ETV Bharat / state

ಬಿಜೆಪಿ ಸಂಪುಟದಲ್ಲಿ ವಲಸಿಗರಿಗೆ ಅರ್ಧ ಪಾಲು: ಪಕ್ಷನಿಷ್ಠರಿಗೆ ಉಳಿದ  ಸ್ಥಾನ? - minister post

ಸಮ್ಮಿಶ್ರ ಸರಕಾರ ಪತನದ ನಂತರ ಬಿಜೆಪಿಯ ಏಕ ಪಕ್ಷದ ಸರಕಾರ ಆಡಳಿತಕ್ಕೆ ಬಂದಿದೆಯಾದರೂ ಸಂಪೂರ್ಣ ಸಚಿವ ಸ್ಥಾನಗಳು ಮಾತ್ರ ದಕ್ಕುವ ಭಾಗ್ಯ ಬಿಜೆಪಿಗಿಲ್ಲ...!

bjp
author img

By

Published : Jul 27, 2019, 4:15 AM IST

ಬೆಂಗಳೂರು: ಸಚಿವ ಸಂಪುಟ ರಚನೆ ಕಸರತ್ತು ನಡೆಸುತ್ತಿರುವ ಬಿಜೆಪಿ, ಮಂತ್ರಿ ಮಂಡಲದ ಶೇ.50ರಷ್ಟು ಪಾಲನ್ನು ಭವಿಷ್ಯದಲ್ಲಿ ಪಕ್ಷ ಸೇರಲಿರುವ ವಲಸಿಗ ರಾಜಕಾರಣಿಗಳಿಗೆ ಮೀಸಲಿರಿಸಲು ನಿರ್ಧರಿಸಿದೆ ಎನ್ನಲಾಗ್ತಿದೆ.

ಒಟ್ಟು 34 ಸಚಿವ ಸ್ಥಾನಗಳಲ್ಲಿ ಅರ್ಧ ಭಾಗವನ್ನು ವಲಸಿಗರಿಗೆ ಮೀಸಲಿಟ್ಟು, ಉಳಿದ ಅರ್ಧದಷ್ಟು ಸ್ಥಾನಗಳನ್ನು ಪಕ್ಷದ ಶಾಸಕರಿಗೆ ಹಂಚಿಕೆ ಮಾಡಲಿದೆ ಎಂಬ ಮಾತುಗಳು ಹರಿದಾಡುತ್ತಿವೆ.

ಕಾಂಗ್ರೆಸ್ - ಜೆಡಿಎಸ್ ದೋಸ್ತಿ ಸರಕಾರ ಪತನಗೊಳ್ಳುವಲ್ಲಿ ಅತೃಪ್ತ ಶಾಸಕರ ಕೊಡುಗೆ ಅಪಾರವಾಗಿದೆ. ತಮ್ಮ ರಾಜಕೀಯ ಭವಿಷ್ಯವನ್ನೇ ಪಣವಾಗಿಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಂಡಾಯ ಶಾಸಕರತ್ತ ಬಿಜೆಪಿ ಕಣ್ಣು ನೆಟ್ಟಿದೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು, ಆಶೋತ್ತರಗಳ ಈಡೇರಿಕೆಗಾಗಿ ಸಚಿವ ಸ್ಥಾನಗಳನ್ನು‌ ಮೀಸಲಿಡಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

16 ಸಚಿವ ಸ್ಥಾನಗಳು ಮಾತ್ರ ಬಿಜೆಪಿ ಶಾಸಕರಿಗೆ ಲಭ್ಯವಿದ್ದು, ಜಾತಿ, ಪ್ರಾದೇಶಿಕತೆ, ಹಿರಿತನ, ಕೋಟಾ, ಪಕ್ಷ ಸಂಘಟನೆ ಹೀಗೆ ವಿವಿಧ ಕೆಟಗರಿಗಳಲ್ಲಿ ಸಚಿವರನ್ನು ಆಯ್ಕೆ ಮಾಡುವುದು ಸಿಎಂ ಯಡಿಯೂರಪ್ಪ ಹಾಗೂ ಪಕ್ಷದ ಹೈಕಮಾಂಡ್​ಗೆ ಸವಾಲಿನ ಕೆಲಸವೂ ಆಗಿದೆ.

ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಬಿಜೆಪಿ ಶಾಸಕರು ಸಚಿವ ಸ್ಥಾನದ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನಿಟ್ಟುಕೊಳ್ಳದೇ ಪಕ್ಷದ ತೀರ್ಮಾನಕ್ಕೆ ಬದ್ಧವಾಗಿರಬೇಕು ಎನ್ನುವ ಸಂದೇಶವನ್ನು ಈಗಾಗಲೇ ನೀಡಲಾಗಿದೆ.

ಸ್ವತಃ ಬಿಜೆಪಿ ಹೈಕಮಾಂಡ್​ ಸಚಿವ ಸ್ಥಾನಗಳನ್ನು ನಿರ್ಧಾರ ಮಾಡುತ್ತಿರುವುದರಿಂದ ಭಿನ್ನಮತಕ್ಕೆ ಹೆಚ್ವಿನ ಅವಕಾಶವಿಲ್ಲ ಎನ್ನುವ ಲೆಕ್ಕಾಚಾರ ರಾಜ್ಯದ ನಾಯಕರದ್ದಾಗಿದೆ. ಪ್ರಧಾನಿ ಮೋದಿ ಹಾಗು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಹಳ ಪ್ರಬಲವಾಗಿರುವುದರಿಂದ ಬಂಡಾಯ ಚಟುವಟಿಕೆಯ ಆಟ ನಡೆಯುವುದಿಲ್ಲವೆಂದು ಬಿಜೆಪಿಗರು ಅರಿತಿದ್ದಾರೆ. ಅದರಂತೆ ಪಕ್ಷ ನೀಡುವ ಜವಾಬ್ದಾರಿಯನ್ನು ಒಪ್ಪಿಕೊಳ್ಳುವ ಆಲೋಚನೆಯಲ್ಲಿ ತೊಡಗಿದ್ದಾರೆ.

Intro:ಬಿಜೆಪಿ ಸರಕಾರದಲ್ಲಿ ಶೇಕಡ ‌೫೦ ರಷ್ಟು
ಮಿನಿಸ್ಟರ್‌ ಪೋಸ್ಟ ವಲಸಿಗರಿಗೆ ಮೀಸಲು..!

ಬೆಂಗಳೂರು : ಸಮ್ಮಿಶ್ರ ಸರಕಾರ ಪತನದ ನಂತರ ಬಿಜೆಪಿಯ ಏಕ ಪಕ್ಷದ ಸರಕಾರ ಆಡಳಿತಕ್ಕೆ ಬಂದಿದೆಯಾದರೂ ಸಂಪೂರ್ಣ ಸಚಿವ ಸ್ಥಾನಗಳು ಮಾತ್ರ ದಕ್ಕುವ ಭಾಗ್ಯ ಬಿಜೆಪಿಗಿಲ್ಲ...!

‌ ಮಂತ್ತಿಮಂಡಲದ ಒಟ್ಟು ೩೪ ಸಚಿವ ಸಂಪುಟದಲ್ಲಿ ಶೇಕಡ ೫೦ ರಷ್ಟು ಸಚಿವ ಸ್ತಾನಗಳನ್ನು ಭವಿಷ್ಯದಲ್ಲಿ ಪಕ್ಷವನ್ನು ಸೇರುವ ವಲಸಿಗ ರಾಜಕಾರಣಿಗಳಿಗೆ ಮೀಸಲಿಡುವ ತೀರ್ಮಾನವನ್ನು ಬಿಜೆಪಿ ತೆಗೆದುಕೊಂಡಿದೆ. ಉಳಿದ ಅರ್ಧದಷ್ಟು ಸಚಿವ ಸ್ಥಾನಗಳನ್ನು ಪಕ್ಷದ ಶಾಸಕರಿಗೆ ಮಾತ್ರ ಹಂಚಿಕೆ ಮಾಡುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

Body: ಕಾಂಗ್ರೆಸ್ - ಜೆಡಿಎಸ್ ದೋಸ್ತಿ ಸರಕಾರ ಪತನಗೊಳ್ಳುವಲ್ಲಿ ಅತೃಪ್ತ ಶಾಸಕರ ಕೊಡುಗೆ ಅಪಾರವಾಗಿದೆ. ತಮ್ಮ ರಾಜಕೀಯ ಭವಿಷ್ಯವನ್ನೇ ಪಣವಾಗಿಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಂಡಾಯ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡು ಅವರ ಆಶೋತ್ತರಗಳನ್ನು ಈಡೇರಿಸಲು ಸಚಿವ ಸ್ಥಾನಗಳನ್ನು‌ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಪಕ್ಷಕ್ಕೆ ಬೇರೊಂದು ರಾಜಕೀಯ ಪಕ್ಷದಿಂದ ವಲಸೆ ಬರುವ ರಾಜಕಾರಣಿಗಳಿಗೆ ಅರ್ಧದಷ್ಟು ಸಚಿವ ಸ್ಥಾನ ಮೀಸಲಿಟ್ಟ ನಂತರ ಉಳಿದ ಸಚಿವ ಸ್ಥಾನಗಳನ್ನು ಮಾತ್ರ ಪಕ್ಷದ ಶಾಸಕರಿಗೆ ಹಂಚಲು ಪಕ್ಷದ ವೇದಿಕೆಯಲ್ಲಿ ಚಿಂತನೆ ನಡೆದಿದೆ.

ಹದಿನಾರು ಸಚಿವ ಸ್ಥಾನಗಳನ್ನು ಮಾತ್ರ ಬಿಜೆಪಿಗೆ ಲಭ್ಯವಿದ್ದು ಅವುಗಳನ್ನು ೧೦೫ ಶಾಸಕರಲ್ಲಿ ಜಾತಿವಾರು, ಪ್ರಾದೇಶಿಕ ವಾರು, ಹಿರಿತನ, ಸಂಘದ ಕೋಟಾ, ಪಕ್ಷ ಸಂಘಟನೆ ಹೀಗೆ ವಿವಿಧ ಕೆಟಗರಿಗಳನ್ನು ಪ್ರತಿನಿಧಿಸುವ ಶಾಸಕರಿಗೆ ಸಚಿವ ಸ್ಥಾನ ನೀಡಲು ಆಯ್ಕೆ ಮಾಡುವುದು ಸಿಎಂ ಯಡಿಯೂರಪ್ಪಗೆ ಹಾಗು ಪಕ್ಷದ ಹೈಕಮಾಂಡ್ ಗೆ ಸವಾಲಿನ ಕೆಲಸವಾಗಿದೆ.

ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬಹಳಷ್ಟು ದೊಡ್ಡದಾಗಿದ್ದು ಪಕ್ಷದ ಶಾಸಕರು ಸಚಿವ ಸ್ಥಾನದ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನಿಟ್ಟುಕೊಳ್ಳದೇ ಪಕ್ಷದ ತೀರ್ಮಾನಕ್ಕೆ ಬದ್ಧವಾಗಿರಬೇಕು ಎನ್ನುವ ಸಂದೇಶವನ್ನು ಈಗಾಗಲೇ ನೀಡಲಾಗಿದೆ.

ಬಿಜೆಪಿಯ ಹೈಕಮಾಂಡೇ ಸಚಿವ ಸ್ಥಾನಗಳನ್ನು ನಿರ್ಧಾರ ಮಾಡುತ್ತಿರುವುದರಿಂದ ಭಿನ್ನಮತಕ್ಕೆ ಹೆಚ್ವಿನ ಅವಕಾಶವಿಲ್ಲ ಎನ್ನುವ ಲೆಕ್ಕಾಚಾರ ರಾಜ್ಯದ ನಾಯಕರದ್ದಾಗಿದೆ. ಪ್ರಧಾನಿ ಮೋದಿ ಹಾಗು ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್ ಶಾ ಅವರು ಬಹಳ ಪ್ರಬಲವಾಗಿರುವುದರಿಂದ ಬಂಡಾಯ ಚಟುವಟಿಕೆಯ ಆಟ ನಡೆಯುವುದಿಲ್ಲವೆಂದು ಪಕ್ಷ ನೀಡುವ ಜವಾಬ್ದಾರಿಯನ್ನು ಒಪ್ಪಿಕೊಳ್ಳುವ ಆಲೋಚನೆಯನ್ನು ಬಿಜೆಪಿ‌ ಶಾಸಕರು ಮಾಡುತ್ತಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.