ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ಕಾನ್‌ಸ್ಟೇಬಲ್ ಆಗಿ ಮೂರು ವರ್ಷ ಸೇವಾವಧಿ ಪೂರ್ಣಗೊಳಿಸಿದ 72 ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಹೆಡ್ ಕಾನ್ಸ್ಟೇಬಲ್ ಆಗಿ ಬಡ್ತಿ ನೀಡಿ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ರಾಜ್ಯ ಪೊಲೀಸ್ ಮೀಸಲು ಪಡೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 72 ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಬಡ್ತಿ ನೀಡಿದ್ದಾರೆ.
ಕಾನ್ಸ್‌ಟೇಬಲ್ ಹುದ್ದೆಯಲ್ಲಿ ಕೇವಲ 3 ವರ್ಷ ಸೇವಾವಧಿ ಪೂರೈಸಿದ ಮಂಜುಳಾ ಬಿ. ಹುನಗುಂಡಿ ಅವರಿಗೆ ಹೆಡ್ ಕಾನ್ಸ್ಟೇಬಲ್ ಆಗಿ ಪದೋನ್ನತಿ ನೀಡಲಾಗಿದೆ. ಪೊಲೀಸ್ ಇಲಾಖೆಯಲ್ಲೇ ಪ್ರಥಮ ಬಾರಿಗೆ ಕಡಿಮೆ ವರ್ಷಗಳ ಸೇವಾವಧಿಯಲ್ಲಿ ಪ್ರಮೋಷನ್ ನೀಡಿದ ಘಟನೆ ಇದಾಗಿದೆ. ಈ ಹಿಂದೆ 13 ರಿಂದ 20 ವರ್ಷಗಳ ಸೇವಾವಧಿ ಪೂರೈಸಿದ ನಂತರ ಪದೋನ್ನತಿ ನೀಡಲಾಗುತ್ತಿತ್ತು. ಪ್ರಸ್ತುತ 3 ವರ್ಷಗಳಿಗೆ ಬಡ್ತಿ ಸಿಗುತ್ತಿದೆ.
ಕೆಎಸ್‌ಆರ್‌ಪಿ 4 ನೇ ಪಡೆಯ ಘಟಕದ ಮಹಿಳಾ ಸಿಬ್ಬಂದಿ ರಂಜಿತಾ ಮತ್ತು ಹೆಚ್.ಆರ್ ಅನಿತಾ ಎಂಬುವರು 24ನೇ ವರ್ಷಕ್ಕೆ ಹೆಡ್‌ಕಾನ್ಸ್‌ಟೇಬಲ್ ಆಗಿ ಪದೋನ್ನತಿ ಪಡೆದಿದ್ದಾರೆ. 3 ವರ್ಷ ಸೇವೆ ಪೂರೈಸಿದ ಒಬ್ಬ ಮಹಿಳಾ ಪೊಲೀಸ್ ಹಾಗೂ 4 ವರ್ಷ ಸೇವೆ ಪೂರೈಸಿದ 27 ಮಂದಿ ಮತ್ತು 5 ವರ್ಷ ಸೇವೆ ಪೂರೈಸಿದ 34 ಮಹಿಳಾ ಪೊಲೀಸರು ಸೇರಿ ಒಟ್ಟು 72 ಮಹಿಳಾ ಕಾನ್ಸ್ಟೇಬಲ್ಗಳಿಗೆ ಮುಂಬಡ್ತಿ ನೀಡಲಾಗಿದೆ.