ಬೆಂಗಳೂರು: ರಾಜ್ಯ ಕೃಷಿ ಮಾರಾಟ ಮಂಡಳಿಯ 48 ಕೋಟಿ ರೂಪಾಯಿ ದುರ್ಬಳಕೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಇಬ್ಬರು ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ.
ಲಕ್ಷ್ಮಣ್ ಹಾಗೂ ಸಿರಿಲ್ ಎಂಬುವರು ಬಂಧಿತ ಆರೋಪಿಗಳು. ನಗರದ ಆಂಧ್ರ ಬ್ಯಾಂಕ್ನಲ್ಲಿ ಲೆಕ್ಕಪರಿಶೋಧಕರಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ್, ಈ ಹಿಂದೆ ರಾಜ್ಯ ಲೋಕಾಯುಕ್ತ ಕಚೇರಿಯಲ್ಲಿ ಐದು ವರ್ಷಗಳ ಕಾಲ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.
ಆರೋಪಿ ಲಕ್ಷ್ಮಣ್ ರಾಜ್ಯ ಕೃಷಿ ಮಾರಾಟ ಮಂಡಳಿಯು ರಾಜಾಜಿನಗರದ ಆಂಧ್ರ ಬ್ಯಾಂಕ್ನಲ್ಲಿದ್ದ ಕೃಷಿ ಆವರ್ತನ ನಿಧಿ ನೂರು ಕೋಟಿ ರೂಪಾಯಿ ಹಣವನ್ನು ಉತ್ತರಹಳ್ಳಿಯ ಸಿಂಡಿಕೇಟ್ ಬ್ಯಾಂಕ್ನಲ್ಲಿ ಠೇವಣಿ ಇರಿಸುವುದಾಗಿ ಹೇಳಿ ದುರ್ಬಳಕೆ ಮಾಡಿದ್ದರು. ಇನ್ನು ಸತ್ಯಾಂಶವನ್ನು ಲಕ್ಷ್ನಣ್ ಒಪ್ಪಿಕೊಂಡಿದ್ದು, ಕಮಿಷನ್ ಆಸೆಗಾಗಿ ಈ ರೀತಿ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.