ETV Bharat / state

ಅನೈತಿಕ ಸಂಬಂಧಕ್ಕೆ ಉತ್ತೇಜಿಸುತ್ತಿದ್ದ ಪತಿಯ ಸ್ನೇಹಿತ.. ಗಂಡನ ಜತೆಗೆ ಸೇರಿ ಕಾಮುಕನ ಕಥೆ ಮುಗಿಸಿದಳು ನಾರಿ - ಬೆಂಗಳೂರು

ಸ್ನೇಹಿತ ಅಂತಾ ಮನೆಯೊಳಗೆ ಬಿಟ್ಕೊಂಡಿದ್ದರು. ಆದರೆ, ಆತ ಪಾಪದ ಕೆಲಸಕ್ಕೆ ಮುಂದಾಗಿದ್ದ. ತನ್ನ ಪತ್ನಿಯನ್ನೇ ಆತ ಅನೈತಿಕ ಸಂಬಂಧಕ್ಕಾಗಿ ಉತ್ತೇಜಿಸುತ್ತಿದ್ದನಂತೆ. ಇದರಿಂದ ಕುಪಿತಗೊಂಡ ಹೆಂಡ್ತಿ ಮತ್ತು ಗಂಡ ಸೇರಿ ಸ್ನೇಹಿತನ ಕಥೆಯನ್ನೇ ಮುಗಿಸಿದ್ದಾರೆ.

ಸ್ನೇಹಿತನ್ನು ಕೊಲೆ ಮಾಡಿದ ದಂಪತಿ
author img

By

Published : Apr 14, 2019, 7:02 PM IST

ಬೆಂಗಳೂರು: ಗಂಡ-ಹೆಂಡ್ತಿಗೆ ಆತ ಹತ್ತಿರದವನಾಗಿದ್ದ. ಸ್ನೇಹಿತನಲ್ಲವಾ ಅಂತಾ ದಂಪತಿ ಮನೆಯೊಳಗೂ ಬಿಟ್ಕೊಂಡಿದ್ದರು. ಸ್ನೇಹದ ವಿಶ್ವಾಸಕ್ಕೆ ಆತ ಕೊಳ್ಳಿ ಇಡುವ ಕೆಲಸ ಮಾಡ್ತಿದ್ದ. ನಿಜ ಸ್ನೇಹಿತನಾಗಿದ್ದುಕೊಂಡು ಸ್ನೇಹಿತನ ಹೆಂಡ್ತಿಯನ್ನೇ ಅನೈತಿಕ ಸಂಬಂಧಕ್ಕೆ ಪ್ರೇರೇಪಿಸುಲು ಯತ್ನಿಸುತ್ತಿದ್ದ. ಇದರಿಂದ ಕುಪಿತಗೊಂಡ ದಂಪತಿ ಆ ಸ್ನೇಹಿತ ಹುಟ್ಟಿಯಿಲ್ಲ ಅಂತಾ ಆತನ ಕಥೆಯನ್ನ ಇಲ್ಲವಾಗಿಸಿದ್ದಾರೆ. ರಾಜಗೋಪಾಲನಗರ ಪೊಲೀಸರು ಈಗ ಕೊಲೆ ಆರೋಪಿಗಳನ್ನ ಬಂಧಿಸಿದ್ದಾರೆ.

ರಾಜಗೋಪಾಲನಗರದ ಲವಕುಶ ನಗರದ ನಿವಾಸಿಗಳಾದ ಮೋಹನ್ ಹಾಗೂ ರಮ್ಯಾ ಬಂಧಿತ ದಂಪತಿ. ಮಧು ಕೊಲೆಯಾದ ವ್ಯಕ್ತಿ. ನಿನ್ನೆ ಆರೋಪಿ ಮೋಹನ್ ಮನೆಯಲ್ಲಿ ಮಧುನನ್ನು ಕಬ್ಬಿಣದ ರಾಡ್ ಮೂಲಕ ಹೊಡೆದು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಮಧು ಹಾಗೂ ಮೋಹನ್ ಹಾಸನದ ಹೊಳೇನರಸಿಪುರಪುರದ ಗೋಪನಹಳ್ಳಿಯವರು. ಇಬ್ಬರೂ ಸ್ನೇಹಿತರಾಗಿದ್ದರು. ಮೃತ ಮಧು ಕ್ಯಾಬ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಇಬ್ಬರು ಒಂದೇ ಊರಿನವರಾಗಿದ್ದರಿಂದ ಆಗಾಗ ಮೋಹನ್ ಮನೆಗೆ ಬಂದು ಹೋಗುತ್ತಿದ್ದ. ಕಳೆದ ಎರಡ್ಮೂರು ತಿಂಗಳಿನಿಂದ ಸ್ನೇಹಿತನ ಹೆಂಡತಿ ರಮ್ಯಾಳನ್ನು ಕಂಡು ನಿನ್ನ ಕಂಡರೆ ನನಗಿಷ್ಟ. ನಾನು ಕರೆದ ಕಡೆಗೆಲ್ಲಾ ಬರಬೇಕು. ಇಲ್ಲವಾದರೆ ನಿನ್ನ ಗಂಡನಿಗೆ ನಿನ್ನ ಬಗ್ಗೆ ಕೆಟ್ಟದಾಗಿ ಹೇಳಿ ಮಾರ್ಯಾದೆ ತೆಗೆಯುತ್ತೇನೆ ಎಂದು ಮಧು ಬೆದರಿಸಿದ್ದ. ಈ ಬಗ್ಗೆ ಗಂಡನಿಗೆ ತಿಳಿಸಿದ ರಮ್ಯಾ, ಇಬ್ಬರು ಸೇರಿ ಮಧುಗೆ ಬುದ್ಧಿವಾದ ಹೇಳಿದ್ದರೂ ತನ್ನ ಹಳೆ ಚಾಳಿ ಬಿಟ್ಟಿರಲಿಲ್ಲ. ಈತನಿಗೆ ಗತಿ ಕಾಣಿಸಬೇಕೆಂದು ನಿರ್ಧರಿಸಿಕೊಂಡ ದಂಪತಿ ಮನೆಗೆ ಕರೆಯಿಸಿಕೊಂಡು ಇಬ್ಬರೂ ಸೇರಿ ಕಬ್ಬಿಣ್ಣದ ರಾಡ್​ನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

Intro:Body:ಪತ್ನಿಯನ್ನು ಅನೈತಿಕ ಸಂಬಂಧಕ್ಕಾಗಿ ಪೀಡಿಸುತ್ತಿದ್ದ ಸ್ನೇಹಿತನ್ನು ಕೊಲೆ ಮಾಡಿದ ದಂಪತಿ

ಬೆಂಗಳೂರು:
ಪತ್ನಿಯನ್ನು ಅನೈತಿಕ ಸಂಬಂಧಕ್ಕಾಗಿ ಪೀಡಿಸುತ್ತಿದ್ದ ಸ್ನೇಹಿತನನ್ನು ಕೊಲೆ ಮಾಡಿದ್ದ ದಂಪತಿಯನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.
ರಾಜಗೋಪಾಲನಗರದ ಲವಕುಶ ನಗರದ ನಿವಾಸಿಯಾಗಿದ್ದ ಮೋಹನ್ ಹಾಗೂ ರಮ್ಯಾ ಬಂಧಿತ ದಂಪತಿಗಳು.  ಮಧು ಕೊಲೆಯಾದ ವ್ಯಕ್ತಿ.  ನಿನ್ನೆ ಆರೋಪಿ ಮೋಹನ್ ಮನೆಯಲ್ಲಿ  ಮಧುನನ್ನು ಕಬ್ಬಿಣದ ರಾಡ್ ಮೂಲಕ ಹೊಡೆದು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಮಧು ಹಾಗೂ ಮೋಹನ್ ಹಾಸನದ ಹೊಳೇ ನರಸಿಪುರಪುರದ ಗೋಪನಹಳ್ಳಿದವರಾಗಿದ್ದು, ಇಬ್ಬರು ಸ್ನೇಹಿತರಾಗಿದ್ದರು. ಮೃತ ಮಧು ಕ್ಯಾಬ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಇಬ್ಬರು ಒಂದೇ ಊರಿನವರಾಗಿದ್ದರಿಂದ ಆಗಾಗ ಮೋಹನ್ ಮನೆಗೆ ಬಂದು ಹೋಗುತ್ತಿದ್ದ. ಕಳೆದ ಎರಡ್ಮೂರು ತಿಂಗಳಿನಿಂದ ಸ್ನೇಹಿತನ ಹೆಂಡತಿ ರಮ್ಯಾಳನ್ನು ಕಂಡು ನಿನ್ನ ಕಂಡರೆ ನನಗಿಷ್ಟ. ನಾನು ಕರೆದ ಕಡೆಯಲ್ಲೇಲಾ ಬರಬೇಕು. ಇಲ್ಲವಾದರೆ ನಿನ್ನ ಗಂಡನಿಗೆ ನಿನ್ನ ಬಗ್ಗೆ ಕೆಟ್ಟದಾಗಿ ಹೇಳಿ ಮಾರ್ಯಾದೆ ತೆಗೆಯುತ್ತೇನೆ ಎಂದು ಮಧು ಬೆದರಿಸಿದ್ದ. ಈ ಬಗ್ಗೆ ಗಂಡನಿಗೆ ತಿಳಿಸಿದ ರಮ್ಯಾ, ಇಬ್ಬರು ಸೇರಿ ಮಧುಗೆ ಬುದ್ಧಿವಾದ ಹೇಳಿದ್ದರೂ ತಮ್ಮ ಹಳೆ ಚಾಳಿ ಬಿಟ್ಟಿರಲಿಲ್ಲ. ಈತನಿಗೆ ಗತಿ ಕಾಣಿಸಬೇಕೆಂದು ನಿರ್ಧರಿಸಿಕೊಂಡ ದಂಪತಿ ಮನೆಗೆ ಕರೆಯಿಸಿಕೊಂಡು ಇಬ್ಬರು ಸೇರಿ ಕಬ್ಬಿಣ್ಣದ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

Conclusion:Bharath
ETV Bharat Logo

Copyright © 2024 Ushodaya Enterprises Pvt. Ltd., All Rights Reserved.