ಬೆಂಗಳೂರು : ನಗರದ ಜೆಕ್ ರಿಪಬ್ಲಿಕ್ ಕಾನ್ಸುಲೇಟ್ ಕಚೇರಿಯ ವತಿಯಿಂದ ರಾಜ್ಯಕ್ಕೆ 70 ವೆಂಟಿಲೇಟರ್ಗಳನ್ನು ಕೊಡುಗೆಯಾಗಿ ನೀಡಲು ಮುಂದಾಗಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಇಂದು ಭೇಟಿ ಮಾಡಿದ ಜೆಕ್ ರಿಪಬ್ಲಿಕ್‌ನ ಕಾನ್ಸಲ್ ಸಿ.ಎಸ್.ಪ್ರಾಕಾಶ್, ಮೈಕೋ ಮೆಡಿಕಲ್ ಎಸ್‌ಆರ್‌ಒ ಸಂಸ್ಥೆಯು ಈ ವೆಂಟಿಲೇಟರ್ಗಳನ್ನು ರಾಜ್ಯದಲ್ಲಿ ಕೋವಿಡ್ -19 ಸೋಂಕಿತರ ನೆರವಿಗೆಂದು ಕೊಡುಗೆಯಾಗಿ ನೀಡುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಪೆರು ಕಾನ್ಸುಲೇಟ್ ಕಚೇರಿಯ ವಿಕ್ರಂ ವಿಶ್ವನಾಥ್, ರುವಾಂಡಾ ಹಾನರರಿ ಕೌನ್ಸಿಲ್ ಮೋಹನ್ ಸುರೇಶ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಚಾಮರಾಜನಗರದಲ್ಲಿ ಭೀಕರ ದುರಂತ: 24 ಸಾವು, ಆಕ್ಸಿಜನ್ ಸಿಗದೆ 12 ಮಂದಿ ಕೊನೆಯುಸಿರು