ಬೆಂಗಳೂರು: ನರಗರದ ಹಿಂದೂ ಜಾಗರಣ ವೇದಿಕೆ ವತಿಯಿಂದ ಶ್ರೀರಾಮನ 16 ಅಡಿ ಎತ್ತರದ ಮೂರ್ತಿಯ ಮೆರವಣಿಗೆಯೊಂದಿಗೆ ಶೋಭಾಯಾತ್ರೆ ನಡೆಯಿತು.
ತಾಲೂಕಿನ ಸಹಸ್ರಾರು ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ನಗರದ ಮುಖ್ಯ ರಸ್ತೆಗಳೆಲ್ಲವೂ ಕೇಸರಿಮಯವಾಗಿತ್ತು. ವಿಶ್ವೇಶ್ವರಯ್ಯ ಬಡಾವಣೆಯ ವಿವೇಕಾನಂದ ಶಾಲೆಯ ಮುಂಭಾಗದಿಂದ ಪ್ರಾರಂಭಗೊಂಡ ಮೆರವಣಿಗೆ ಕೆಇಬಿ ಸರ್ಕಲ್, ಹೂ ಮಂಡಿ ಸರ್ಕಲ್, ಮೆಲ್ ಪೇಟೆ, ಬಲೆ ಪೇಟೆ, ಕುರುಬರ ಪೇಟೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬಿಸಿಲಿನ ತಾಪ ನಿವಾರಿಸಲು ಮಾರ್ಗದುದ್ದಕ್ಕೂ ಭಕ್ತರು ಪಾಲ್ಗೊಂಡಿದ್ದ ಸಹಸ್ರಾರು ಯುವಕರಿಗೆ ಮಜ್ಜಿಗೆ , ಪಾನಕ ವಿತರಿಸಲಾಯಿತು.
ನಗರದ ಹಳೆ ಬಸ್ ನಿಲ್ದಾಣದಲ್ಲಿ ಅಲ್ಪಸಂಖ್ಯಾತ ಬಾಂಧವರು ಸಹ ಮಜ್ಜಿಗೆ, ನಿಂಬೆಹಣ್ಣಿನ ಪಾನಕ ನೀಡುವ ಮೂಲಕ ಸೌಹಾರ್ದತೆ ಮೆರೆದರು. ಜೆಸಿ ವೃತ್ತದಲ್ಲಿ ಅನ್ನಸಂತರ್ಪಣೆ ಸಹ ಏರ್ಪಡಿಸಲಾಗಿತ್ತು.
ಜಿಕೆಬಿಎಂಎಸ್ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರದ ತಪಸಿಹಳ್ಳಿಯ ದಿವ್ಯಜ್ಞಾನಾನಂದ ಸ್ವಾಮೀಜಿ, ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ಉತ್ತರ, ದಕ್ಷಿಣ ಪ್ರಾಂತ ಪ್ರಮುಖರಾದ ಜಿ . ಮನಿಯಪ್ಪ, ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು .