ಬೆಂಗಳೂರು: ನಗರದಲ್ಲಿಂದು 6,476 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. 777 ಸೋಂಕಿತರು ಅಧಿಕಾರಿಗಳ ಕೈಗೆ ಸಿಗದೆ ನಾಪತ್ತೆಯಾಗಿದ್ದಾರೆ.

ಬೊಮ್ಮನಹಳ್ಳಿಯಲ್ಲಿ 659, ದಾಸರಹಳ್ಳಿ 227, ಬೆಂಗಳೂರು ಪೂರ್ವ 878, ಮಹಾದೇವಪುರ 1,081, ಆರ್.ಆರ್ ನಗರ 405, ಬೆಂಗಳೂರು ದಕ್ಷಿಣ 647, ಬೆಂಗಳೂರು ಪಶ್ಚಿಮ 488, ಯಲಹಂಕ 422 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಒಟ್ಟು 777 ಕೋವಿಡ್ ಸೋಂಕಿತರು ಪಾಲಿಕೆಯ ಸಂಪರ್ಕಕ್ಕೆ ಸಿಗುತ್ತಿಲ್ಲ.
ನಿನ್ನೆ ನಗರದಲ್ಲಿ 6,243 ಪ್ರಕರಣಗಳು ಪತ್ತೆಯಾಗಿತ್ತು. 350 ಮಂದಿ ಮೃತಪಟ್ಟಿದ್ದರು. ನಗರದಲ್ಲಿ ಈವರೆಗೆ 2,19,551 ಸಕ್ರಿಯ ಪ್ರಕರಣಗಳಿವೆ.
ಮೇ 24 ರಂದು 56,164 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, ಪಾಸಿಟಿವಿಟಿ ಪ್ರಮಾಣ 30.75% ಇದ್ದು, ಮರಣ ಪ್ರಮಾಣ 1.50% ಇದೆ.