ETV Bharat / state

ಕೊರೊನಾ ಸ್ಫೋಟ: ಬೆಂಗಳೂರಿನಲ್ಲಿ ಒಂದೇ ದಿನಕ್ಕೆ 596 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ

ಬೆಂಗಳೂರು ನಗರದಲ್ಲಿಂದು ಒಂದೇ ದಿನಕ್ಕೆ 596 ಮಂದಿಗೆ ಕೊರೊನಾ ಹರಡಿದ್ದು, ನಗರದ ಒಟ್ಟು ಸೋಂಕಿತರ ಸಂಖ್ಯೆ 2531 ಕ್ಕೆ ಏರಿಕೆಯಾಗಿದೆ.

Bangalore
596 ಪಾಸಿಟಿವ್ ಪ್ರಕರಣ ಪತ್ತೆ
author img

By

Published : Jun 27, 2020, 11:41 PM IST

ಬೆಂಗಳೂರು: ನಗರದಲ್ಲಿಂದು ಒಂದೇ ದಿನಕ್ಕೆ 596 ಮಂದಿಗೆ ಕೊರೊನಾ ಹರಡಿದ್ದು, ನಗರದ ಒಟ್ಟು ಸೋಂಕಿತರ ಸಂಖ್ಯೆ 2531 ಕ್ಕೆ ಏರಿಕೆಯಾಗಿದೆ.

ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಕೊರೊನಾ ಹರಡಿದ್ದು, ಈಗಾಗಲೇ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ಉಂಟಾಗಿದ್ದು, ಈಗ ಮತ್ತಷ್ಟು ಸಂಕಷ್ಟಕ್ಕೆ ತಳ್ಳುವ ಅಪಾಯ ಎದುರಾಗಿದೆ. ಕೋವಿಡ್ ಆಸ್ಪತ್ರೆಗಳಾದ ವಿಕ್ಟೋರಿಯಾ, ರಾಜೀವ್ ಗಾಂಧಿ, ಬೌರಿಂಗ್ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೆ, ಹಲವು ಮಂದಿ ಸೋಂಕಿತರು ಮನೆಯಲ್ಲೇ ಉಳಿದುಕೊಂಡಿದ್ದಾರೆ. ಪಾಲಿಕೆಯೂ ಕ್ರಮಕ್ಕೆ ಮುಂದಾಗುತ್ತಿಲ್ಲ.

ಇಂದು ಕೇವಲ 7 ಮಂದಿ ಬಿಡುಗಡೆಯಾಗಿದ್ದು, ಈವರೆಗೆ ಕೇವಲ 533 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳು 1913 ಕ್ಕೆ ಏರಿಕೆಯಾಗಿದೆ. ಇಂದು ಮೂವರು ಮೃತಪಟ್ಟಿದ್ದು ಸಾವಿನ ಸಂಖ್ಯೆ 84 ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 125 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾವ ವಲಯದಲ್ಲಿ ಎಷ್ಟು ಕೊರೊನಾ ಕೇಸ್ !?
ಬಿಬಿಎಂಪಿ ನೀಡುವ ವಾರ್ ರೂಂ ವರದಿಗೂ, ರಾಜ್ಯದ ಹೆಲ್ತ್ ಬುಲೆಟಿನ್​ನಲ್ಲೂ ಅಂಕಿ ಅಂಶಗಳ ವ್ಯತ್ಯಾಸ ಇದ್ದು, ವಾರ್ ರೂಂ ವರದಿ ಪ್ರಕಾರ ಇಂದಿಗೆ ನಗರದ ಒಟ್ಟು ಕೊರೊನಾ ಪಾಸಿಟಿವ್ ಸಂಖ್ಯೆ 2538 ಆಗಿದೆ.

ಪೂರ್ವ ವಲಯ- 200 ಪಾಸಿಟಿವ್, ಪಶ್ಚಿಮ- 212, ದಕ್ಷಿಣ- 209, ಆರ್ ಆರ್ ನಗರ- 53, ಬೊಮ್ಮನಹಳ್ಳಿ -169, ಯಲಹಂಕ-35, ದಾಸರಹಳ್ಳಿ -12, ಮಹದೇವಪುರ- 82, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿ- 16, ಬೆಂಗಳೂರು ಹೊರಭಾಗ- 71, ಕರ್ನಾಟಕ ಹೊರಭಾಗ- 8, ಅಂತರಾಷ್ಟ್ರೀಯ ಪ್ರಯಾಣ-185, ವರದಿಗಾಗಿ ಕಾದಿರುವುದು- 1286 ಪ್ರಕರಣದ ವಲಯ ಪತ್ತೆ ಹಚ್ಚಬೇಕಿದೆ.

ಇಂದು ಕೊರೊನಾ ಪ್ರಕರಣ ಸ್ಪೋಟಗೊಂಡು ಅತಿಹೆಚ್ಚು ಜನರಿಗೆ ಸೋಂಕು ಕಂಡುಬಂದರೂ ಯಾವುದೇ ಪ್ರದೇಶವನ್ನು ಕಂಟೇನ್ಮೆಂಟ್ ಮಾಡಿಲ್ಲ. ಕಂಟೇನ್ಮೆಂಟ್ ಏರಿಯಾಗಳ ಸಂಖ್ಯೆ 554 ಅಷ್ಟೇ ಇದೆ.

ಇನ್ನು ದೇಶದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳಿರುವ ಐದು ಪ್ರಮುಖ ನಗರಗಳ ಪೈಕಿ ಬೆಂಗಳೂರು ಐದನೇ ಸ್ಥಾನದಲ್ಲಿದೆ. ಆದರೆ, ಕೋಲ್ಕತ್ತಾವನ್ನು ಕೂಡಾ ಬೆಂಗಳೂರು ಹಿಂದಿಕ್ಕುವ ಸಾಧ್ಯತೆ ಇದೆ. ಕೋಲ್ಕತ್ತಾದಲ್ಲಿ 5261 ಪಾಸಿಟಿವ್ ಪ್ರಕರಣಗಳಿದ್ದು, ಬೆಂಗಳೂರಿನ ಪಾಸಿಟಿವ್ ಪ್ರಕರಣದ ಸಂಖ್ಯೆ 2538 ಕ್ಕೆ ಏರಿಕೆಯಾಗಿದೆ. ನಗರದ ರಿಕವರಿ ರೇಟ್ 22 ಶೇಕಡಾಕ್ಕೆ ಇಳಿದಿದ್ದು, ಆಕ್ಟಿವ್ ರೇಟ್ 78 ಶೇಕಡಾಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.