ETV Bharat / state

2 ಕೋಟಿಗಾಗಿ ಬಾಲಕನ ಅಪಹರಣ​​: ಸಿನಿಮೀಯವಾಗಿ ಚೇಸ್ ಮಾಡಿ ಆರೋಪಿಗಳನ್ನು ಹಿಡಿದ ಪೊಲೀಸರು! - City Police Commissioner

11 ವರ್ಷದ ಬಾಲಕನ ಅಪಹರಣ ಪ್ರಕರಣ ಸಂಬಂಧ ಘಟನೆ ನಡೆದ 24 ಗಂಟೆಯೊಳಗೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಟ್ಟೆ ವ್ಯಾಪಾರಿಯ ಮಗನನ್ನು ಅಪಹರಿಸಿ 2 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.

5 Kidnapers are arrested like filmy style chasing in Bangalore
2 ಕೋಟಿಗಾಗಿ ಬಾಲಕನ ಕಿಡ್ನ್ಯಾಪ್​​: ಸಿನಿಮೀಯ ರೀತಿ ಚೇಸ್ ಮಾಡಿ ಹಿಡಿದ ಪೊಲೀಸರು
author img

By

Published : Aug 29, 2020, 2:24 PM IST

ಬೆಂಗಳೂರು: ಗಾಳಿಪಟ ಕೊಡಿಸುವ ಆಸೆ ತೋರಿಸಿ ಬಟ್ಟೆ ವ್ಯಾಪಾರಿಯ 11 ವರ್ಷದ ಪುತ್ರನನ್ನು ಅಪಹರಿಸಿ 2 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಬಂಧಿಸಲು ಹೋದ ಭಾರತಿ ನಗರ ಪೊಲೀಸರ ಮೇಲೆಯೇ ದಾಳಿಗೆ ಮುಂದಾದ ಆರೋಪಿಯ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಝೈನ್ ಗುಂಡು ತಗುಲಿ ಗಾಯಗೊಂಡು ಸರ್ಕಾರಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.‌ ಪ್ರಕರಣದಲ್ಲಿ ಫಾಹೀಂ,‌ ಮುಜಾಮಿಲ್, ಪೈಜಾನ್, ಮೊಹಮ್ಮದ್ ಷಾಹೀದ್, ಖಲೀಲ್ ಎಂಬುವವರು ಬಂಧನಕ್ಕೊಳಗಾಗಿದ್ದಾರೆ.

ಅಪಹರಣ ಪ್ರಕರಣ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯೆ

ಭಾರತಿ ನಗರದಲ್ಲಿ ವಾಸಿಸುತ್ತಿರುವ ಮೊಹಮ್ಮದ್ ಸಾಧೀಕ್ ಹಾಗೂ ಉಸ್ಮಾ ದಂಪತಿ ಕಾಮರಾಜ ರಸ್ತೆಯಲ್ಲಿ ಬಟ್ಟೆ ಅಂಗಡಿ ತೆರೆದಿದ್ದರು. ದಂಪತಿಯ 11 ವರ್ಷದ ಮಗ ಉಮರ್, ಶಾಲೆಗೆ ರಜೆ ಇದ್ದ ಪರಿಣಾಮ ಮನೆಯಂಗಳದಲ್ಲಿ ಆಟವಾಡುತ್ತಿದ್ದ. ಗುರುವಾರ ಸಂಜೆ ಮನೆ ಹತ್ತಿರ ಆಟವಾಡುತ್ತಿದ್ದ ಜಾಗಕ್ಕೆ ಅಪಹರಣಕಾರರು ಗಾಳಿಪಟ ಕೊಡಿಸುವ ಸೋಗಿನಲ್ಲಿ‌ ಪುಸಲಾಯಿಸಿ ಬೈಕ್​​​​ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಅದಾದ ಬಳಿಕ ಹಲಸೂರಿನಲ್ಲಿ ಕಾರಿನಲ್ಲಿ ಕಾಯುತ್ತಿದ್ದ ಅಪಹರಣಕಾರರ ಗುಂಪು ಬಾಲಕನನ್ನು ಬೆದರಿಸಿ ತುಮಕೂರಿಗೆ ಕರೆದೊಯ್ದಿದೆ.

ಪಾನೀಯದಲ್ಲಿ ನಿದ್ರೆ ಮಾತ್ರೆ ಹಾಕಿದ ಕಿರಾತಕರು
ಬಾಲಕ ಗಾಳಿಪಟ ಆಡುವ ಆಸಕ್ತಿ ಹೊಂದಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಆರೋಪಿಗಳು, ಮನೆ ಹತ್ತಿರ‌ ಗಾಳಿಪಟ ಕೊಡಿಸುವ ಆಸೆ ತೋರಿಸಿ‌‌ ಅಪಹರಣ ಮಾಡಿದ್ದಾರೆ.‌ ಯಾರಿಗೂ ಅನುಮಾನ ಬಾರದಿರಲು ಬಾಲಕನಿಗೆ ಆರೋಪಿಗಳು ತಂಪು ಪಾನೀಯದಲ್ಲಿ ನಿದ್ರೆ ಮಾತೆ ಹಾಕಿ ಕುಡಿಸಿದ್ದಾರೆ.

ಬಾಲಕನಿಗಾಗಿ ಕುಟುಂಬಸ್ಥರು ಹುಡುಕಾಡಿದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ.‌ ರಾತ್ರಿ 2 ಗಂಟೆ ಸುಮಾರಿಗೆ ಅಪಹರಣಕಾರರು ಕರೆ ಮಾಡಿ‌ ಅಂಗಡಿಯಲ್ಲಿ ಪತ್ರ ಹಾಕಿದ್ದೇವೆ, ತೆಗೆದುಕೊಳ್ಳಿ ಎಂದಿದ್ದಾರೆ. ನಿಮ್ಮ ಮಗನನ್ನು ಅಪಹರಣ ಮಾಡಿದ್ದೇವೆ. ಸುರಕ್ಷಿವಾಗಿ ಮಗ ಬರಬೇಕಾದರೆ 2 ಕೋಟಿ ರೂಪಾಯಿ ಕೊಡಿ. ಪೊಲೀಸರಿಗೆ ತಿಳಿಸಿದರೆ ಮಗನನ್ನು ಸಾಯಿಸುವುದಾಗಿ ಪತ್ರದಲ್ಲಿ ಧಮ್ಕಿ ಹಾಕಿದ್ದಾರೆ‌.‌ ಈ ವಿಷಯ ಪೊಲೀಸರಿಗೆ ತಿಳಿಯುತ್ತಿದ್ದಂತೆ ಡಿಸಿಪಿ ಡಾ. ಶರಣಪ್ಪ 4 ವಿಶೇಷ ತಂಡ ರಚಿಸಿ ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಿನಿಮೀಯ ಶೈಲಿಯಲ್ಲಿ 15 ಕೀ.ಮೀ. ಚೇಸ್

ಅಪಹರಣಕಾರರು ತುಮಕೂರಿನಲ್ಲಿ ಇರುವುದಾಗಿ ಪತ್ತೆ ಹಚ್ಚಿದ ಪೊಲೀಸರು ಆರೋಪಿಗಳ ಕಾರನ್ನು ಹಿಂಬಾಲಿಸಿದ್ದಾರೆ. ‌‌ಪೊಲೀಸರನ್ನು ಕಂಡೊಡನೆ ಪರಾರಿಯಾಗಿದ್ದಾರೆ. ಸುಮಾರು 15 ಕಿ.ಮೀ.ಗಳಷ್ಟು ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ತುಮಕೂರಿನ ಗೌತಮ ನಗರದಲ್ಲಿ ಬಂಧಿಸಿದ್ದಾರೆ.

ಇನ್ನೊಂದೆಡೆ ಬೆಂಗಳೂರಿನಲ್ಲಿ ಮಾನಿಟರ್ ಮಾಡುತ್ತಿದ್ದ ಆರೋಪಿ ಮೊಹಮ್ಮದ್​ನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ‌ ಮುಂದಾಗಿದ್ದಾನೆ.‌ ಈ ವೇಳೆ ಆತ್ಮರಕ್ಷಣೆಗಾಗಿ ಆರೋಪಿ ಮೇಲೆ ಗುಂಡು ಹಾರಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ತಿಳಿಸಿದ್ದಾರೆ.
ಮತ್ತೊಂದೆಡೆ ಬಾಲಕ‌ನ ಪೋಷಕರು ಅಪಹರಣಕ್ಕೂ ಮುನ್ನ ನಡೆದ ಘಟನಾವಳಿ ಕುರಿತು ಮಾತನಾಡಿ, ಕೃತ್ಯ ನಡೆದ 24 ಗಂಟೆಯೊಳಗೆ ಮಗನನ್ನು ಉಳಿಸಿದ ಪೊಲೀಸರಿಗೆ ಕೃತಜ್ಞತೆ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.