ETV Bharat / state

ವಾಹನ ಸವಾರರಿಗೆ ಮತ್ತೊಮ್ಮೆ ಸಿಹಿಸುದ್ದಿ ; ಸಂಚಾರಿ ದಂಡ ಪಾವತಿಗೆ ಶೇ 50ರಷ್ಟು ರಿಯಾಯಿತಿ - ಸಂಚಾರ ಉಲ್ಲಂಘನೆ ಪ್ರಕರಣ

ಶೇ.50ರಷ್ಟು ರಿಯಾಯಿತಿ ದರದಲ್ಲಿ ಸಂಚಾರಿ ದಂಡ ಪಾವತಿ ಮಾಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಸೆಪ್ಟೆಂಬರ್​ 9ರವರೆಗೂ ದಂಡ ಪಾವತಿಗೆ ಅವಕಾಶ ನೀಡಲಾಗಿದೆ. ಆದರೆ ಎಂದಿನಿಂದ ಇದಕ್ಕೆ ಅವಕಾಶ ಸಿಗಲಿದೆ ಎಂಬುದು, ಸರ್ಕಾರದ ಅಧಿಕೃತ ಪ್ರತಿ ನಮ್ಮ ಕೈ ಸೇರಿದ ಮೇಲೆ ಗೊತ್ತಾಗಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

50-percent-discount-on-payment-of-traffic-fine
ವಾಹನ ಸವಾರರಿಗೆ ಮತ್ತೊಮ್ಮೆ ಸಿಹಿಸುದ್ದಿ ; ಸಂಚಾರಿ ದಂಡ ಪಾವತಿಗೆ 50% ರಿಯಾಯಿತಿ
author img

By

Published : Jul 5, 2023, 8:10 PM IST

Updated : Jul 5, 2023, 9:30 PM IST

ಬೆಂಗಳೂರು : ಸಂಚಾರಿ ದಂಡ ಪಾವತಿಸಲು ಈ ಹಿಂದೆ ನೀಡಲಾಗಿದ್ದ ಅರ್ಧದಷ್ಟು ರಿಯಾಯಿತಿಯನ್ನು ಮತ್ತೊಮ್ಮೆ ಜಾರಿಗೆ ತರುವ ಮೂಲಕ ವಾಹನ ಸವಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಸಂಚಾರಿ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ಅವಕಾಶವನ್ನು ಮತ್ತೊಮ್ಮೆ ನೀಡಲಾಗಿದ್ದು, ಸೆಪ್ಟೆಂಬರ್ 9ರವರೆಗೂ ದಂಡ ಪಾವತಿಗೆ ಅವಕಾಶವಿರಲಿದೆ.

ಆದರೆ, ಕೇವಲ ಫೆಬ್ರವರಿ 11ಕ್ಕೂ ಮೊದಲು ಇ-ಚಲನ್ ಮೂಲಕ ದಾಖಲಾಗಿರುವ ಸಂಚಾರ ಉಲ್ಲಂಘನೆ ಪ್ರಕರಣಗಳಿಗೆ ಮಾತ್ರವೇ ಈ ರಿಯಾಯತಿ ಅವಕಾಶ ಅನ್ವಯವಾಗಲಿದೆ. ವಾಹನ ಸವಾರರು ಸಂಚಾರಿ ಪೊಲೀಸ್ ಪೊಲೀಸ್ ಆಯುಕ್ತರ ಕಚೇರಿ, ಬೆಂಗಳೂರು ಒನ್, ಪೇಟಿಎಂ, ಬೆಂಗಳೂರು ಸಂಚಾರಿ ಪೊಲೀಸ್ ವೆಬ್‌ಸೈಟ್ ಮೂಲಕ ವಾಹನ ಸವಾರರು ದಂಡ ಪಾವತಿಸಬಹುದಾಗಿದೆ.

ಸಂಚಾರಿ ದಂಡ ಪಾವತಿಗೆ ಮತ್ತೆ ರಿಯಾಯಿತಿ (ಸಂಗ್ರಹ ಚಿತ್ರ)

ಈ ಬಗ್ಗೆ ಪೊಲೀಸ್​ ಅಧಿಕಾರಿಗಳು ಹೇಳಿದ್ದೇನು?: ಸರ್ಕಾರ ಈ ಬಗ್ಗೆ ಇಂದು ಆದೇಶ ಹೊರಡಿಸಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಸರ್ಕಾರದ ಆದೇಶದ ಪ್ರತಿ ಪೊಲೀಸರ ಕೈಗೆ ಬಂದಿಲ್ಲ. ಪ್ರತಿ ದೊರೆತ ಬಳಿಕ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ, ಆಗ ಎಂದಿನಿಂದ ದಂಡ ವಸೂಲಿ ಮಾಡಬಹುದು ಎಂಬುದು ಸ್ಪಷ್ಟವಾಗಿ ಗೊತ್ತಾಗಲಿದೆ ಎಂದು ಸಂಚಾರಿ ಪೊಲೀಸ್​ ಅಧಿಕಾರಿಯೊಬ್ಬರು ರಿಯಾಯಿತಿ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಫೆಬ್ರವರಿ 2 ರಿಂದ 11ರವರೆಗೂ ವಾಹನ ಸವಾರರಿಗೆ ಸಂಚಾರಿ ದಂಡ ಪಾವತಿಸಲು ಶೇ 50ರಷ್ಟು ರಿಯಾಯತಿ ನೀಡಿ ರಾಜ್ಯ ಸರ್ಕಾರ ಘೋಷಿಸಿತ್ತು. ಆ ಅವಧಿಯಲ್ಲಿ ಬೆಂಗಳೂರು ಒಂದರಲ್ಲೇ 120 ಕೋಟಿಗೂ ಅಧಿಕ ದಂಡದ ಹಣ ಸಂಗ್ರಹವಾಗಿತ್ತು. ಬಳಿಕ ಫೆಬ್ರವರಿ 14ರಂದು ನಡೆದಿದ್ದ ಸಭೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ಸಭೆಯಲ್ಲಿ ಮತ್ತೊಮ್ಮೆ ರಿಯಾಯತಿ ಆಫರ್ ವಿಸ್ತರಣೆಯ ಬಗ್ಗೆ ತಿರ್ಮಾನಿಸಲಾಗಿತ್ತು. ನಂತರ ಮತ್ತೊಮ್ಮೆ ರಿಯಾಯಿತಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಸಂಚಾರಿ ಪೊಲೀಸ್ ಆಯುಕ್ತರ ಕಚೇರಿ, ಬೆಂಗಳೂರು ಒನ್, ಪೇಟಿಎಂ ಮೂಲಕ ದಂಡ ಪಾವತಿಸಲು ಅವಕಾಶ ನೀಡಲಾಗಿತ್ತು.

ಈ ಹಿಂದೆಯೂ ರಿಯಾಯಿತಿ ಕೊಟ್ಟಿದ್ದ ಸಂಚಾರ ಪೊಲೀಸ್ ಇಲಾಖೆ:​ ಫೆಬ್ರವರಿ 2 ರಿಂದ ಆರಂಭವಾಗಿದ್ದ ಶೇ 50 ರಿಯಾಯಿತಿಯಿಂದಾಗಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳ ಕೋಟ್ಯಂತರ ರೂಪಾಯಿ ದಂಡ ಸಂಗ್ರಹಣೆಯಾಗಿತ್ತು. ರಿಯಾಯತಿ ಘೋಷಿಸಿದ ಆರಂಭದ ದಿನದಿಂದ ಸುಮಾರು 8 ದಿನಗಳಲ್ಲಿ 31.11 ಲಕ್ಷ ಪ್ರಕರಣಗಳಿಗೆ ಸಂಬಂಧಿಸಿದ 85.83 ಕೋಟಿ ರೂಪಾಯಿ ದಂಡ ಸಂಗ್ರಹವಾಗಿತ್ತು. ದಂಡವನ್ನು ಪಾವತಿ ಮಾಡದೇ ಬಾಕಿ ಇಟ್ಟುಕೊಂಡಿದ್ದ ವಾಹನ ಸವಾರರು ಈ 50 ಶೇಕಡಾ ರಿಯಾಯಿತಿಯನ್ನು ಉತ್ತಮವಾಗಿ ಬಳಸಿಕೊಂಡಿದ್ದರು.

ರಾಜ್ಯದಲ್ಲಿ ಸುಮಾರು 1300 ಕೋಟಿ ರೂಗಳಿಗೂ ಅಧಿಕ ದಂಡ ಪಾವತಿಗೆ ಬಾಕಿ ಇರುವ ಕುರಿತು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಕಳವಳ ವ್ಯಕ್ತಪಡಿಸಿತ್ತು. ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಈ ಬಗ್ಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷ ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಬಳಿಕ ಈ ಸಮಸ್ಯೆಗೆ ಪರಿಹಾರವಾಗಿ ಶೇ 50 ರಿಯಾಯಿತಿ ನೀಡುವ ಕುರಿತು ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು.

ಇದನ್ನೂ ಓದಿ : ಸಂಚಾರಿ ದಂಡ ಪಾವತಿಗೆ 50ಶೇ ರಿಯಾಯಿತಿ ಅವಕಾಶಕ್ಕೆ ಉತ್ತಮ ಸ್ಪಂದನೆ: ನಾಲ್ಕೇ ದಿನದಲ್ಲಿ 25 ಕೋಟಿ ರೂ ದಂಡ ವಸೂಲಿ

Last Updated : Jul 5, 2023, 9:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.