ಬೆಂಗಳೂರು: ಪದವಿ ಪೂರ್ವ ಉಪನ್ಯಾಸಕರ ಅಹೋರಾತ್ರಿ ಧರಣಿ 5 ನೇ ದಿನಕ್ಕೆ ಕಾಲಿಟ್ಟಿದೆ. ಪಿಯು ಉಪನ್ಯಾಸಕರ ಹುದ್ದೆಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಪ್ರಕ್ರಿಯೆ ಅತ್ಯಂತ ಸುದೀರ್ಘ ಕಾಲವೇ ನಡೆದಿದೆ. 2019ರಲ್ಲಿ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿತ್ತು. ಬಳಿಕ 2020ರ ಆಗಸ್ಟ್ ನಂದು ಕೌನ್ಸಲಿಂಗ್ ನಡೆದಿತ್ತು. ಆದರೆ, ಈವರೆಗೂ ಉಪನ್ಯಾಸಕರಿಗೆ ಆದೇಶ ಪ್ರತಿ ದೊರಕಿಲ್ಲ. ಹೀಗಾಗಿ ಆದೇಶ ಪ್ರತಿ ನೀಡುವವರೆಗೆ ಧರಣಿ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಉಪನ್ಯಾಸಕರ ಆತಂಕವೇನು?:
ಯಾವುದೇ ನೇಮಕಾತಿಯ ಅಂತಿಮ ಪಟ್ಟಿ ಪ್ರಕಟವಾದ ನಂತರ ಒಂದು ವರ್ಷದೊಳಗೆ ಆದೇಶ ನೀಡಬೇಕೆಂದು ರಾಜ್ಯ ಸರ್ಕಾರದ ಆದೇಶವಿದೆ. ಸದ್ಯ ಕೊರೊನಾ ಸಮಸ್ಯೆಯಿದೆ. ಇಷ್ಟರಲ್ಲೇ ಗ್ರಾಮ ಪಂಚಾಯತಿ ಎಲೆಕ್ಷನ್ ನಿಂದಾಗಿ ನಿಷೇಧಾಜ್ಞೆಯಿಂದ ಮತ್ತೆ ಕಾಯುವಿಕೆಯ ಬರೆ ಬೀಳುತ್ತದೆ ಎಂಬ ಆತಂಕದಲ್ಲಿದ್ದಾರೆ. ಸರ್ಕಾರದ ಯಾವುದೇ ಆಶ್ವಾಸನೆ, ಭರವಸೆಗಳು ಬೇಡ. ಬದಲಿಗೆ ನೇಮಕಾತಿ ಪತ್ರ ಕೊಟ್ಟರೆ ಸಾಕು ನಾವು ನಮ್ಮ ಪಾಡಿಗೆ ಊರು ಸೇರಿಕೊಳ್ಳುತ್ತೇವೆ ಅಂತ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಪಿಯು ಉಪನ್ಯಾಸಕರ ನೇಮಕಾತಿ ನಡೆದು ಬಂದ ಹಾದಿ:
15-5-2014 - ನೇಮಕಾತಿಯ ಸಿ&ಆರ್ ನಿಯಮಗಳನ್ನು ರಾಜ್ಯ ಪತ್ರದಲ್ಲಿ ಪ್ರಕಟ
8-5-2015 - ಮೊದಲ ಅಧಿಸೂಚನೆ
15-6-2015 - ಅರ್ಜಿ ಸಲ್ಲಿಕೆಗೆ ಕಾಲಾವಕಾಶ
15-6-2015 - ಮೊದಲ ಅಧಿಸೂಚನೆ ತಡೆಯಾಜ್ಞೆ
13-6-2016 - ಎರಡನೇ ತಿದ್ದುಪಡಿ ಅಧಿಸೂಚನೆ
2016 ಜುಲೈ - ಎರಡನೇ ಅಧಿಸೂಚನೆ ತಡೆಯಾಜ್ಞೆ
2-3-2017 - ಮೂರನೇ ಅಧಿಸೂಚನೆ
ಜುಲೈ 2018 - ಪರೀಕ್ಷಾ ವೇಳಾಪಟ್ಟಿ ಪ್ರಕಟ
ಆಗಸ್ಟ್ 2018 - ಪರೀಕ್ಷೆ ರದ್ದು
ಅಕ್ಟೋಬರ್ 2018 - ರದ್ದಾಗಿದ್ದ ಪರೀಕ್ಷೆ ನಡೆಸುವಂತೆ ಮರು ಆದೇಶ
29-11-2018/8-12-2018- ಪರೀಕ್ಷೆ
13-1-2019 - ತಾತ್ಕಾಲಿಕ ಕೀ ಉತ್ತರ ಪ್ರಕಟ
4-5-2019 - ಫಲಿತಾಂಶ ಪ್ರಕಟ
15-7-2019- ಮೂಲ ದಾಖಲೆ ಪರಿಶೀಲನೆ
20-12-2019- ಹೈದರಾಬಾದ್ ಕರ್ನಾಟಕ ಮೀಸಲಾತಿ ವಿಷಯಕ್ಕೆ ಹೈಕೋರ್ಟ್ ಸ್ಟೇ ಬಂದಿದ್ದು
25-2-2020 -ಹೈದರಾಬಾದ್ ಕರ್ನಾಟಕ ಮೀಸಲಾತಿ ವಿಷಯಕ್ಕೆ ಹೈಕೋರ್ಟ್ ಸ್ಟೇ ತೆರವು
4-3-2020- ಪಿಯು ಬೋರ್ಡ್ ನಿಂದ ಉಳಿದ ಮೂಲ ದಾಖಲೆಗಳ ಪರಿಶೀಲನೆ
24-6-2020- ಕೌನ್ಸಲಿಂಗ್ ನಡೆಸುವಂತೆ ಆದೇಶ
7-7-2020- ತಾಂತ್ರಿಕ ಕಾರಣದಿಂದ ಕೌನ್ಸಲಿಂಗ್ ಮುಂದೂಡಿಕೆ
20-7-2020- 2ನೇ ಬಾರಿ ಕೌನ್ಸಲಿಂಗ್ ಪ್ರಾರಂಭ
ಸದ್ಯ ಆದೇಶ ಪತ್ರ ವಿತರಣೆ ಆಗಬೇಕಿದೆ ಅಷ್ಟೇ.