ಬೆಂಗಳೂರು: "ಭಾರತ ಬಿಟ್ಟು ತೊಲಗಿ" ಚಳವಳಿಗೆ 78 ವರ್ಷ ತುಂಬಿದ ಹಿನ್ನೆಲೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಸೇರಿದಂತೆ ಎಲ್ಲ ಸ್ವಾತಂತ್ರ್ಯ ವೀರರನ್ನು ಗೌರವಾದರಗಳಿಂದ ಸ್ಮರಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ನಿರ್ಣಾಯಕ ಮುನ್ನುಡಿಯಾಗಿ ಗುರುತಿಸಿಕೊಂಡಿರುವ 'ಕ್ವಿಟ್ ಇಂಡಿಯಾ' ಚಳವಳಿಯ 78ನೇ ವರ್ಷಾಚರಣೆಯ ಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡಿದ ಎಲ್ಲ ಮಹನೀಯರನ್ನು ಸ್ಮರಿಸೋಣ. ಅವರ ದೇಶಭಕ್ತಿ, ತ್ಯಾಗ, ಬಲಿದಾನಗಳಿಂದ ಪ್ರೇರಣೆ ಪಡೆಯೋಣ. ಮಹಾತ್ಮಾ ಗಾಂಧೀಜಿಯವರ ’ಮಾಡು ಇಲ್ಲವೇ ಮಡಿ’ ಘೋಷಣೆಗೆ ಸಾಕ್ಷಿಯಾದ ಈ ಚಳವಳಿ ನಮ್ಮ ಇತಿಹಾಸದ ಪ್ರಮುಖ ಅಧ್ಯಾಯವಾಗಿದೆ ಎಂದಿದ್ದಾರೆ.
ಸಚಿವ ಸುಧಾಕರ್ ಟ್ವೀಟ್ ಮಾಡಿ, 1942 ಆಗಸ್ಟ್ 9ರಂದು ಪ್ರಾರಂಭವಾದ ಕ್ವಿಟ್ ಇಂಡಿಯಾ ಆಂದೋಲನ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತ್ಯಂತ ನಿರ್ಣಾಯಕ ಘಟ್ಟ. ಭಾರತ ಬಿಟ್ಟು ತೊಲಗಿ ಎಂದು ಇಡೀ ದೇಶವೇ ಒಗ್ಗೂಡಿ, ದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸಲು ಪಣತೊಟ್ಟ ಈ ಮಹತ್ವದ ದಿನ. ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಹೋರಾಟಗಾರರನ್ನು ಸ್ಮರಿಸೋಣ ಎಂದಿದ್ದಾರೆ.