ETV Bharat / state

ನೆರೆ ಹಾವಳಿಗೆ ಕೇಂದ್ರದಿಂದ ₹ 5 ಸಾವಿರ ಕೋಟಿ ಬಿಡುಗಡೆಗೆ ರಾಜ್ಯ ಸರ್ಕಾರ ಒತ್ತಾಯಿಸಲಿ: ಉಗ್ರಪ್ಪ - karnataka floods news

ರಾಜ್ಯದಲ್ಲಿ ಸಂಭವಿಸಿರುವ ನೆರೆ ಹಾವಳಿಗೆ ಕೇಂದ್ರದಿಂದ ₹ 5 ಸಾವಿರ ಕೋಟಿ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಒತ್ತಾಯಿಸಬೇಕು ಎಂದು ಮಾಜಿ ಸಚಿವ ವಿ.ಎಸ್​.ಉಗ್ರಪ್ಪ ಆಗ್ರಹಿಸಿದ್ದಾರೆ.

ಮಾಜಿ ಸಂಸದ ವಿ.ಎಸ್. ಉಗ್ರಪ್ಪ
author img

By

Published : Aug 13, 2019, 4:44 PM IST

ಬೆಂಗಳೂರು: ರಾಜ್ಯದ ಪ್ರವಾಹ ಪರಿಸ್ಥಿತಿ ಹಾಗೂ ಉಂಟಾಗಿರುವ ಹಾನಿ ಪರಿಗಣಿಸಿ ಕೇಂದ್ರ ಸರ್ಕಾರಕ್ಕೆ ರಾಜ್ಯದ ಸಿಎಂ ₹5 ಸಾವಿರ ಕೋಟಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಬೇಕು ಎಂದು ಮಾಜಿ ಸಂಸದ ವಿ.ಎಸ್​.ಉಗ್ರಪ್ಪ ಆಗ್ರಹಿಸಿದ್ದಾರೆ.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ

ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿ, ವೈಮಾನಿಕ ಸಮೀಕ್ಷೆ ನಡೆಸಬೇಕು. ತಕ್ಷಣ ಸಿಎಂ ಸರ್ವಪಕ್ಷ ಸಭೆ ಕರೆದು, ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯಬೇಕು. ಬಿಎಸ್​ವೈ ಒಬ್ಬರೇ ಸುತ್ತಾಡಿದರೆ ಪರಿಹಾರ ಸಿಗದು ಎಂದರು.

ಈ ಹಿಂದೆ 2009ರಲ್ಲಿ ಇಂತಹ ವಿಕೋಪಕ್ಕೆ ಅಂದಿನ ಪ್ರಧಾನಿ ಡಾ. ಮನ್​ಮೋಹನ್ ಸಿಂಗ್ ₹1900 ಕೋಟಿ ನೀಡಿದ್ದರು. ಕೇಂದ್ರ, ರಾಜ್ಯ ಸರ್ಕಾರ ಇನ್ನೂ ನಿದ್ರಾವಸ್ಥೆಯಲ್ಲಿವೆ. ಸುಮಾರು 48 ಜನ ಸಾವನ್ನಪ್ಪಿದ್ದಾರೆ. 12 ಜನ ಕಣ್ಮರೆಯಾಗಿದ್ದಾರೆ. ಸಾವಿರಾರು ಜಾನುವಾರುಗಳು ಸಾವನ್ನಪ್ಪಿವೆ. ಜೊತೆಗೆ ಲೆಕ್ಕವಿಲ್ಲದಷ್ಟು ನಷ್ಟ ಆಗಿದೆ ಎಂದು ಹೇಳಿದರು.

ಅತಿವೃಷ್ಟಿ ಹಾಗೂ ಅನಾವೃಷ್ಟಿ: ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಟಿಯಿದೆ. ಮತ್ತೊಂದು ಕಡೆ ಅನಾವೃಷ್ಟಿಯಿದೆ. ಚಿತ್ರದುರ್ಗ, ಪಾವಗಡ, ತುಮಕೂರು ಸೇರಿ ಕೆಲವೆಡೆ ನೀರಿಲ್ಲ. ಹೀಗಾಗಿ ರಾಜ್ಯದಲ್ಲಿ ಸಾಕಷ್ಟು ಸಂಕಷ್ಟದ ಪರಿಸ್ಥಿತಿ ಉದ್ಭವಿಸಿದೆ. ನಷ್ಟದ ಬಗ್ಗೆ ವರದಿಯನ್ನ ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳಿಸಬೇಕು. ರಾಜ್ಯದಲ್ಲಿ ಸರ್ಕಾರ ಬೀಳಿಸಲು ಏನೆಲ್ಲಾ ಸಾಹಸ ಮಾಡಿದರು ಅಂತಾ ಗೊತ್ತೇ ಇದೆ. ಇಂತಹ ಸಂದರ್ಭದಲ್ಲಿ ಮೌನವಾದರೆ ಹೇಗೆ ಎಂದು ಕುಟುಕಿದರು.

Intro:newsBody:ಸಿಎಂ ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು ಕೇಂದ್ರಕ್ಕೆ ನಿಯೋಗ ಕರೆದೊಯ್ಯಬೇಕು: ಉಗ್ರಪ್ಪ ಆಗ್ರಹ

ಬೆಂಗಳೂರು: ರಾಜ್ಯದ ಪ್ರವಾಹ ಪರಿಸ್ಥಿತಿ ಹಾಗೂ ಉಂಟಾಗಿರುವ ಹಾನಿ ಪರಿಗಣಿಸಿ ಕೇಂದ್ರ ಸರ್ಕಾರ ತಕ್ಷಣ 5 ಸಾವಿರ ಕೋಟಿ ರೂ ಬಿಡುಗಡೆ ಮಾಡಬೇಕು, ಪ್ರಧಾನಿ ರಾಜ್ಯಕ್ಕೆ ಭೇಟಿಕೊಡಬೇಕು, ಸಿಎಂ ಸರ್ವಪಕ್ಷ ಸಭೆ ಕರೆಯಬೇಕು ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯದ ಸಮಸ್ಯೆ ಪರಿಗಣಿಸಿ ಕೇಂದ್ರ ಸರ್ಕಾರ‌ ಕೂಡಲೇ ರಾಷ್ಟ್ರೀಯ ವಿಪತ್ತು ಅಂತಾ ಘೋಷಣೆ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ವೈಮಾನಿಕ ಸಮೀಕ್ಷೆ ನಡೆಸಬೇಕು. ಸಿಎಂ ಬಿಎಸ್ ಯಡಿಯೂರಪ್ಪ ಕೂಡಲೇ ಸರ್ವ ಪಕ್ಷಗಳ ಸಭೆ ಕರೆಯಬೇಕು. ಇಲ್ಲಿಂದ ಸರ್ವಪಕ್ಷ ನಿಯೋಗ ದಿಲ್ಲಿಗೆ ಕರೆದುಕೊಂಡು ಹೋಗಿ ಪ್ರಧಾನಿ ಮುಂದೆ ಹೋಗಿ ಪರಿಹಾರಕ್ಕೆ ಆಗ್ರಹಿಸಬೇಕು. ಯಡಿಯೂರಪ್ಪ ಒಬ್ರೆ ಓಡಾಡಿದ್ರೆ, ಪರಿಣಾಮ ಆಗಲ್ಲ. ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂದರು.
ಯಡಿಯೂರಪ್ಪ ಹಾಗೂ ಕೇಂದ್ರ ಸರ್ಕಾರ ರಾಜ್ಯದ ಜನರ ಬದುಕಿನ ಜತೆ ಚೆಲ್ಲಾಟ ನಡೆಸುತ್ತಿದ್ದಾರೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಾವು ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದ್ದೇವೆ. ಹಿಂದೆ 2009 ರಲ್ಲಿ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ 1900 ಕೋಟಿ ರೂ. ನೀಡಿದ್ದರು. ಇಂದು ಪ್ರಧಾನಿ ಏನಾಗಿದ್ದಾರೆ. ಕಾಡಿನಲ್ಲಿ ಫೋಟೊಗ್ರಫಿ ಇದ್ದರೆ ಬರುತ್ತಾರಾ? ಕೇಂದ್ರ, ರಾಜ್ಯ ಸರ್ಕಾರ ನಿದ್ರಾವಸ್ಥೆಯಿಂದ ಕೂಡಲೆ ಹೊರಬರಬೇಕು. 26 ಸಂಸದರನ್ನು ರಾಜ್ಯ ನೀಡಿದೆ. ಜನ ಕೇಳದಿದ್ದರೂ ಸಹಾಯ ಮಾಡುತ್ತಾರೆ. ಅವರನ್ನು ಕೇಳುವ ಬದಲು ಕೇಂದ್ರ ಸರ್ಕಾರವನ್ನು ಸಿಎಂ ಕೇಳಬೇಕು. ನಾವು ಜನರ ವಿಚಾರದಲ್ಲಿ ರಾಜಕಾರಣ ಮಾಡಲ್ಲ. ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂದು ಆಗ್ರಹಿಸಿದರು.
ನಮಗೆ ಲಭ್ಯ ಇರುವ ಮಾಹಿತಿ ಪ್ರಕಾರ 48 ಜನ ಸಾವನಪ್ಪಿದ್ದಾರೆ. 12 ಜನ ಕಣ್ಮರೆ ಆಗಿದ್ದಾರೆ. ಸಾವಿರಾರು ಜಾನುವಾರುಗಳು ಸಾವನ್ನಪ್ಪಿವೆ. ಜೊತೆಗೆ ಲೆಕ್ಕವಿಲ್ಲದಷ್ಟು ನಷ್ಟ ಆಗಿದೆ. 1240 ಪುನರ್ವಸತಿ ಕೇಂದ್ರವನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ. 3700 ಮಂದಿ ಈ ಕೇಂದ್ರದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ಇಷ್ಟಲ್ಲಾ ಆದ್ರು ರಾಜ್ಯ ಸರ್ಕಾರ ಕುಂಬಕರ್ಣ ನಿದ್ದೆಯಲ್ಲಿದೆ. ಕೇಂದ್ರ ನಾಯಕರು ಬಂದ್ರು ಹೋದ್ರು. ಮೋದಿ ಅಂದ್ರೆ ಶಾ, ಶಾ ಅಂದ್ರೆ ಮೋದಿ ಎನ್ನುತ್ತಾರೆ. ಅವರು ಕನಿಷ್ಠ ಪರಿಹಾರವನ್ನು ಘೋಷಣೆ ಮಾಡುತ್ತಾರೆ ಎಂದುಕೊಂಡಿದ್ದೆವು. ರಾಜ್ಯದಲ್ಲಿ ಕನಿಷ್ಠ ಒಂದು ಲಕ್ಷ ಕೋಟಿ ನಷ್ಟ ಆಗಿದೆ. ಸೇತುವೆ, ರಸ್ತೆಗಳು ನೆಲಸಮವಾಗಿವೆ. ಲಕ್ಷಾಂತರ ಎಕರೆ ಬೆಳೆ ನಷ್ಟವಾಗಿದೆ. ಸರ್ಕಾರ ವಾಮಮಾರ್ಗದಲ್ಲಿ ತರಲು ಏನೆಲ್ಲಾ ಪ್ರಯತ್ನ ನಡೆಸಿದ್ರು. ಶಾಸಕರನ್ನ ಖರೀದಿಸಲು ಎಷ್ಟೆಲ್ಲಾ ಖರ್ಚು ಮಾಡಿದ್ರು. ಈಗೇಕೆ ರಾಜ್ಯಕ್ಕೆ ರಿಲೀಫ್ ಫಂಡ್ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ಅತಿವೃಷ್ಟಿ ಹಾಗು ಅನಾವೃಷ್ಟಿ
ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಠಿಯಿದೆ. ಮತ್ತೊಂದು ಕಡೆ ಅನಾವೃಷ್ಠಿಯಿದೆ. ಚಿತ್ರದುರ್ಗ, ಪಾವಗಡ, ತುಮಕೂರು ಸೇರಿ ಕೆಲವೆಡೆ ನೀರಿಲ್ಲ. ಹೀಗಾಗಿ ರಾಜ್ಯದಲ್ಲಿ ಸಾಕಷ್ಟು ಸಂಕಷ್ಟ ಪರಿಸ್ಥಿತಿ ಉದ್ಭವಿಸಿದೆ. ಹೀಗಾಗಿ ನಷ್ಟದ ಬಗ್ಗೆ ವರದಿಯನ್ನ ಸರ್ಕಾರ ಕೇಂದ್ರಕ್ಕೆ ಕಳಿಸಬೇಕು. ರಾಜ್ಯದಲ್ಲಿ ಸರ್ಕಾರ ಬೀಳಿಸಲು ಏನೆಲ್ಲಾ ಸಾಹಸ ಮಾಡಿದ್ರು ಗೊತ್ತೇ ಇದೆ. ಕೆಲವು ಕಡೆ ಬರದಿಂದ ಕುಡಿಯುವುದಕ್ಕೆ ನೀರು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
163 ನೇ ವಿಧಿಯ ಪ್ರಕಾರ ಸಚಿವ ಸಂಪುಟ ರಚನೆಯಾಗಬೇಕು. ಸರ್ಕಾರ ಬಂದು 8 ದಿನದೊಳಗೆ ರಚನೆ ಮಾಡಬೇಕು. ಸರ್ಕಾರ ರಚಿಸಿ 17 ದಿನಗಳಾಗಿವೆ. ಆದರೆ ಸಚಿವ ಸಂಪುಟ ವಿಸ್ತರಣೆ ಮಾಡಿಲ್ಲ. ಸಂಪುಟ ರಚಿಸದೆ ಬಿಎಸ್ ವೈ ಒನ್ ಮ್ಯಾನ್ ಶೋ ಮಾಡ್ತಿದ್ದಾರೆ. ರಾಜ್ಯಪಾಲರು ಪದೇ ಪದೇ ಪತ್ರ ಬರೆಯುತ್ತಿದ್ದರು. ಈಗೇಕೆ ಅವರು ಸುಮ್ನನಾಗಿದ್ದಾರೆ. ಸಂಪುಟ ವಿಲ್ಲದೆ ಅದು ಸರ್ಕಾರ ಅನಿಸಿಕೊಳ್ಳುತ್ತದೆಯೇ. ಸರ್ಕಾರ ರಚಿಸದಿದ್ದರೆ ಕೂಡಲೇ ಸರ್ಕಾರ ಡಿಸ್ಮಿಸ್ ಮಾಡಿ. ದೇಶದ ಇತಿಹಾಸದಲ್ಲಿ ಈ ರೀತಿ ನಡೆದಿರಲಿಲ್ಲ. 16 ದಿನದವರೆಗೆ ಸಂಪುಟ ರಚಿಸದಿರುವುದನ್ನ ನೋಡಿಲ್ಲ. ಕೂಡಲೇ ಸರ್ಕಾರ ಅಮಾನತುಗೊಳಿಸಿ ಎಂದು ರಾಜ್ಯಪಾಲರಿಗೆ ಉಗ್ರಪ್ಪ ಒತ್ತಾಯ ಮಾಡಿದರು.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.