ಬೆಂಗಳೂರು : ಅಮಾನತಾದ ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ, ಬೆದರಿಕೆ ಹಾಕಿದ ಪ್ರಕರಣದಲ್ಲಿ ಇದೀಗ ಬಂಧಿತರಾಗಿದ್ದಾರೆ. ಈ ಬಂಧಿತ ಆರೋಪಿ ಮುರಿಗೆಪ್ಪ ನಿಂಗಪ್ಪ ಕಂಬಾರ್ ಈ ಹಿಂದೆ ಬೆಳಗಾವಿ ಲೋಕಾಯುಕ್ತ ವಿಂಗ್ನಲ್ಲಿ ಕೆಲಸ ಮಾಡುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರಿಂದ ಹಣಕ್ಕೆ ಬೇಡಿಕೆ ಇಟ್ಟು ಅಮಾನತ್ತಾಗಿದ್ದ ಮುರಿಗೆಪ್ಪ, ಮತ್ತದೆ ಚಾಳಿ ಮುಂದುವರೆಸಿದ್ದಾರೆ.
ಲೋಕಾಯುಕ್ತ ದಾಳಿ ಮಾಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ. ರಾಜ್ಯ ಸರ್ಕಾರದ ಹಲವು ಇಲಾಖೆಯ ಅಧಿಕಾರಿಗಳ ಮೊಬೈಲ್ ನಂಬರ್ ಕಲೆಕ್ಟ್ ಮಾಡಿದ್ದ ಆರೋಪಿ, ಮಹಾರಾಷ್ಟ್ರ ಗಡಿಭಾಗದ ಗ್ರಾಮಗಳಿಗೆ ತೆರಳಿ ದಾಖಲೆ ಪಡೆದು ಸಿಮ್ ಖರೀದಿ ಮಾಡುತ್ತಿದ್ದ. ಇದೇ ಸಿಮ್ನಿಂದ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ದಾಳಿ ಮಾಡುವುದಾಗಿ ಬೆದರಿಕೆ ಹಾಕ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಒಂದು ದಿನಕ್ಕೆ ಐದು ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದ ಎನ್ನಲಾಗ್ತಿದೆ.
ಇದನ್ನೂ ಓದಿ: ಪ್ರಹ್ಲಾದ್ ಜೋಶಿ ಯಾರ ಕಿವಿಗೆ ಹೂ ಮುಡಿಸುತ್ತಿದ್ದಾರೆ?: ದಿನೇಶ್ ಗುಂಡೂರಾವ್ ಪ್ರಶ್ನೆ
ದಾಳಿ ತಪ್ಪಿಸಲು ಅಕೌಂಟ್ಗೆ ಹಣ ಹಾಕುವಂತೆ ಹೇಳ್ತಿದ್ದ. ಇನ್ನೂ ಮುರಿಗೆಪ್ಪ ಮಾತನ್ನು ನಂಬಿ ಕೆಲವರು ದಾಳಿಯಿಂದ ತಪ್ಪಿಸಿಕೊಳ್ಳಲು ಹಣ ಹಾಕುತ್ತಿದ್ದರಂತೆ. ಆರೋಪಿ ಮುರಿಗೆಪ್ಪ ನಿಂಗಪ್ಪ ವಿರುದ್ಧ ಬೆಂಗಳೂರಿನಲ್ಲಿ ಐದು ಪ್ರಕರಣ ದಾಖಲಾಗಿವೆ. ದಾವಣಗೆರೆ, ಚಿತ್ರದುರ್ಗ, ವಿಜಯಪುರದಲ್ಲಿ ಎಫ್ಐಆರ್ ದಾಖಲಾಗಿದೆ. ಬಂಧಿತ ಮತ್ತೊಬ್ಬ ಆರೋಪಿ ರಜನಿಕಾಂತ್ ಮುರಿಗೆಪ್ಪಗೆ ಜೈಲಿನಲ್ಲಿ ಪರಿಚಯವಾಗಿದ್ದು, ಅಕೌಂಟ್ಗೆ ಬಂದ ಹಣವನ್ನು ರಜನಿಕಾಂತ್ ಎಟಿಎಂನಿಂದ ವಿತ್ ಡ್ರಾ ಮಾಡಿಕೊಂಡು ಬರುತ್ತಿದ್ದನಂತೆ. ಸದ್ಯ ಈ ಪ್ರಕರಣವನ್ನ ಎಸಿಬಿ ತನಿಖೆ ನಡೆಸ್ತಿದೆ.