ETV Bharat / state

61 ಎಪಿಪಿಗಳ ಅಮಾನತು ಪ್ರಕರಣ: ಸರ್ಕಾರದ ಆದೇಶ ಎತ್ತಿ ಹಿಡಿದ ಕೆಎಟಿ - 61 ATPs suspension case

ಪರೀಕ್ಷಾ ಅಕ್ರಮ ಎಸಗಿ ನೇಮಕಗೊಂಡಿದ್ದ ಎಪಿಪಿಗಳನ್ನು ಸರ್ಕಾರ ಇತ್ತೀಚೆಗೆ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿತ್ತು. ಸರ್ಕಾರದ ಈ ಆದೇಶ ಪ್ರಶ್ನಿಸಿ ಅಮಾನತಾದ ಎಪಿಪಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೆಎಟಿ ಇದೀಗ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿದ್ದು, ಅರ್ಜಿದಾರರ ಮನವಿ ವಜಾಗೊಳಿಸಿ ಆದೇಶಿಸಿದೆ.

61 ATPs suspension case
ಆದೇಶ ಎತ್ತಿ ಹಿಡಿದ ಕೆಎಟಿ
author img

By

Published : Jul 11, 2020, 5:23 PM IST

ಬೆಂಗಳೂರು: ಲಿಖಿತ ಪರೀಕ್ಷೆಯಲ್ಲಿ ನಕಲು ಮಾಡಿದ ಹಾಗೂ ಉತ್ತರ ಪತ್ರಿಕೆಗಳ‌ ಮೌಲ್ಯಮಾಪನದಲ್ಲಿ ಅಕ್ರಮ ಎಸಗಿದ್ದ ಆರೋಪದಡಿ 61 ಸಹಾಯಕ ಸರ್ಕಾರಿ ಅಭಿಯೋಜಕರನ್ನು (ಎಪಿಪಿ)‌ ಸೇವೆಯಿಂದ ಅಮಾನತು ಮಾಡಿ ರಾಜ್ಯ ಅಭಿಯೋಜನಾ ಇಲಾಖೆ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಎತ್ತಿಹಿಡಿದಿದೆ.

ಪರೀಕ್ಷಾ ಅಕ್ರಮ ಎಸಗಿ ನೇಮಕಗೊಂಡಿದ್ದ ಎಪಿಪಿಗಳನ್ನು ಸರ್ಕಾರ ಇತ್ತೀಚೆಗೆ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿತ್ತು. ಸರ್ಕಾರದ ಈ ಆದೇಶ ಪ್ರಶ್ನಿಸಿ ಅಮಾನತಾದ ಎಪಿಪಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೆಎಟಿ ಇದೀಗ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿದ್ದು, ಅರ್ಜಿದಾರರ ಮನವಿ ವಜಾಗೊಳಿಸಿ ಆದೇಶಿಸಿದೆ.

ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಜಿ. ರಮೇಶ್ ನಾಯಕ್ ವಾದ ಮಂಡಿಸಿ, ಅರ್ಜಿದಾರರು ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ತನಿಖೆ ಸಂದರ್ಭದಲ್ಲಿ ಸಾಬೀತಾಗಿದೆ. ಉತ್ತರ ಪತ್ರಿಕೆಗಳಿಗೆ ಹಾಕಲಾಗಿದ್ದ ಪಿನ್​​ಗಳನ್ನು ತೆಗದುಹಾಕಿದ್ದೂ ಸೇರಿದಂತೆ ಹಲವು ಅಕ್ರಮಗಳನ್ನು ಎಸಗಿರುವುದು ದೃಢಪಟ್ಟಿದೆ. ಹೀಗಾಗಿ ಆರೋಪಿತ ಅರ್ಜಿದಾರರ ಮನವಿ ಪುರಸ್ಕರಿಸಬಾರದು ಎಂದು ಕೋರಿದ್ದರು. ವಾದ ಪರಿಗಣಿಸಿದ ಕೆಎಟಿ ಎಪಿಪಿಗಳನ್ನು ಅಮಾನತು ಮಾಡಿದ್ದ ಸರ್ಕಾರದ ಆದೇಶವನ್ನು ಪುರಸ್ಕರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.