ETV Bharat / state

ಅತ್ಯಾಚಾರ ಪ್ರಕರಣದ ಆರೋಪಿಗಳ ವಶದಲ್ಲಿದ್ದ 7 ಯುವತಿಯರ ರಕ್ಷಣೆ - bangla ladies protection

ಬಾಂಗ್ಲಾ ಯುವತಿಯ ಮೇಲಿನ‌ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆ, ಅವರ ವಶದಲ್ಲಿದ್ದ ಯುವತಿಯರ ಬಗ್ಗೆ ಬಾಯಿ ಬಿಟ್ಟಿದ್ದಾರೆ‌. ಆ ಮೂಲಕ ಬಾಂಗ್ಲಾ ಮೂಲದ‌ 7 ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ..

7  bangla ladies have been protected by bangalore police
ಅತ್ಯಾಚಾರ ಪ್ರಕರಣದ ಆರೋಪಿಗಳ ವಶದಲ್ಲಿದ್ದ 7 ಯುವತಿಯರ ರಕ್ಷಣೆ
author img

By

Published : Jun 12, 2021, 7:42 PM IST

ಬೆಂಗಳೂರು: ಬಾಂಗ್ಲಾ ಯುವತಿಯ ಮೇಲಿನ‌ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ದಿನಕ್ಕೊಂದು‌ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ‌‌. ಇದೀಗ ಆರೋಪಿಗಳ ವಿಚಾರಣೆ ವೇಳೆ ಮಹತ್ತರ ಸುಳಿವು ಸಿಕ್ಕಿದ್ದು, ಆರೋಪಿಗಳ ವಶದಲ್ಲಿದ್ದ ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ.

ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆ, ಅವರ ವಶದಲ್ಲಿದ್ದ ಯುವತಿಯರ ಬಗ್ಗೆ ಬಾಯಿ ಬಿಟ್ಟಿದ್ದಾರೆ‌. ಇನ್ನು ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ದಾಳಿ‌ ನಡೆಸಿ ಚನ್ನಸಂದ್ರದ ಕನಕನಗರದ ಮನೆಯೊಂದರಲ್ಲಿ ವಶದಲ್ಲಿರಿಸಲಾಗಿದ್ದ ಬಾಂಗ್ಲಾ ಮೂಲದ‌ 7 ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ..

ಇದನ್ನು ಓದಿ: ಕಾರಾಗೃಹಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ: ಖಾಲಿ ಹುದ್ದೆಗಳ ಭರ್ತಿಗೆ ಹೈಕೋರ್ಟ್ ಆದೇಶ

ಆರೋಪಿಗಳು ಯುವತಿಯರಿಗೆ ಕೆಲಸದ ಆಮಿಷವೊಡ್ಡಿ ಅವರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೆಂಗಳೂರಿಗೆ ಕರೆ ತಂದಿದ್ದರು. ಆನಂತರ ಆರೋಪಿಗಳು ಯುವತಿಯರನ್ನು ಬೆಂಗಳೂರು, ಕೇರಳದಲ್ಲಿ ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದರು ಎಂದು ಮಾಹಿತಿ ಸಿಕ್ಕಿದೆ. ಇನ್ನೂ ಯುವತಿಯರನ್ನ ರಕ್ಷಿಸುವ ವೇಳೆ ಹಲವು ನಕಲಿ ದಾಖಲೆಗಳು ಪತ್ತೆಯಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.