ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿಮ್ ಹ್ಯಾಕ್ ಮಾಡಿ ಅಕೌಂಟ್ನಿಂದ 45.7 ಲಕ್ಷ ಹಣ ಡ್ರಾ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಜಗದೀಶ್ ಹಾಗು ಪತ್ನಿ ಮಂಗಳ ಮೋಸ ಹೋಗಿರುವ ದಂಪತಿ.
ಕಳೆದ ಶನಿವಾರ ಜಗದೀಶ್ ಸಿಮ್ ವರ್ಕ್ ಆಗುತ್ತಿರಲಿಲ್ಲ. ಹೀಗಾಗಿ ಏರ್ಟೆಲ್ ಸಂಸ್ಥೆಗೆ ಕರೆ ಮಾಡಿದ್ದರು. ಕರೆ ಮಾಡಿ ಮಾತಾನಾಡಿದ ನಂತ್ರ ಕರೆ ಕಟ್ ಆಗಿ ಕರೆಂಟ್ ಅಕೌಂಟ್ನಿಂದ 45.7 ಲಕ್ಷ ಹಣ ಹಂತ ಹಂತವಾಗಿ ಮೂರು ಬಾರಿ ಟ್ರಾನ್ಸ್ಯಾಕ್ಷನ್ ಆಗಿದೆ. ಕೂಡಲೇ ದಂಪತಿ ಎಚ್ಚೆತ್ತುಕೊಂಡಿದ್ದಾರೆ.
ಅಸಲಿಗೆ ಸಿಮ್ ಹ್ಯಾಕ್ ಆಗಿದ್ದು ಹೇಗೆ..
ಕಳೆದ ಶನಿವಾರ ಜಗದೀಶ್ ಸಿಮ್ ವರ್ಕ್ ಆಗದ ಕಾರಣ ಕಸ್ಟಮರ್ ಕೇರ್ಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಈ ವೇಳೆ ಹೊಸ ಸಿಮ್ ತೆಗೆದುಕೊಳ್ಳಲು ಕಸ್ಟಮರ್ ಕೇರ್ ಅವರು ತಿಳಿಸಿದ್ದಾರೆ. ಆದರೆ ಜಗದೀಶ್ ವ್ಯಾಪಾರಸ್ಥರಾಗಿದ್ದು, ಕಂಪನಿಗೆ ಸಂಬಂಧಪಟ್ಟ ದಾಖಲೆ ಇದ್ದ ಕಾರಣ ಅದೇ ನಂಬರ್ನ ಸಿಮ್ ಕೇಳಿದ್ದರು..
ನಂತ್ರ ಸಿಮ್ ತೆಗೆದುಕೊಂಡ 6 ಗಂಟೆಯಾದರೂ ಆ್ಯಕ್ಟಿವೇಟ್ ಆಗಿರಲಿಲ್ಲ. ಮತ್ತೆ ಕರೆ ಮಾಡಿ ಕಸ್ಟಮರ್ ಕೇರ್ಗೆ ತಿಳಿಸಿದ್ದರು. ಬಳಿಕ ಸಿಮ್ ಆ್ಯಕ್ಟಿವೇಟ್ ಆಗಿತ್ತು. ಸಿಮ್ ಆ್ಯಕ್ಟಿವ್ ಆದ ಕೂಡಲೇ ಬ್ಯಾಂಕ್ ನಂಬರ್ ಸಿಂಕ್ ಮಾಡಲು ಹೋದಾಗ ಪಾಸ್ವರ್ಡ್ ಮತ್ತು ಐಡಿ ಚೇಂಜ್ ಆಗಿದ್ದು, ಆ ಪಾಸ್ವರ್ಡ್ ಕೇವಲ ಮಂಗಳ ಹಾಗೂ ಜಗದೀಶ್ಗೆ ಮಾತ್ರ ತಿಳಿದಿತ್ತು.
ಆದರೆ ಸೈಬರ್ ಖದೀಮರು ಸಿಸ್ಟಮ್ ಮೂಲಕ ಈ ಮೇಲ್ ಹ್ಯಾಕ್ ಮಾಡಿ ಕೆಲ ದಾಖಲೆಗಳನ್ನ ತೆಗೆದುಕೊಂಡು ಹಣ ಲಪಾಟಯಿಸಿದ್ದಾರೆ. ಸದ್ಯ ಸೈಬರ್ ಫ್ರಾಡ್ ಆಧಾರದ ಮೇಲೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.