ETV Bharat / state

ಲೋಕ ಸಮರದಲ್ಲಿ ಹಣ-ಹೆಂಡದ ಹೊಳೆ: ರಾಜ್ಯಾದ್ಯಂತ ಈವರೆಗೆ ವಶಪಡಿಸಿಕೊಂಡ ಹಣ ಎಷ್ಟು ಗೊತ್ತಾ?! - 2nd polls

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಂಕೆ ಮೀರಿದ ಅಕ್ರಮ ನಡೆಯುತ್ತಿದೆ ಎಂಬ ಆರೋಪದ ಮಧ್ಯೆಯೇ, ಹಣ-ಹೆಂಡ ಸೇರಿದಂತೆ ಸುಮಾರು 79.26 ಕೋಟಿ ರೂ. ಮೌಲ್ಯದ ವಸ್ತುಗಳನ್ನು ನಾನಾ ತನಿಖಾ ಸಂಸ್ಥೆಗಳು ವಶಪಡಿಸಿಕೊಂಡಿವೆ.

ಸಂಗ್ರಹ ಚಿತ್ರ
author img

By

Published : Apr 22, 2019, 8:53 AM IST

ಬೆಂಗಳೂರು: ಈ ಬಾರಿಯೂ ಲೋಕ ಸಮರದಲ್ಲಿ ಹಣ, ಹೆಂಡದ ಹೊಳೆ ಹರಿಯುತ್ತಿದೆ. ರಾಜ್ಯದಲ್ಲಿ ಈವರೆಗೆ ಅತಿ ಹೆಚ್ಚು ಯಾವ ಕ್ಷೇತ್ರದಲ್ಲಿ ಅಕ್ರಮ ಹಣ, ಹೆಂಡ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ ಇಲ್ಲಿದೆ...

ಚುನಾವಣಾ ನೀತಿ ಸಂಹಿತೆ ಪ್ರಾರಂಭವಾದಾಗಿನಿಂದ ಚುನಾವಣಾ ಆಯೋಗ ರಾಜ್ಯದಲ್ಲಿ ಹದ್ದಿನ ಕಣ್ಣಿಟ್ಟಿದೆ. ಮತದಾರರಿಗೆ ಆಮಿಷವೊಡ್ಡಡ್ಡಲು ಸಾಗಿಸುವ ಹಣ, ಹೆಂಡ, ಇತರೆ ವಸ್ತುಗಳ ಮೇಲೆ‌‌ ನಿಗಾವಹಿಸಲು ರಾಜ್ಯಾದ್ಯಂತ ವಿಶೇಷ ತಂಡಗಳನ್ನು ನಿಯೋಜಿಸಿದೆ. ಅದರ ಫಲವಾಗಿ ಈ ಬಾರಿಯೂ ರಾಜ್ಯದಲ್ಲಿ ಕುರುಡು ಕಾಂಚಾಣ, ಹೆಂಡದ ಹರಿವಿನ ಅಬ್ಬರ ಜೋರಾಗೇ ಇದೆ. ಈವರೆಗೆ ಲೋಕಸಮರದ ಹಿನ್ನೆಲೆ ಚುನಾವಣಾಧಿಕಾರಿಗಳ ವಿವಿಧ ತಂಡಗಳು ರಾಜ್ಯದಲ್ಲಿ ಒಟ್ಟು 79.26 ಕೋಟಿ ಹಣ, ಹೆಂಡ, ಅತ್ಯಮೂಲ್ಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪೈಕಿ ಕೆಲ ಕ್ಷೇತ್ರಗಳಲ್ಲಿ ಹಣ, ಹೆಂಡದ ಹರಿವು ಎಗ್ಗಿಲ್ಲದೆ ನಡೆಯುತ್ತಿದೆ. ಆ ಕ್ಷೇತ್ರಗಳು ಯಾವ್ಯಾವು ಎಂಬುದನ್ನು ನೋಡೋಣ...

ಅತಿ ಹೆಚ್ಚು ಹಣ, ಹೆಂಡದ ಹರಿವು ಎಲ್ಲಿದೆ ಗೊತ್ತಾ?:

ಎರಡನೇ ಹಂತದ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಇದುವರೆಗೆ ವಶಪಡಿಸಿಕೊಳ್ಳಲಾಗಿರುವ ಅಕ್ರಮ ನಗದು, ಮದ್ಯ ಹಾಗೂ ಇತರ ವಸ್ತುಗಳ ಪಟ್ಟಿಯಲ್ಲಿ ಶಿವಮೊಗ್ಗ ಅಗ್ರಗಣ್ಯ ಸ್ಥಾನದಲ್ಲಿದೆ.

ಹೌದು, ಶಿವಮೊಗ್ಗದಲ್ಲಿ ಈವರೆಗೆ ಬರೋಬ್ಬರಿ 10.91 ಕೋಟಿ (ನಗದು, ಮದ್ಯ, ಅತ್ಯಮೂಲ್ಯ ವಸ್ತುಗಳು ಸೇರಿ) ಜಪ್ತಿ‌ ಮಾಡಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ಒಟ್ಟು 8.70 ಕೋಟಿ ರೂ.‌ನಗದು ವಶಪಡಿಸಿಕೊಳ್ಳಲಾಗಿದೆ. ಸುಮಾರು 1.70 ಕೋಟಿ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.

ಇನ್ನು ಮೊದಲ ಹಂತದ ಚುನಾವಣೆ ವೇಳೆ ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು ನಗದು, ಮದ್ಯ, ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಬರೋಬ್ಬರಿ 9.09 ಕೋಟಿ ಮೌಲ್ಯದ ಅಕ್ರಮ ಹಣ, ಹೆಂಡ, ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ 5.07 ಕೋಟಿ ನಗದು ಹಾಗೂ 2.71 ಕೋಟಿ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.

ಯಾವ ಕ್ಷೇತ್ರದಲ್ಲಿ ಅತಿ ಹೆಚ್ಚು ಜಪ್ತಿ?:

  1. ಶಿವಮೊಗ್ಗ- 10.41 ಕೋಟಿ ರೂ.(ನಗದು, ಮದ್ಯ, ಅತ್ಯಮೂಲ್ಯ ವಸ್ತುಗಳು ಸೇರಿ)
  2. ಬೆಂ.ದಕ್ಷಿಣ- 9.09 ಕೋಟಿ ರೂ.
  3. ಮೈಸೂರು- 5.18 ಕೋಟಿ ರೂ.
  4. ಧಾರವಾಡ- 4.92 ಕೋಟಿ ರೂ.
  5. ಬೀದರ್- 3.70 ಕೋಟಿ ರೂ.
  6. ಬಳ್ಳಾರಿ- 3.31 ಕೋಟಿ ರೂ.
  7. ದಾವಣಗೆರೆ- 3.28 ಕೋಟಿ ರೂ.
  8. ಉತ್ತರ ಕನ್ನಡ- 3.20 ಕೋಟಿ ರೂ.
  9. ಬೆಂ.ಕೇಂದ್ರ- 3.19 ಕೋಟಿ ರೂ.
  10. ಹಾಸನ- 3.19 ಕೋಟಿ ರೂ.

ಅತಿ ಕಡಿಮೆ ಜಪ್ತಿ ಎಲ್ಲೆಲ್ಲಿ?:

  1. ಹಾವೇರಿ - 31.73 ಲಕ್ಷ ರೂ.
  2. ರಾಯಚೂರು- 32.21 ಲಕ್ಷ ರೂ.
  3. ಕೋಲಾರ- 37.44 ಲಕ್ಷ ರೂ.
  4. ಕೊಪ್ಪಳ- 52.36 ಲಕ್ಷ ರೂ.
  5. ಚಾಮರಾಜನಗರ- 73.26 ಲಕ್ಷ ರೂ.
  6. ವಿಜಯಪುರ- 86 ಲಕ್ಷ ರೂ.
  7. ದ.ಕನ್ನಡ- 96.98 ಲಕ್ಷ ರೂ.

Intro:Highest siezuresBody:KN_BNG_02_21_HIGHESTSEIZURES_CONSTITUENCYWISE_SCRIPT_VENKAT_7201951

ಲೋಕಸಮರ: ಯಾವ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಅಕ್ರಮ‌ ಹಣ, ಹೆಂಡದ ಹರಿವು?, ಯಾವ ಕ್ಷೇತ್ರಗಳಲ್ಲಿ ಅತಿ ಕಡಿಮೆ ಹರಿವು!?

ಬೆಂಗಳೂರು: ಈ ಬಾರಿಯೂ ಲೋಕಸಮರದಲ್ಲಿ ರಾಜ್ಯದಲ್ಲಿ ಹಣ, ಹೆಂಡದ ಹೊಳೆ ಬೇಕಾಬಿಟ್ಟಿ ಹರಿಯುತ್ತಿದೆ. ರಾಜ್ಯದಲ್ಲಿ ಈವರೆಗೆ ಅತಿ ಹೆಚ್ಚು ಯಾವ ಕ್ಷೇತ್ರದಲ್ಲಿ ಅಕ್ರಮ ಹಣ, ಹೆಂಡ, ಅತ್ಯಮೂಲ್ಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂಬ ಬಗ್ಗೆ ಕಣ್ಣಾಡಿಸೋಣ.

ಚುನಾವಣಾ ನೀತಿ ಸಂಹಿತೆ ಪ್ರಾರಂಭವಾಗಿನಿಂದ ಚುನಾವಣಾ ಆಯೋಗ ರಾಜ್ಯದಲ್ಲಿ ಹದ್ದಿನ ಕಣ್ಣಿಟ್ಟಿದೆ. ಮತದಾರರಿಗೆ ಆಮಿಷ ಒಡ್ಡಲು ಸಾಗಿಸುವ ಹಣ, ಹೆಂಡ, ಇತರೆ ವಸ್ತುಗಳ ಮೇಲೆ‌‌ ನಿಗಾ ವಹಿಸಲು ರಾಜ್ಯಾದ್ಯಂತ ವಿಶೇಷ ತಂಡಗಳನ್ನು ನಿಯೋಜಿಸಿದೆ. ಅದರ ಫಲವಾಗಿ ಈ ಬಾರಿಯೂ ರಾಜ್ಯದಲ್ಲಿ ಕುರುಡು ಕಾಂಚಾಣ, ಹೆಂಡದ ಹರಿವಿನ ಅಬ್ಬರ ಜೋರಾಗೇ ಇದೆ. ಇದುವರೆಗೆ ಲೋಕಸಮರದ ಹಿನ್ನೆಲೆ ಚುನಾವಣಾಧಿಕಾರಿಗಳ ವಿವಿಧ ತಂಡ ರಾಜ್ಯದಲ್ಲಿ ಒಟ್ಟು 79.26 ಕೋಟಿ ಹಣ, ಹೆಂಡ, ಅತ್ಯಮೂಲ್ಯ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಈ ಪೈಕಿ ಕೆಲ ಕ್ಷೇತ್ರಗಳಲ್ಲಿ ಹಣ, ಹೆಂಡದ ಹರಿವು ಬೇಕಾಬಿಟ್ಟಿ ನಡೆಯುತ್ತಿದೆ. ಅಂಥ ಕ್ಷೇತ್ರಗಳ್ಯಾವುವು ಎಂಬುದನ್ನು ನೋಡೋಣ.

ಅತಿ ಹೆಚ್ಚು ಹಣ, ಹೆಂಡದ ಹರಿವು ಎಲ್ಲಿದೆ ಗೊತ್ತಾ?:

ಎರಡನೇ ಹಂತದ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಇದುವರೆಗೆ ವಶಪಡಿಸಿಕೊಳ್ಳಲಾಗಿರುವ ಅಕ್ರಮ ನಗದು, ಮದ್ಯ ಹಾಗೂ ಇತರ ವಸ್ತುಗಳ ಪಟ್ಟಿಯಲ್ಲಿ ಶಿವಮೊಗ್ಗ ಅಗ್ರಗಣ್ಯವಾಗಿದೆ.

ಹೌದು, ಶಿವಮೊಗ್ಗದಲ್ಲಿ ಈವರೆಗೆ ಬರೋಬ್ಬರಿ 10.91 ಕೋಟಿ ನಗದು, ಮದ್ಯ, ಅತ್ಯಮೂಲ್ಯ ವಸ್ತುಗಳನ್ನು ಜಪ್ತಿ‌ ಮಾಡಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ಒಟ್ಟು 8.70 ಕೋಟಿ ರೂ.‌ನಗದು ವಶ ಪಡಿಸಿಕೊಳ್ಳಲಾಗಿದೆ. ಸುಮಾರು 1.70 ಕೋಟಿ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.

ಇನ್ನು ಮೊದಲ ಹಂತದ ಚುನಾವಣೆ ವೇಳೆ ಬೆಂ.ದಕ್ಷಿಣದಲ್ಲಿ ಅತಿ ಹೆಚ್ಚು ನಗದು, ಮದ್ಯ, ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಬರೋಬ್ಬರಿ 9.09 ಕೋಟಿ ಮೌಲ್ಯ ದ ಅಕ್ರಮ ಹಣ, ಹೆಂಡ, ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ 5.07 ಕೋಟಿ ನಗದು ಹಾಗೂ 2.71 ಕೋಟಿ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.

ಯಾವ ಕ್ಷೇತ್ರದಲ್ಲಿ ಅತಿ ಹೆಚ್ಚು ಜಪ್ತಿ?:

ಶಿವಮೊಗ್ಗ - 10.41 ಕೋಟಿ ರೂ.

ಬೆಂ.ದಕ್ಷಿಣ- 9.09 ಕೋಟಿ ರೂ.

ಮೈಸೂರು- 5.18 ಕೋಟಿ ರೂ.

ಧಾರವಾಡ- 4.92 ಕೋಟಿ ರೂ.

ಬೀದರ್- 3.70 ಕೋಟಿ ರೂ.

ಬಳ್ಳಾರಿ- 3.31 ಕೋಟಿ ರೂ.

ದಾವಣಗೆರೆ- 3.28 ಕೋಟಿ ರೂ.

ಉತ್ತರ ಕನ್ನಡ- 3.20 ಕೋಟಿ ರೂ.

ಬೆಂ.ಕೇಂದ್ರ- 3.19 ಕೋಟಿ ರೂ.

ಹಾಸನ- 3.19 ಕೋಟಿ ರೂ.

ಅತಿ ಕಡಿಮೆ ಜಪ್ತಿ ಎಲ್ಲೆಲ್ಲಿ?:

ಹಾವೇರಿ - 31.73 ಲಕ್ಷ ರೂ.

ರಾಯಚೂರು- 32.21 ಲಕ್ಷ ರೂ.

ಕೋಲಾರ- 37.44 ಲಕ್ಷ ರೂ.

ಕೊಪ್ಪಳ- 52.36 ಲಕ್ಷ ರೂ.

ಚಾಮರಾಜನಗರ- 73.26 ಲಕ್ಷ ರೂ.

ವಿಜಯಪುರ- 86 ಲಕ್ಷ ರೂ.

ದ.ಕನ್ನಡ- 96.98 ಲಕ್ಷ ರೂ.Conclusion:Venkat
ETV Bharat Logo

Copyright © 2024 Ushodaya Enterprises Pvt. Ltd., All Rights Reserved.