ETV Bharat / state

ಲೋಕಾಯುಕ್ತ ಕಚೇರಿಯಲ್ಲಿನ 52 ಸಿಬ್ಬಂದಿಗೆ ಕೋವಿಡ್ ದೃಢ

author img

By

Published : Jan 22, 2022, 4:02 PM IST

ಕರ್ನಾಟಕ ಲೋಕಾಯುಕ್ತ ಕಚೇರಿಯಲ್ಲಿ ಸುಮಾರು 300 ಸಿಬ್ಬಂದಿಗೆ ಕೋವಿಡ್​​ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 52 ಮಂದಿಗೆ ಸೋಂಕು ದೃಢಪಟ್ಟಿದೆ..

Corona cases found in Lokayukta office
ಲೋಕಾಯುಕ್ತ ಕಚೇರಿಯಲ್ಲಿ ಐವತ್ತೆರಡು ಕೋವಿಡ್​​ ಕೇಸ್​ ದೃಢ

ಬೆಂಗಳೂರು : ವಿಧಾನಸೌಧದ ಬಳಿಯ ಕರ್ನಾಟಕ ಲೋಕಾಯುಕ್ತ ಕಚೇರಿಯಲ್ಲಿ 52 ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದೆ. ಒಟ್ಟು 300 ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ನಡೆಲಾಗಿತ್ತು.

ಸೋಂಕಿತ 52 ಸಿಬ್ಬಂದಿ ಹೋಂ ಐಸೋಲೇಷನ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತ ಕೋವಿಡ್ ಹೆಚ್ಚಾದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಮೌಖಿಕ ಕಲಾಪಗಳನ್ನು ಎರಡು ವಾರ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ 9 ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ

ರಾಜಧಾನಿಯಲ್ಲಿ ಕೊರೊನಾ ಏರಿಳಿತ : ಬೆಂಗಳೂರಲ್ಲಿ ಕೋವಿಡ್ ಸೋಂಕಿತರ ಪ್ರಮಾಣದಲ್ಲಿ ಪ್ರತಿನಿತ್ಯ ಏರಿಳಿಕೆಯಾಗುತ್ತಿದೆ. ರಾಜಧಾನಿಯಲ್ಲಿ ಗುರುವಾರ 30 ಸಾವಿರ ದಾಟಿದ್ದ ಸೋಂಕಿತರ ಸಂಖ್ಯೆ, ಶುಕ್ರವಾರ 26,794ಕ್ಕೆ ಇಳಿಕೆಯಾಗಿದೆ.

ಗುರುವಾರಕ್ಕಿಂತ ಶುಕ್ರವಾರ 4 ಸಾವಿರ ಪ್ರಕರಣ ಕಡಿಮೆಯಾದಂತಾಗಿದೆ. ಕೆಲವೇ ವಾರ್ಡ್​​ಗಳಿಗೆ ಸೀಮಿತವಾಗಿದ್ದ ಕೋವಿಡ್ ಇದೀಗ ಇಡೀ ನಗರವನ್ನು ಆವರಿಸಿದೆ. 198 ವಾರ್ಡ್​​ಗಳ ಪೈಕಿ 101 ವಾರ್ಡ್​ಗಳಲ್ಲಿ ಅಪಾಯದ ಹಂತದಲ್ಲಿದೆ. 33 ವಾರ್ಡ್​ಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರಕ್ಕೂ ಮೀರಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.