ETV Bharat / state

ಎರಡು ಅಂತಸ್ತಿನ ಕಟ್ಟಡದ ಮೇಲಿಂದ ಜಾರಿ ಬಿದ್ದ ಹಸುಗೂಸು ಸಾವು.. - baby death news from bengaluru

70 ವರ್ಷದ ವ್ಯಕ್ತಿ ಮಗುವನ್ನು ಎರಡನೇ ಅಂತಸ್ತಿಗೆ ಕರೆದೊಯ್ಯಲು ಮೆಟ್ಟಿಲು ಹತ್ತುವಾಗ ಕಾಲು ಜಾರಿದ ಪರಿಣಾಮ ಅಂಗೈಯಲ್ಲಿದ್ದ ಮಗು ಜಾರಿ ಕೈತಪ್ಪಿ ಎರಡನೇ ಅಂತಸ್ತಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ‌.

6 months baby girl died in bengaluru
ಹಸುಗೂಸು ಸಾವು
author img

By

Published : Apr 10, 2020, 5:34 PM IST

ಬೆಂಗಳೂರು : ಎರಡು ಅಂತಸ್ತಿನ ಕಟ್ಟಡದ ಮೇಲಿಂದ ವೃದ್ಧನ ಕೈ ಜಾರಿ ಬಿದ್ದು 6 ತಿಂಗಳ ಮಗುವೊಂದು ಸಾವನ್ನಪ್ಪಿರುವ ಘಟನೆ ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾರುತಿನಗರದಲ್ಲಿ ವಾಸವಾಗಿರುವ‌ ಟೆಕಿಗಳಾದ ವಿನಯ್ ಹಾಗೂ ಪ್ರಿಯಾಂಕಾ ದಂಪತಿಯ ಆರು ತಿಂಗಳ ಹೆಣ್ಣು ಮಗು ಸಾವನ್ನಪ್ಪಿದೆ.‌ ದಂಪತಿಯು ಇಂದು ಬೆಳಗ್ಗೆ ಮನೆ ಸ್ವಚ್ಛಗೊಳಿಸುವಾಗ ಧೂಳಿನಿಂದ ಮಗುವಿಗೆ ಸಮಸ್ಯೆಯಾಗುವ ಕಾರಣಕ್ಕಾಗಿ ಮಗುವನ್ನು ತಾತ ಕೈಗೆ ನೀಡಿದ್ದಾರೆ.

70 ವರ್ಷದ ವ್ಯಕ್ತಿ ಮಗುವನ್ನು ಎರಡನೇ ಅಂತಸ್ತಿಗೆ ಕರೆದೊಯ್ಯಲು ಮೆಟ್ಟಿಲು ಹತ್ತುವಾಗ ಕಾಲು ಜಾರಿದ ಪರಿಣಾಮ ಅಂಗೈಯಲ್ಲಿದ್ದ ಮಗು ಜಾರಿ ಕೈತಪ್ಪಿ ಎರಡನೇ ಅಂತಸ್ತಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ‌. ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.