂಧ್ರದ ಮಹಿಳೆಗೆ ಕರುನಾಡ ಮಹಿಳೆಯ ಹೃದಯ ಕಸಿ: ಶಸ್ತ್ರಚಿಕಿತ್ಸೆಗೆ ರಾಮಯ್ಯ ಆಸ್ಪತ್ರೆ ವೈದ್ಯರ ಸಿದ್ಧತೆ
ಇತ್ತಿಚೆಗಷ್ಟೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಕುಟುಂಬಸ್ಥರು ಅವರ ಅಂಗಾಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದರು. ಅವರ ಕಾರ್ಯ ಈಗ ಅನೇಕರಿಗೆ ಮಾದರಿಯಾಗಿದೆ.