ETV Bharat / state

6ನೇ ದಿನಕ್ಕೆ ಕಾಲಿಟ್ಟ ವೈದ್ಯರ ಪ್ರತಿಭಟನೆ: ಸಂಜೆ ಕ್ಯಾಂಡಲ್​ ಮಾರ್ಚ್​ಗೆ ತೀರ್ಮಾನ - ಟೌನ್ ಹಾಲ್ ಬಳಿ ಕ್ಯಾಂಡಲ್ ಮೆರವಣಿಗೆ

ಕಿರಿಯ ವೈದ್ಯರ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸಂಜೆ ಪೊಲೀಸರಿಂದ ಅನುಮತಿ ಸಿಕ್ಕರೆ ಟೌನ್ ಹಾಲ್ ಬಳಿ ಕ್ಯಾಂಡಲ್ ಮೆರವಣಿಗೆ ನಡೆಸಲು ತೀರ್ಮಾನಿಸಿದ್ದಾರೆ.

ಮೆರವಣಿಗೆ
author img

By

Published : Nov 7, 2019, 1:25 PM IST

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಕಿರಿಯ ವೈದ್ಯರ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದ್ದು, ಸದ್ಯ ಹೊರರೋಗಿ ಚಿಕಿತ್ಸಾ ವಿಭಾಗಗಳಲ್ಲಿ, ತುರ್ತು ಚಿಕಿತ್ಸಾ ವಿಭಾಗಗಳಲ್ಲಿ ತಮ್ಮ ಸೇವೆ ಸ್ಥಗಿತಗೊಳಿಸಿದ್ದಾರೆ.

ಹಿರಿಯ ವೈದ್ಯರು ಎಂದಿನಂತೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಚಿಕಿತ್ಸೆ ಸಿಗುವುದು ವಿಳಂಬವಾಗ್ತಿದೆ. ನಿನ್ನೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿಗೂ ಬಗ್ಗದೇ ಪ್ರತಿಭಟನೆ ಮುಂದುವರೆಸಿರುವ ವೈದ್ಯರು, ಇಂದು ಸಂಜೆ ಕ್ಯಾಂಡಲ್​​​ ಮೆರವಣಿ ನಡೆಸಲು ತೀರ್ಮಾನಿಸಿದ್ದಾರೆ. ಪೊಲೀಸರಿಂದ ಅನುಮತಿ ಸಿಕ್ಕರೆ ಟೌನ್ ಹಾಲ್ ಬಳಿ ಕ್ಯಾಂಡಲ್ ಮೆರವಣಿಗೆ ನಡೆಸಲು ತೀರ್ಮಾನಿಸಿದ್ದಾರೆ.

ಸಂಜೆ ಕ್ಯಾಂಡಲ್ ಮೆರವಣಿಗೆ ನಡೆಸಲು ತೀರ್ಮಾನ

ನವೆಂಬರ್ 1ರಂದು ಕರವೇ ಕಾರ್ಯಕರ್ತೆ ಅಶ್ವಿನಿ ಗೌಡ ಮತ್ತು ತಂಡದವರು, ಮಿಂಟೋ ಆಸ್ಪತ್ರೆಯ ಕರ್ತವ್ಯನಿರತ ಕಿರಿಯ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ, ಅಶ್ವಿನಿ ಗೌಡರನ್ನು ಬಂಧಿಸುವಂತೆ ಒತ್ತಾಯಿಸಿ ವೈದ್ಯರು ಪ್ರತಿಭಟನೆ ಮಾಡುತ್ತಿದ್ದಾರೆ. ಡಿಸಿಎಂ ಅಶ್ವತ್ಥ್​​ ನಾರಾಯಣ್, ಪ್ರತಿಭಟನಾನಿರತ ವೈದ್ಯರನ್ನು ಕರೆಸಿ ಪ್ರತಿಭಟನೆ ಕೈಬಿಡಲು ಎರಡು ಬಾರಿ ಮನವಿ ಮಾಡಿದ್ರೂ ತಮ್ಮ ಪಟ್ಟು ಬಿಡದ ವೈದ್ಯರು ಪ್ರತಿಭಟನೆ ಮುಂದುವರೆಸಿದ್ದಾರೆ.

ನಾಳೆಯಿಂದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

Intro:೬ ನೇ ದಿನಕ್ಕೆ ಕಾಲಿಟ್ಟ ಕಿರಿಯ ವೈದ್ಯರ ಪ್ರತಿಭಟನೆ- ಸಂಜೆ ಮೊಂಬತ್ತಿ ಮೆರವಣಿಗೆಗೆ ತೀರ್ಮಾನ

ಬೆಂಗಲಕೂರು- ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಕಿರಿಯ ವೈದ್ಯರ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.
ಹೊರರೋಗಿ ಚಿಕಿತ್ಸಾ ವಿಭಾಗಗಳಲ್ಲಿ, ತುರ್ತು ಚಿಕಿತ್ಸಾ ವಿಭಾಗಗಳಲ್ಲಿ ತಮ್ಮ ಸೇವೆ ಸ್ಥಗಿತಗೊಳಿಸಿದ್ದಾರೆ. ಹಿರಿಯ ವೈದ್ಯರು ಎಂದಿನಂತೆ ರೋಗಿಗಳ ಚಿಕಿತ್ಸೆ ನೀಡುತ್ತಿರುವುದರಿಂದ ಚಿಕಿತ್ಸೆ ಸಿಗುವುದು ವಿಳಂಬವಾಗ್ತಿದೆ.
ನಿನ್ನೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿಗೂ ಬಗ್ಗದೇ ಪ್ರತಿಭಟನೆ ಮುಂದುವರೆಸಿರುವ ವೈದ್ಯರು, ಇಂದು ಸಂಜೆ ಬೊಂಬತ್ತಿ ಮೆರವಣಿಗೆ ನಡೆಸಲು ತೀರ್ಮಾನಿಸಿದ್ದಾರೆ. ಪೊಲೀಸರಿಂದ ಅನುಮತಿ ಸಿಕ್ಕರೆ ಟೌನ್ ಹಾಲ್ ಬಳಿ ಮೊಂಬತ್ತಿ ಮೆರವಣಿಗೆಗೆ ತೀರ್ಮಾನಿಸಿದ್ದಾರೆ.
ನವೆಂಬರ್ ಒಂದರಂದು, ಕರವೇ ಕಾರ್ಯಕರ್ತೆ ಅಶ್ವಿನಿ ಗೌಡ ಮತ್ತು ತಂಡದವರು, ಮಿಂಟೋ ಆಸ್ಪತ್ರೆಯ ಕರ್ತವ್ಯ ನಿರತ ಕಿರಿಯ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ, ಅಶ್ವಿನಿ ಗೌಡರನ್ನು ಬಂಧಿಸುವಂತೆ ಒತ್ತಾಯಿಸಿ ವೈದ್ಯರು ಪ್ರತಿಭಟನೆ ಮಾಡುತ್ತಿದ್ದಾರೆ.
ಡಿಸಿಎಂ ಅಶ್ವಥ್ ನಾರಾಯಣ್, ಪ್ರತಿಭಟನಾ ನಿರತ ವೈದ್ಯರನ್ನು ಕರೆಸಿ, ಪ್ರತಿಭಟನೆ ಕೈಬಿಡಲು ಎರಡು ಬಾರಿ ಮನವಿ ಮಾಡಿದ್ರೂ, ತಮ್ಮ ಪಟ್ಟು ಬಿಡದ ವೈದ್ಯರು, ಪ್ರತಿಭಟನೆ ಮುಂದುವರಿಸಿದ್ದಾರೆ. ಜೊತೆಗೆ ನಾಳೆಯಿಂದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ವೈದ್ಯರಿಂದ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಪ್ರತಿಭಟನಾನಿರತ ಡಾ.ವೇಣುಗೋಪಾಲ್ ಮಾತನಾಡಿ, ಆಯುಕ್ತರ ಮನವಿಗೆ ನಾವು ಒಪ್ಪಿಕೊಂಡಿಲ್ಲ. ಈ ಪ್ರತಿಭಟನೆಯನ್ನು ದೇಶದಾದ್ಯಂತ ವಿಸ್ತರಿಸುತ್ತೇವೆ. ರಾಜ್ಯದ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಕೂಡಾ ಪ್ರತಿಭಟನೆ ವಿಸ್ತರಿಸುತ್ತೇವೆ ಎಂದರು.

ಬೈಟ್- ಡಾ. ವೇಣುಗೋಪಾಲ್, ಕಿರಿಯ ವೈದ್ಯ

ಸೌಮ್ಯಶ್ರೀ
Kn_bng_01_Minto_protest_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.