ETV Bharat / state

ಇಂಡಿಯಾ, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​​ನಲ್ಲಿ 'ಕಿರಿಯ ಕವಯತ್ರಿ' ದಾಖಲೆ ಬರೆದ 8ನೇ ತರಗತಿ ವಿದ್ಯಾರ್ಥಿನಿ..! - ಕಿರಿಯ ಕವಯಿತ್ರಿ ದಾಖಲೆ ಬರೆದ ಅಮನ

8 ನೇ ತರಗತಿಯ ವಿದ್ಯಾರ್ಥಿನಿ ಅಮನಾ ಕಿರಿಯ ವಯಸ್ಸಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ "ಕಿರಿಯ ಕವಯತ್ರಿ" ಎಂದು ದಾಖಲೆ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​​ನಲ್ಲಿ “ಗ್ರ್ಯಾಂಡ್ ಮಾಸ್ಟರ್” ಎಂದು ದಾಖಲೆಗೆ ಸೇರ್ಪಡೆಯಾಗಿ ಸಾಧನೆ ಮಾಡಿದ್ದಾರೆ.

8th standard student amana creat records in  India book of recors
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
author img

By

Published : Aug 19, 2021, 9:56 PM IST

ಬೆಂಗಳೂರು:'ಬೆಳೆಯುವ ಸಿರಿ ಮೊಳಕೆ'ಯಲ್ಲಿ ಎನ್ನುವಂತೆ ಬಾಲ್ಯದಲ್ಲೇ ಮಕ್ಕಳ ಆಸಕ್ತಿಯನ್ನು ಗುರುತಿಸಿ ಪೋಷಿಸಿದರೆ ಮಕ್ಕಳ ಪ್ರತಿಭೆ ಹೇಗೆ ಅನಾವರಣಗೊಳ್ಳಲಿದೆ ಎನ್ನುವುದಕ್ಕೆ 8ನೇ ತರಗತಿಯ ವಿದ್ಯಾರ್ಥಿನಿ ಅಮನಾ ನಿದರ್ಶನ.

ಕಿರಿಯ ವಯಸ್ಸಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​​ನಲ್ಲಿ "ಕಿರಿಯ ಕವಯತ್ರಿ" ಎಂದು ದಾಖಲೆ ಹಾಗು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​​ನಲ್ಲಿ “ಗ್ರ್ಯಾಂಡ್ ಮಾಸ್ಟರ್” ಎಂದು ದಾಖಲೆಗೆ ಸೇರ್ಪಡೆಯಾಗಿ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾಳೆ ವಿದ್ಯಾರ್ಥಿನಿ ಅಮನಾ.

8th standard student amana creat records in  India book of recors
ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​​ನಲ್ಲಿ ದಾಖಲೆ

ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್​​ನಲ್ಲಿ 8ನೇ ತರಗತಿ ಓದುತ್ತಿರುವ ಅಮನಾ, ಇಲ್ಲಿಯವರೆಗೆ 275 ಕ್ಕೂ ಹೆಚ್ಚು ಕವಿತೆಗಳನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆದಿದ್ದಾಳೆ. ಆಕೆಯ ಮೊದಲ ಕೃತಿ ಪ್ರಕಟಗೊಂಡಿದ್ದು, 2ನೇ ಪುಸ್ತಕ ಪ್ರಕಟವಾಗುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆಕೆಯ ಅನೇಕ ಕವಿತೆಗಳು ಪತ್ರಿಕೆ ಮತ್ತು ವೆಬ್‍ಸೈಟ್‍ಗಳಲ್ಲಿ ಪ್ರಕಟವಾಗಿವೆ. ಕರ್ನಾಟಕದ ವಿದ್ಯಾರ್ಥಿನಿಯೊಬ್ಬಳು ಭಾರತದ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಪ್ರವೇಶ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್:

ಅತ್ಯಂತ ಕಿರಿಯ ಕವಯತ್ರಿ ಎಂಬ ದಾಖಲೆಯನ್ನು ಬೆಂಗಳೂರಿನ ಕು. ಅಮನಾ ಮಾಡಿದ್ದಾರೆ. ಅವರ 61 ಕವನಗಳ 'ಎಕೋಸ್ ಆಫ್ ಸೋಲ್ಫುಲ್ ಪದ್ಯಗಳು' ಪುಸ್ತಕವನ್ನು ಸಪ್ನಾ ಬುಕ್ ಹೌಸ್ ನವೆಂಬರ್ 2020ಕ್ಕೆ ಪ್ರಕಟಿಸಿದ್ದು, ಆಗ ಅವಳ ವಯಸ್ಸು 12 ವರ್ಷ, 5 ತಿಂಗಳು ಮತ್ತು 10 ದಿನಗಳಾಗಿದ್ದು, ಜುಲೈ 26, 2021 ರಂದು ಇದನ್ನು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ "ಕಿರಿಯ ಕವಿಯತ್ರಿ‘’ ಎಂದು ದೃಢಪಡಿಸಲಾಗಿದೆ.

8th standard student amana creat records in  India book of recors
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್

ಗ್ರ್ಯಾಂಡ್ ಮಾಸ್ಟರ್ - ಏಷ್ಯಾ ಬುಕ್ ಆಫ್ ರೆಕಾರ್ಡ್ಸ್:

ಇನ್ನು ಚಿಕ್ಕ ವಯಸ್ಸಿನಲ್ಲಿ ಕವಿತೆಗಳನ್ನು ಬರೆಯುವ ಅತ್ಯುತ್ತಮ ಮಕ್ಕಳಿಗೆ ಗ್ರ್ಯಾಂಡ್ ಮಾಸ್ಟರ್ ಎಂದು ಕರೆಯಲಿದ್ದು, ಗ್ರ್ಯಾಂಡ್ ಮಾಸ್ಟರ್ ಬಿರುದನ್ನು ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿನಿ ಅಮನಾ ಕೆಎಸ್​ಆರ್​ಟಿಸಿ ಚೀಫ್ ಪಬ್ಲಿಕ್ ರಿಲೇಷನ್ ಆಫೀಸರ್ ಡಾ.ಟಿ.ಎಸ್ ಲತಾ ಅವರ ಪುತ್ರಿಯಾಗಿದ್ದು, ಕೇವಲ 13 ವರ್ಷದ ವಯಸ್ಸಿಗೇ ಎರಡು ದಾಖಲೆಗಳನ್ನು ಮುಡಿಗೇರಿಸಿಕೊಂಡಿದ್ದಾಳೆ. ಆಟವಾಡುವ ವಯಸ್ಸಿನಲ್ಲೇ ಸಾಧನೆ ಮಾಡುವ ಹಂಬಲ ತೋರಿದ್ದಾಳೆ. ಲಾಕ್​ಡೌನ್, ಶಾಲೆಗಳು ಬಾಗಿಲು ಮುಚ್ಚಿದ್ದ ಸಮಯದಲ್ಲಿ ಮಗಳ ಆಸಕ್ತಿ ಗುರುತಿಸಿ ಪ್ರೋತ್ಸಾಹ ನೀಡುವ ಮೂಲಕ ಮಗಳ ಸಾಧನೆಗೆ ಹೆಗಲಾಗಿ ನಿಂತಿದ್ದಾರೆ ಅಮನರ ತಾಯಿ ಲತಾ. ಕಿರಿಯ ವಯಸ್ಸಿನಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಹೊರಟ ಅಮನಾಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.