ಬೆಂಗಳೂರು : ನಗರ ಪೊಲೀಸರಿಂದ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳ ಜಪ್ತಿ ಕಾರ್ಯ ಮುಂದುವರೆದಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ನಡೆದ ಕಾರ್ಯಾಚರಣೆಯಲ್ಲಿ ದ್ವಿಚಕ್ರ ವಾಹನ, ಕಾರು, ಆಟೋ ಸೇರಿ 655 ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನಾದ್ಯಂತ ಪೊಲೀಸರು 566 ದ್ವಿಚಕ್ರ ವಾಹನಗಳು, 32 ಆಟೋ ಹಾಗೂ 57 ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗೆ ಕೋವಿಡ್ ನಿಯಮ ಉಲ್ಲಂಘಿಸಿದ ಹಿನ್ನೆಲೆ ಒಟ್ಟು 655 ವಾಹನಗಳನ್ನು ವಶಕ್ಕೆ ಪಡೆದು, ಎನ್ಡಿಎಂಎ ಕಾಯ್ದೆಯಡಿ 8 ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಮುದ್ದೇಬಿಹಾಳದಲ್ಲಿ ಯುವತಿಯ ಬರ್ಬರ ಕೊಲೆ: ಸೇತುವೆ ಕೆಳಗಡೆ ಮೃತದೇಹ ಪತ್ತೆ!