ETV Bharat / state

ನೆರೆಯಿಂದ ಅಂದಾಜು 7648 ಕೋಟಿ ನಷ್ಟ.. ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ: ಸಚಿವ ಆರ್ ಅಶೋಕ್​ - 27 ಜಿಲ್ಲೆಗಳಲ್ಲಿ 820 ಎಂಎಂ ಮಳೆ

24 ಗಂಟೆಯೊಳಗೆ ನೆರೆಗೆ ಮೂವರು ಸಾವನ್ನಪ್ಪಿದ್ದಾರೆ. ರಾಮನಗರದಲ್ಲಿ ಇಬ್ಬರು ಹಾಗೂ ಬಳ್ಳಾರಿಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

7648-crore-loss-due-to-rains-in-karnataka-says-revenue-minister-r-ashok
ನೆರೆಯಿಂದ ಅಂದಾಜು 7648 ಕೋಟಿ ನಷ್ಟ... 1012 ಕೋಟಿ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ: ಸಚಿವ ಆರ್ ಅಶೋಕ್​
author img

By

Published : Aug 30, 2022, 3:51 PM IST

ಬೆಂಗಳೂರು: ನೆರೆ ಹಾನಿಯಿಂದ ಅಂದಾಜು ಸುಮಾರು 7,648.13 ಕೋಟಿ ರೂ. ನಷ್ಟವಾಗಿದ್ದು, ಎನ್​ಡಿಆರ್​ಎಫ್ ಮಾರ್ಗಸೂಚಿಯನ್ವಯ 1,012.50 ಕೋಟಿ ರೂ‌. ನಷ್ಟ ಪರಿಹಾರದ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ ಎಂದು ಕಂದಾಯ ಸಚಿವ ಆರ್ ಅಶೋಕ್​ ತಿಳಿಸಿದರು.

ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಜುಲೈ 1ರಿಂದ ಆಗಸ್ಟ್​ವರೆಗೆ ಮಳೆಗೆ ರಾಜ್ಯದಲ್ಲಿ 96 ಮಂದಿ ಮೃತಪಟ್ಟಿದ್ದಾರೆ. 27 ಜಿಲ್ಲೆಗಳಲ್ಲಿ 820 ಎಂಎಂ ಮಳೆ ಆಗಿದೆ. 187 ಗ್ರಾಮಗಳು ನೆರೆ ಹಾನಿಗೊಳಗಾಗಿವೆ. ಸುಮಾರು 23,794 ಮನೆಗಳು ಹಾನಿಗೀಡಾಗಿದ್ದು, ಈ ಪೈಕಿ ಸುಮಾರು 9,776 ಮನೆಗಳ ಸಂಪೂರ್ಣ ಮತ್ತು ತೀವ್ರವಾಗಿ ಹಾನಿಯಾಗಿವೆ ಎಂದರು.

ಸುಮಾರು 5,51,010 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿ ಮತ್ತು ಸುಮಾರು 17,050 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು ಹಾಗೂ ಸುಮಾರು 12,014 ಹೆಕ್ಟೇರ್ ಪ್ರದೇಶದಲ್ಲಿ ಬಹುವಾರ್ಷಿಕ ಬೆಳೆಗಳ ಹಾನಿಯಾಗಿದೆ. ಒಟ್ಟಾರೆ 5.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ನಷ್ಟವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಂಗಳೂರಲ್ಲಿ ವರುಣನ ಅವಾಂತರ.. ಮನೆಗಳಿಗೆ ನುಗ್ಗಿದ ನೀರು !

ಪ್ರವಾಹ ಪರಿಸ್ಥಿತಿಯಿಂದಾಗಿ ಸುಮಾರು 22,734 ಕಿ.ಮೀ ಉದ್ದದ ರಸ್ತೆ, 1,471 ಸೇತುವೆ ಕಾಲುವೆಗಳು 199 ಸಣ್ಣ ನೀರಾವರಿ ಕೆರೆಗಳು, 6,998 ಶಾಲಾ ಕೊಠಡಿಗಳು, 236 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 3,189 ಅಂಗನವಾಡಿ ಕೇಂದ್ರಗಳು ಹಾಗೂ ಗ್ರಾಮ ಪಂಚಾಯಿತಿಗಳ ಆಸ್ತಿಗಳಿಗೆ ಹಾನಿಯಾಗಿದೆ. ಅಲ್ಲದೇ, ಪ್ರವಾಹ ಪರಿಸ್ಥಿತಿಯಿಂದಾಗಿ ವಿದ್ಯುತ್‌ ಸಂಪರ್ಕಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ಸುಮಾರು 24,052 ವಿದ್ಯುತ್ ಕಂಬಗಳು, 2,221 ಟ್ರಾನ್ಸ್ ಫಾರ್ಮರ್​ಗಳು ಹಾನಿಯಾಗಿವೆ. 497 ಕಿ.ಮೀ ಉದ್ದದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ ಎಂದು ಸಚಿವ ಅಶೋಕ್​ ವಿವರಿಸಿದರು.

ಇದನ್ನೂ ಓದಿ: ವಿಜಯನಗರ ಜಿಲ್ಲೆಯಲ್ಲಿ ಭಾರಿ ಮಳೆಗೆ ಸಂಪರ್ಕ್ ಕಟ್, ಮನೆಗಳು ಜಲಾವೃತ: ಶಾಲೆಗಳಿಗೆ ರಜೆ ಘೋಷಣೆ

ಇಲ್ಲಿಯವರೆಗೆ ಸುಮಾರು 8,217 ಪ್ರವಾಹ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಾಜ್ಯದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಮಗ್ರವಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಒಟ್ಟು 82 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ‌. ಸುಮಾರು 7,959 ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ಸಚಿವರು ಹೇಳಿದರು.

ಮಳೆಗೆ 24 ಗಂಟೆಯೊಳಗೆ ಮೂವರ ಸಾವು : ಕಳೆದ 24 ತಾಸಿನಲ್ಲಿ ರಾಮನಗರ, ಚಾಮರಾಜನಗರ ಮತ್ತು ಮಂಡ್ಯದಲ್ಲಿ 9 ಮಿಲಿ ಮೀಟರ್ ಮಳೆಯಾಗಿದ್ದು, 20 ಗ್ರಾಮಗಳು ನೆರೆ ಪೀಡಿತವಾಗಿವೆ. 24 ಗಂಟೆಯೊಳಗೆ ನೆರೆಗೆ ಮೂವರು ಸಾವನ್ನಪ್ಪಿದ್ದಾರೆ. ರಾಮನಗರದಲ್ಲಿ ಇಬ್ಬರು ಹಾಗೂ ಬಳ್ಳಾರಿಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. ಸೋಮವಾರ ಒಂದೇ ದಿನದಲ್ಲಿ 184 ಮನೆ ಹಾನಿಯಾಗಿವೆ. 70 ಪಶುಗಳು ಸಾವನ್ನಪ್ಪಿವೆ. 875 ಸಂತ್ರಸ್ತರನ್ನು ರಕ್ಷಿಸಲಾಗಿದೆ ಎಂದು ಸಚಿವ ಆರ್​ ಅಶೋಕ್​ ಮಾಹಿತಿ ನೀಡಿದರು.

ಈಗಾಗಲೇ 250 ಕೋಟಿ ರೂ. ನೆರೆ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ‌. ನಮ್ಮ ಸರ್ಕಾರ ಹೆಚ್ಚುವರಿ ನೆರವು ನೀಡುತ್ತಿದೆ. ಬೇರೆ ರಾಜ್ಯಗಳಿಗಿಂತ ನಾವು ಹೆಚ್ಚು ನೆರೆ ಪರಿಹಾರ ಹಣ ಕೊಟ್ಟಿದ್ದೇವೆ. ಎಲ್ಲ ರೀತಿಯ ಸವಲತ್ತುಗಳನ್ನ ಕೊಡ್ತೇವೆ‌. ಕೇಂದ್ರದ ನೆರವು ಬರುವವರೆಗೆ ನಾವೇ ನೆರೆ ಪರಿಹಾರ ನೀಡುತ್ತೇವೆ. ಹಣ ಬರುತ್ತಲೇ ಕಂದಾಯ ಇಲಾಖೆ ಒದಗಿಸಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಮನೆ ಗೋಡೆ ಕುಸಿದು ಮಹಿಳೆ ಸಾವು

ಮೈಸೂರು ಹೆದ್ದಾರಿ ನೀರು ನಿಂತ ವಿಚಾರವಾಗಿ ಮಾತನಾಡಿದ ಸಚಿವರು, ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಲಾಗಿದೆ. ಸೋಮವಾರ ಸಿಎಂ ಮಾತುಕತೆ ಮಾಡಿದ್ದಾರೆ. ನೀರು ಹೋಗಲು ವ್ಯವಸ್ಥೆ ಮಾಡಲಾಗುತ್ತಿದೆ. ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ಮಾಡಿಲ್ಲ. ಕೆರೆಯ ನೀರು ಬಂದಿರೋದ್ರಿಂದ ಹಾಗಾಗಿದೆ. ಮಳೆ ಪ್ರಮಾಣ ಹೆಚ್ಚಳದಿಂದ ನೀರು ಇಂಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ರಾಮನಗರ ಬಳಿ ಹೆದ್ದಾರಿ ಯೋಜನೆ ರೂಪಿಸಿದವರಿಗೆ ಪದ್ಮಭೂಷಣ ನೀಡಬೇಕು: ಡಿ ಕೆ ಶಿವಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.