ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಸೇರಿದಂತೆ ಬಿಜೆಪಿ ಕೈ ಹಿಡಿದ ಬಹುದೊಡ್ಡ ಸಮುದಾಯ ಲಿಂಗಾಯತ ಎನ್ನುವುದನ್ನು ಮನಗಂಡು ಆ ಸಮುದಾಯಕ್ಕೆ ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಸಿಂಹಪಾಲು ನೀಡಲಾಗಿದೆ. ಇನ್ನುಳಿದಂತೆ ಜಾತಿ ಲೆಕ್ಕಾಚಾರದಂತೆಯೂ ಸಚಿವ ಸ್ಥಾನ ಹಂಚಿಕೆ ಮಾಡಲಾಗಿದೆ.
17 ಸ್ಥಾನಗಳಲ್ಲಿ 7 ಸ್ಥಾನ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಮುಖ್ಯಮಂತ್ರಿ ಕೂಡ ಅದೇ ಸಮುದಾಯವಾದ ಕಾರಣ ಸಂಪುಟದಲ್ಲಿ ಲಿಂಗಾಯತ ಸಮುದಾಯದವರ ಸಂಖ್ಯೆ 8 ಆಗಿದೆ. ಉಳಿದ ಸಮುದಾಯದ 10 ಮಂದಿ ಅವಕಾಶ ಪಡೆದುಕೊಂಡಂತಾಗಿದೆ.
- ಜಾತಿವಾರು ಲೆಕ್ಕಾಚಾರ:
- ಲಿಂಗಾಯತ - 7
- ಒಕ್ಕಲಿಗ - 3
- ಎಸ್ಸಿ-ಎಸ್ಟಿ - 4
- ಹಿಂದುಳಿದ ವರ್ಗ - 2
- ಬ್ರಾಹ್ಮಣ -1
- ಒಟ್ಟು - 17