ಬೆಂಗಳೂರಲ್ಲಿ ಒಂದೇ ದಿನ 9 ಕೊರೊನಾ ಪಾಸಿಟಿವ್ ಕೇಸ್ : ಸೋಂಕಿತರ ಸಂಖ್ಯೆ 85ಕ್ಕೆ ಏರಿಕೆ - Bangalore Corona positive cases
ಬೆಂಗಳೂರು ನಗರದ ಹಾಟ್ಸ್ಪಾಟ್ಗಳ ಸಂಖ್ಯೆ 32 ರಿಂದ 30 ಕ್ಕೆ ಇಳಿಕೆಯಾಗಿದೆ. ಪಶ್ಚಿಮ ವಲಯದಲ್ಲಿ ಒಂದೇ ದಿನ 8 ಕೊರೊನಾ ಪಾಸಿಟಿವ್ ಪ್ರಕರಣಗಳೂ ದಾಖಲಾಗಿವೆ.

ಬೆಂಗಳೂರು: ನಗರದಲ್ಲಿ ಇಂದು ಒಂದೇ ದಿನ ಒಂಬತ್ತು ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 76 ರಿಂದ 85 ಕ್ಕೆ ಏರಿಕೆಯಾಗಿದೆ.

ಇಂದು ಅತಿಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ನಗರದ ಪಶ್ಚಿಮ ವಲಯದಲ್ಲಿ ವರದಿಯಾಗಿವೆ. ಎಂಟು ಕೊರೊನಾ ಸೋಂಕಿತರು ಪಶ್ಚಿಮ ವಿಭಾಗದವರಿದ್ದಾರೆ.
ನಗರದ ಹಾಟ್ಸ್ಪಾಟ್ಗಳ ಸಂಖ್ಯೆ 32 ರಿಂದ 30 ಕ್ಕೆ ಇಳಿಕೆಯಾಗಿದೆ. ಬೆಂಗಳೂರು ಪಶ್ಚಿಮ ವಲಯದ ಸುಭಾಷ್ ನಗರ ಹಾಗೂ ಯಲಹಂಕದ ಥಣಿಸಂದ್ರ ವಾರ್ಡ್ಗಳನ್ನು ಈಗ ಹಾಟ್ ಸ್ಪಾಟ್ ಲಿಸ್ಟ್ ನಿಂದ ಕೈಬಿಟ್ಟಿದ್ದಾರೆ. ಕೊರೊನಾ ಸೋಂಕಿತರು ತಮ್ಮ ವಿಳಾಸ ನೀಡುವಾಗ ಆಗುವ ವ್ಯತ್ಯಾಸದಿಂದ ಹಾಟ್ ಸ್ಪಾಟ್ ಗೆ ಹೆಸರು ಸೇರಿಸಲಾಗಿದ್ದು, ಈಗ ಸರಿಯಾದ ಮಾಹಿತಿಯ ಬಳಿಕ ಮೂವತ್ತು ವಾರ್ಡ್ ಅಂತಿಮಗೊಳಿಸಲಾಗಿದೆ.

ಈ ಹಿಂದೆ ಅತಿಹೆಚ್ಚು ಕೊರೊನಾ ಪಾಸಿಟಿವ್ ವ್ಯಕ್ತಿಗಳು ದಕ್ಷಿಣ ವಲಯದಲ್ಲಿದ್ದರು. ಆದರೆ ಇಂದು ಪಶ್ಚಿಮ ವಲಯದಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತರು ವರದಿಯಾಗಿದ್ದಾರೆ.
- ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ- 85
- ಗುಣಮುಖರಾದವರು- 35
- ಮೃತರ ಸಂಖ್ಯೆ -3
- ಹಾಟ್ಸ್ಪಾಟ್ ವಾರ್ಡ್ಗಳ ಸಂಖ್ಯೆ - 30
- 14 ದಿನಗಳ ಕ್ವಾರಂಟೈನ್ ನಲ್ಲಿ - 50 ಪಾಸಿಟಿವ್
- 14 ರಿಂದ 28 ದಿನದಲ್ಲಿ ಕ್ವಾರಂಟೈನ್ನಲ್ಲಿ- 33 ಪಾಸಿಟಿವ್
- 28 ದಿನಗಳ ಮೇಲ್ಪಟ್ಟು - 2 ಪಾಸಿಟಿವ್ ಪ್ರಕರಣ
- ಫೀವರ್ ಕ್ಲಿನಿಕ್ ಗಳಲ್ಲಿ ಪರೀಕ್ಷೆಗೆ ಒಳಪಟ್ಟವರ ಸಂಖ್ಯೆ- 4,057
- ಲ್ಯಾಬ್ ಪರೀಕ್ಷೆಗೆ ಒಳಪಟ್ಟವರ ಸಂಖ್ಯೆ- 15