ಬೆಂಗಳೂರು: ರಾಜ್ಯದಲ್ಲಿಂದು 944 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಓರ್ವ ಸೋಂಕಿತ ಸಾವಿಗೀಡಾಗಿದ್ದಾರೆ. ರಾಜ್ಯಾದ್ಯಂತ ಇಂದು 29,022 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 944 ಮಂದಿಗೆ ಸೋಂಕು ದೃಢಪಟ್ಟಿದೆ. 670 ಮಂದಿ ವೈರಸ್‌ನಿಂದ ಗುಣಮುಖರಾಗಿದ್ದಾರೆ.
ಸದ್ಯ ರಾಜ್ಯದಲ್ಲಿ ಒಟ್ಟು 7,569 ಸಕ್ರಿಯ ಪ್ರಕರಣಗಳಿವೆ. ಧಾರವಾಡ ಜಿಲ್ಲೆ ಕೋವಿಡ್ಗೆ ಓರ್ವ ಸೋಂಕಿತ ಮೃತರಾಗಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ.3.25, ವಾರದ ಸೋಂಕಿತರ ಪ್ರಮಾಣ ಶೇ.4.35ರಷ್ಟಿದೆ. ಈ ವಾರದ ಸಾವಿನ ಪ್ರಮಾಣ ಶೇ.0.10 ಇದೆ.
ಬೆಂಗಳೂರಿನಲ್ಲಿ ಇಂದು 799 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,19,445 ಕ್ಕೆ ಏರಿಕೆ ಆಗಿದೆ. ಇಂದು 625 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಈವರೆಗೆ ಕೋವಿಡ್ ಸಾವಿನ ಸಂಖ್ಯೆ 16,972 ಇದೆ. ರಾಜಧಾನಿಯಲ್ಲಿ 6,878 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ: ಮತದಾನ ತರಬೇತಿ ಕಾರ್ಯಾಗಾರಕ್ಕೆ ಏಳು ಶಾಸಕರ ಗೈರು: ಮುರ್ಮು ಸಭೆಗೆ ಗೈರಾದವರಿಗೆ ಕಾರಣ ಕೇಳಿದ ಬಿಜೆಪಿ