ಬೆಂಗಳೂರು: ಕನ್ನಡ ನಾಡಲ್ಲಿ ಕನ್ನಡಿಗನೇ ಸಾರ್ವಭೌಮ. ಖಾಸಗಿ ಸಂಸ್ಥೆಗಳಲ್ಲಿನ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ.50 ಮೀಸಲಾತಿ ನೀಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ನಾಡಿದ ಖ್ಯಾತ ವಿಜ್ಞಾನಿ ಸಿ.ಎನ್.ಆರ್. ರಾವ್ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿದ್ದರು. ಅಷ್ಟೇ ಅಲ್ಲ, ಸರ್.ಎಂ. ವಿಶ್ವೇಶ್ವರಯ್ಯ, ಯು.ಆರ್.ರಾವ್, ಎ.ಎಸ್.ಕಿರಣ್ ಕುಮಾರ್, ಸುಧಾಮೂರ್ತಿಯಂಥ ಗಣ್ಯರೆಲ್ಲಾ ಕನ್ನಡ ಮಾಧ್ಯಮದಲ್ಲೇ ಓದಿ ಎತ್ತರದ ಸ್ಥಾನ ಏರಿದ್ದಾರೆ. ಈ ರೀತಿ ಜೀವನದಲ್ಲಿ ಸಾಧಿಸುವ ಛಲ ಹಲವರಿಗಿದೆ. ಆದ್ರೆ ಸರಿಯಾದ ಅವಕಾಶಗಳ ಕೊರತೆಯಿಂದ ಹೆಚ್ಚಿನವರು ಬೆಳಕಿಗೆ ಬರದೇ ದೂರಾಗಿದ್ದಾರೆ. ಇಂತವರಿಗೆ ಅವಕಾಶ ಸಿಗಬೇಕೆಂಬ ಕೂಗು ಈಗೀಗ ಹೆಚ್ಚಾಗುತ್ತಿದೆ ಎಂದು ಬಳಿಗಾರ್ ಹೇಳಿದ್ರು.
ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಬಗ್ಗೆ ಗಮನ ಹರಿಸಬೇಕು. ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ.5ರ ಬದಲು ಶೇ 50 ಮೀಸಲಾತಿ ಸಿಗುವಂತೆ ನೋಡಿಕೋಳ್ಳಬೇಕು ಎಂದು ಮನು ಬಳಿಗಾರ್ ಸರ್ಕಾರವನ್ನು ಆಗ್ರಹಿಸಿದ್ರು.