ETV Bharat / state

ಲಾಕ್​ಡೌನ್ ಶಾಲೆ ಬಂದ್ ಅವಧಿಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಳ - Increased Child Marriage at Lockdown

ಬಾಲ್ಯವಿವಾಹ ಪದ್ಧತಿಯನ್ನು ರಾಜ್ಯದಲ್ಲಿ ನಿಷೇಧಿಸಿದ್ದರೂ ಅದರ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಲಾಕ್​ಡೌನ್ ವೇಳೆ ಬಾಲ್ಯ ವಿವಾಹಗಳು ಹೆಚ್ಚಾಗಿರುವುದು ಕಂಡು ಬಂದಿದೆ.

Child marriage
ಬಾಲ್ಯ ವಿವಾಹ
author img

By

Published : Jan 7, 2021, 3:18 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾದಿಂದಾಗಿ ಶಾಲೆಗಳು ಬಂದ್ ಆಗಿ ಹತ್ತು ತಿಂಗಳು ಶಾಲಾ ಬಾಗಿಲು ಮುಚ್ಚಿದ್ದು ಬಾಲ್ಯ ವಿವಾಹಕ್ಕೆ ರಹದಾರಿ ಮಾಡಿಕೊಟ್ಟಂತಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಬಾಲ್ಯ ವಿವಾಹದ ಪ್ರಮಾಣ ಭಾರಿ ಹೆಚ್ಚಳವಾಗಿದೆ. ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

ಶಾಲೆಗಳು ಬಂದ್ ಆದ ತಕ್ಷಣ ಮಕ್ಕಳಿಗೆ ದುಡಿಯುವ ಕೆಲಸ ತೋರಿಸಿದ ಪೋಷಕರು ಬಾಲ ಕಾರ್ಮಿಕರನ್ನಾಗಿ ಮಾಡಿದ್ದು, ನಂತರ ಬಾಲ್ಯ ವಿವಾಹ ಮಾಡಲು ಹೆಚ್ಚಿನ ಉತ್ಸಾಹ ತೋರಿದ್ದಾರೆ. ಬಾಲ್ಯ ವಿವಾಹಕ್ಕೆ ಇರುವ ಸರ್ಕಾರದ ನಿರ್ಬಂಧವನ್ನು ಲೆಕ್ಕಿಸದೆ ಹೆಚ್ಚಿನ ಸಂಖ್ಯೆಯಲ್ಲಿ ಬಾಲ್ಯ ವಿವಾಹ ಮಾಡುವ ಪ್ರಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ.

List
ಬಾಲ್ಯ ವಿವಾಹ ಪ್ರಕರಣಗಳ ಪಟ್ಟಿ

ಫೆಬ್ರವರಿ 2020 ರಿಂದ ಸೆಪ್ಟೆಂಬರ್ 2020 ರವರೆಗಿನ ಅಂಕಿ ಅಂಶದ ಪ್ರಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕಠಿಣ ನಿರ್ಧಾರದ ನಡುವೆಯೂ ಬಾಲ್ಯ ವಿವಾಹ ಮಾಡಿರುವ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿ ನಡೆದಿದೆ. ಆದರೂ ಬಾಲ್ಯ ವಿವಾಹ ತಡೆಯುವಲ್ಲಿ ಇಲಾಖೆ ಬಹುತೇಕ ಯಶಸ್ವಿಯಾಗಿದೆ.

ಓದಿ...ಹಕ್ಕಿ ಜ್ವರದ ಭೀತಿ ಹಿನ್ನೆಲೆ: ಕೇರಳ ಗಡಿಭಾಗದಲ್ಲಿ ಕಟ್ಟೆಚ್ಚರ

ಹೆಚ್ಚು ವಿದ್ಯಾಭ್ಯಾಸ ಇರುವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಾಲ್ಯವಿವಾಹ ನಡೆದಿದೆ ಎನ್ನುವುದು ಅಚ್ಚರಿಯ ಸಂಗತಿ. ಹಾಸನ, ಮೈಸೂರು, ಮಂಡ್ಯದಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳು ನಡೆದ ಬಗ್ಗೆ ವರದಿಯಾಗಿದೆ. ಹಾಸನ-22, ಮೈಸೂರು-22, ಮಂಡ್ಯ ಜಿಲ್ಲೆಯಲ್ಲಿ 20 ಬಾಲ್ಯ ವಿವಾಹವಾಹಗಳು ನಡೆದಿದ್ದು, ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಎಫ್ಐಆರ್ ದಾಖಲಾಗಿವೆ.

ಕೊರೊನಾ ಸಮಯದಲ್ಲಿ 1,824 ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಇಲಾಖೆ ಸಫಲವಾಗಿದ್ದು, ಇದರ ನಡುವೆಯೂ ಒಟ್ಟು 162 ಬಾಲ್ಯ ವಿವಾಹ ನಡೆದಿವೆ. ಬಾಲ್ಯ ವಿವಾಹ ಮಾಡಿದವರ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ಒಟ್ಟು 84 ಎಫ್ಐಆರ್ ದಾಖಲಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.