ETV Bharat / state

ಮತದಾನದ ಬಗ್ಗೆ ನಗರ ಮತ್ತು ಯುವ ಜನತೆಯ ನಿರಾಸಕ್ತಿ ಹೊಗಲಾಡಿಸುವುದು ದೊಡ್ಡ ಸವಾಲು: ಚು.ಆಯುಕ್ತ ರಾಜೀವ್‌ ಕುಮಾರ್‌ - ಯುವ ಜನತೆಯ ನಿರಾಸಕ್ತಿ

ಮತದಾನ ಜಾಗೃತಿ ಸೇರಿದಂತೆ ಮುಂತಾದ ಮಾಹಿತಿಗಳನ್ನು ಒದಗಿಸುವ 8 ಎಲ್‌ಇಡಿ ಮೊಬೈಲ್‌ ವ್ಯಾನ್‌ಗಳಿಗೆ ಚುನಾವಣಾ ಆಯುಕ್ತ ರಾಜೀವ್​ ಕುಮಾರ್​ ಚಾಲನೆ ನೀಡಿದರು.

ರಾಜೀವ್‌ ಕುಮಾರ್‌
ರಾಜೀವ್‌ ಕುಮಾರ್‌
author img

By

Published : Mar 11, 2023, 10:33 AM IST

ಬೆಂಗಳೂರು: ಮತದಾನದ ಬಗ್ಗೆ ನಗರ ಮತ್ತು ಯುವ ಜನತೆಯಲ್ಲಿರುವ ನಿರಾಸಕ್ತಿಯನ್ನು ಹೋಗಲಾಡಿಸುವುದು ಚುನಾವಣಾ ಆಯೋಗದ ಪ್ರಮುಖ ಸವಾಲಾಗಿದೆ ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಹೇಳಿದರು. ರಾಜ್ಯ ಪ್ರವಾಸದಲ್ಲಿರುವ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್ ನೇತೃತ್ವದ ನಿಯೋಗ ಶುಕ್ರವಾರ ಮತದಾನದ ಮಹತ್ವ ತಿಳಿಸುವ ನಿಟ್ಟಿನಲ್ಲಿ ನಗರದ ಜೆ.ಎನ್‌. ಟಾಟಾ ಆಡಿಟೋರಿಮ್​ನಲ್ಲಿ ರಾಜ್ಯ ಚುನಾವಣಾ ಆಯೋಗ ಮತ್ತು ಬಿಬಿಎಂಪಿ ಜಂಟಿಯಾಗಿ ಆಯೋಜಿಸಿದ್ದ ವೋಟ್‌ಸ್ಟ್​ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮತದಾನದ ಬಗ್ಗೆ ಜನರಲ್ಲಿ ಅದರಲ್ಲೂ ಮುಖ್ಯವಾಗಿ ನಗರ ಪ್ರದೇಶದ ಹಾಗೂ ಯುವ ಜನರಲ್ಲಿರುವ ನಿರಾಸಕ್ತಿಯನ್ನು ಹೋಗಲಾಡಿಸುವುದು ಚುನಾವಣಾ ಆಯೋಗದ ಮುಂದೆ ಇರುವ ಪ್ರಮುಖ ಸವಾಲಾಗಿದೆ. ಜನರು ಮತದಾನದಲ್ಲಿ ಪಾಲ್ಗೊಳ್ಳದೇ ಇರುವ ಕಾರಣಗಳು, ನಂಬಿಕೆಗಳು, ಅಡೆತಡೆಗಳು, ಸವಾಲುಗಳನ್ನ ಅರ್ಥ ಮಾಡಿಕೊಳ್ಳುವುದು ಬಹಳ ಕ್ಲಿಷ್ಟಕರವಾಗಿದೆ ಎಂದು ತಿಳಿಸಿದರು. ‌

ನಿರಾಸಕ್ತಿಯ ಮತದಾರರನ್ನ ಬದಲಾಯಿಸುವುದು ಬಹಳಷ್ಟು ಸಮಯ ತಗೆದುಕೊಳ್ಳುತ್ತದೆ. ಪ್ರಜಾಪ್ರಭುತ್ವದ ಹಬ್ಬವಾಗಿರುವ ಮತದಾನದಲ್ಲಿ ಜನರು ಆಸಕ್ತಿಯನ್ನು ತೋರುವಂತೆ ಮಾಡಬೇಕಾಗಿದೆ. ಇಂದಿನ ಯುವ ಜನತೆ ತಮ್ಮ ಒಂದು ಮತದಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವ ತಪ್ಪು ತಿಳುವಳಿಕೆಯಲ್ಲಿದ್ದಾರೆ. ಇದನ್ನ ಹೋಗಲಾಡಿಸುವ ದೊಡ್ಡ ಸವಾಲು ನಮ್ಮ ಎದುರಿಗಿದೆ ಎಂದರು.

ವೋಟ್‌ಸ್ಟ್ ಕಾರ್ಯಕ್ರಮ
ವೋಟ್‌ಸ್ಟ್ ಕಾರ್ಯಕ್ರಮ

8 ಎಲ್‌ಇಡಿ ಜಾಗೃತಿ ಮೊಬೈಲ್ ವ್ಯಾನ್​ಗೆ ಚಾಲನೆ: ಮತದಾರರ ಹೆಸರು ಪರಿಶೀಲನೆ, ಮತದಾನ ಜಾಗೃತಿ ಸೇರಿದಂತೆ ಮುಂತಾದ ಮಾಹಿತಿಗಳನ್ನು ಒದಗಿಸುವ 8 ಎಲ್‌ಇಡಿ ಮೊಬೈಲ್‌ ವ್ಯಾನ್‌ಗಳಿಗೆ ಚುನಾವಣಾ ಆಯುಕ್ತ ಚಾಲನೆ ನೀಡಿದರು. ಒಂದು ತಿಂಗಳ ಕಾಲ ಈ ಮೊಬೈಲ್ ವ್ಯಾನ್ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಈ ವೇಳೆ ಹಿರಿಯ ಮತ್ತು ತೃತಿಯ ಲಿಂಗಿ ಮತದಾರರಿಗೆ ಸನ್ಮಾನಿಸಲಾಯಿತು. ಜೊತೆಗೆ ಯುವ ಮತದಾರರಿಗೆ ಮತದಾರ ಚೀಟಿ ವಿತರಣೆ ಮಾಡಲಾಯಿತು. ನಂತರ ಚಿತ್ರಕಲಾವಿದರಿಂದ ಮುಖ್ಯಚುನಾವಣಾ ಆಯುಕ್ತರ ಹಾಗೂ ಮತದಾನದ ಜಾಗೃತಿ ಕುರಿತ ಚಿತ್ರವನ್ನು ಕಲಾವಿದರು ಸ್ಥಳದಲ್ಲಿಯೇ ಚಿತ್ರಿಸಿದರು.

ಮುಖ್ಯ ಚುನಾವಣಾ ಆಯುಕ್ತರ ತಂಡದಿಂದ ಮತದಾನದ ಕುರಿತು ಸಂವಾದ ಏರ್ಪಡಿಸಲಾಯಿತು. ಈ ಸಂವಾದದಲ್ಲಿ ಬೆಂಗಳೂರು ವಿಶ್ವವಿದ್ಯಾಲಯಗಳ ಕುಲಸಚಿವರು, ಐಟಿ ಕಂಪನಿಗಳ ಮುಖ್ಯಸ್ಥರು, ನವೋದ್ಯಮದ (ಸ್ಟಾಟಪ್‌ ಕಂಪನಿ) ಉದ್ಯಮಿಗಳು, ವಿದ್ಯಾರ್ಥಿಗಳು, ತೃತೀಯ ಲಿಂಗಿಗಳು ಸೇರಿದಂತೆ ಹಲವು ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದರು. ಮತದಾನದ ಮಹತ್ವ ಸಾರುವ ವಸ್ತು ಪ್ರದರ್ಶನದಲ್ಲಿ ಮತದಾನದ ಮಹತ್ವ, ಚುನಾವಣೆಯ ಇತಿಹಾಸ ಮತ್ತು ರೂಪರೇಷಗಳ ಕುರಿತ ಮಾಹಿತಿ, ಮತದಾನವನ್ನು ಪ್ರೇರೆಪಿಸುವ ಚಿತ್ರಗಳ ಪ್ರದರ್ಶನದ ಮೂಲಕ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಎಲೆಕ್ಷನ್‌ ಹ್ಯಾಕಥಾನ್‌ ಗೆ ಚಾಲನೆ: ಮೂರು ಹಂತಗಳಲ್ಲಿ 30 ದಿನಗಳ ಕಾಲ ನಡೆಯಲಿರುವ ಹ್ಯಾಕಥಾನ್​ಗೆ ಚಾಲನೆ ನೀಡಲಾಯಿತು. ಚುನಾವಣಾ ಪ್ರಕ್ರಿಯೆಗೆ ಕ್ರಿಯಾತ್ಮಕ ಪರಿಹಾರಗಳನ್ನು ಹುಡುಕಲು ಈ ಹ್ಯಾಕಥಾನ್ ಆಯೋಜಿಸಲಾಗಿದೆ. ಹೊಸ ಮತದಾರರನ್ನ ಪಟ್ಟಿಗೆ ಸೇರಿಸುವುದು ಹಾಗೂ ಮತದಾನದ ಬಗ್ಗೆ ನಗರ ಪ್ರದೇಶ ಹಾಗೂ ಯುವ ಜನರಲ್ಲಿ ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ನೂತನ ಕ್ರಮಗಳನ್ನು ಗುರುತಿಸುವ ಪ್ರಮುಖ ಉದ್ದೇಶದಿಂದ ಈ ಹ್ಯಾಕಥಾನ್‌ ಎಲೆಕ್ಯಾಥಾನ್‌ 2023 ಆಯೋಜಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ಬಲಿಜ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.