ಬೆಂಗಳೂರು: ರಾಜ್ಯದಲ್ಲಿಂದು ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಇಂದು ಒಂದೇ ದಿನ 8,061 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಈವರೆಗೆ 1,97,625 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು 5,851 ಹೊಸ ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದರೆ, ಸೋಂಕಿತರ ಸಂಖ್ಯೆ 2,83,665ಕ್ಕೆ ಏರಿಕೆ ಆಗಿದೆ. ಇಂದು ಮತ್ತೆ ಕೋವಿಡ್ಗೆ ಬಲಿಯಾದವರ ಸಂಖ್ಯೆ ಏರಿಕೆ ಕಂಡಿದ್ದು, 130 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 81,211 ಸಕ್ರಿಯ ಪ್ರಕರಣಗಳಿದ್ದು, ಐಸಿಯುನಲ್ಲಿ 406 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂತಾರಾಜ್ಯ ಪ್ರಯಾಣಿಕರಿಗಿದ್ದ ಷರತ್ತುಗಳು ರದ್ದು
ಅಂತಾರಾಜ್ಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ರಾಜ್ಯ ಸರ್ಕಾರ ಹೊರಡಿಸಿದ್ದು, ಕೋವಿಡ್ ಗುಣಲಕ್ಷಣಗಳಿದ್ದರೆ, ಗುಣಲಕ್ಷಣಗಳು ಇಲ್ಲದೇ ಇದ್ದರೆ ಎಂಬ ಎರಡು ಅಂಶಗಳನ್ನ ಸರ್ಕಾರ ಪರಿಗಣಿಸಿದೆ.
1. ಹೊರ ರಾಜ್ಯದಿಂದ ಬಂದ ಪ್ರಯಾಣಿಕರಲ್ಲಿ ಕೋವಿಡ್-19 ರೋಗ ಲಕ್ಷಣಗಳಿಲ್ಲದಿದ್ದರೆ
- 14 ದಿನಗಳ ಕ್ಯಾರೆಂಟೈನ್ ಅಗತ್ಯವಿರುವುದಿಲ್ಲ
- ತಮ್ಮ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು
- 14 ದಿನಗಳವರೆಗೆ ಕೋವಿಡ್-19 ರೋಗ ಲಕ್ಷಣಗಳಾದ ಜ್ವರ, ಕೆಮ್ಮು, ಶೀತ, ಗಂಟಲು ನೋವು, ಉಸಿರಾಟಕ್ಕೆ ತೊಂದರೆ ಬಗ್ಗೆ ಸ್ವಯಂ-ನಿಗಾ ವಹಿಸುವುದು.
- ರೋಗಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣವೇ ವೈದ್ಯಕೀಯ ಸಮಾಲೋಚನೆ ಪಡೆಯುವುದು.
- ಆಪ್ತಮಿತ್ರ ಸಹಾಯವಾಣಿ 14,410 ಗೆ ಕರೆ ಮಾಡುವುದು
2. ಕೋವಿಡ್-19 ರೋಗ ಲಕ್ಷಣಗಳಿದ್ದರೆ
- ರಾಜ್ಯಕ್ಕೆ ಆಗಮನದ ವೇಳೆ ಕೋವಿಡ್-19 ರೋಗ ಲಕ್ಷಣವಿದ್ದರೆ, ತಕ್ಷಣವೇ ಸ್ವಯಂ-ಪ್ರತ್ಯೇಕವಾಗಿರಬೇಕು
- ತಪ್ಪದೇ ವೈದ್ಯಕೀಯ ಸಮಾಲೋಚನೆ ಪಡೆಯಬೇಕು ಅಥವಾ ಆಪ್ತಮಿತ್ರ ಸಹಾಯವಾಣಿ 14410 ಕರೆ ಮಾಡಬೇಕು
- ಕೋವಿಡ್-19 ತಡೆಗಟ್ಟಲು ಫೇಸ್ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುವುದು
- 2 ಮೀಟರ್ (ಅಥವಾ 6 ಅಡಿ) ದೈಹಿಕ ದೂರವಿರುವುದು
- ಸಾಬೂನಿನಿಂದ ಆಗಾಗ್ಗೆ ಕೈ ತೊಳೆಯುವುದು ಅಥವಾ ಕೈ ಸ್ಯಾನಿಟೈಸ್ ಬಳಸುವುದು
- ಮುನ್ನೆಚ್ಚರಿಕಾ ಕ್ರಮಗಳನ್ನು ಸಾರ್ವಜನಿಕ ಮತ್ತು ಕೆಲಸದ ಸ್ಥಳಗಳಲ್ಲಿ ಪಾಲಿಸುವುದು
ಹಳೆ ಸುತ್ತೋಲೆಯಲ್ಲಿದ್ದ ಈ ಎಲ್ಲವೂ ರದ್ದು
- ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡುವುದು
- ರಾಜ್ಯದ ಗಡಿಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ವೈದ್ಯಕೀಯ ತಪಾಸಣೆ ಮಾಡುವುದು.
- ಜಿಲ್ಲೆಯ ಕೇಂದ್ರಗಳಲ್ಲಿ ತಪಾಸಣೆ ಹಾಗೂ ಕೈಗಳ ಮೇಲೆ ಮುದ್ರೆ ಹಾಕುವುದು.
- ಇನ್ನು 14 ದಿನಗಳ ಕ್ವಾರಂಟೈನ್' ಕೂಡ ರದ್ದು ಮಾಡಲಾಗಿದೆ
- ಮನೆಯ ಬಾಗಿಲಿಗೆ ಪೋಸ್ಟರ್ ಹಚ್ಚುವುದು ತೆರವಾಗಿದೆ