ಬೆಂಗಳೂರು: ಹೊಸ ವರ್ಷದ ಪ್ರಯುಕ್ತ ರಾಜ್ಯ ಸರ್ಕಾರ ಆಡಳಿತ ವರ್ಗಕ್ಕೆ ಸಿಹಿ ಸುದ್ದಿ ನೀಡಿದೆ. 46 ಐಎಎಸ್ ಅಧಿಕಾರಿಗಳೊಗೆ ವೇತನ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ.
ಹೊಸ ವರ್ಷ ಹಿನ್ನೆಲೆ ರಾಜ್ಯ ಸರ್ಕಾರ ಅಧಿಕಾರಿ ವರ್ಗಕ್ಕೆ ಗುಡ್ ನ್ಯೂಸ್ ನೀಡಿದೆ. 46 ಐಎಎಸ್ ಅಧಿಕಾರಿಗಳಿಗೆ ವೇತನ ಮುಂಬಡ್ತಿ ನೀಡುವ ಮೂಲಕ ಸಿಹಿ ಸುದ್ದಿ ನೀಡಿದೆ. ಐಎಎಸ್ ಅಧಿಕಾರಿಗಳಾದ ಅಂಜುಂ ಫರ್ವೇಜ್, ಮಂಜುನಾಥ ಪ್ರಸಾದ್, ಅರವಿಂದ ಶ್ರೀವಾತ್ಸವ್, ಶ್ರೀಕರ್, ಸುಭೋದ್ ಯಾದವ್, ಖುಷ್ಬೂ ಚೌಧರಿ, ದೀಪ್ತಿ ಆದಿತ್ಯ ಕಾನಡೆ, ರಾಜೇಂದ್ರ ಚೋಳನ್ಗೆ ವೇತನ ಮುಂಬಡ್ತಿ ನೀಡಲಾಗಿದೆ.
ಇನ್ನು ಉಜ್ವಲ್ ಕುಮಾರ್ ಘೋಷ್, ದೀಪಾ. ಎಂ., ರಮಣದೀಪ್ ಚೌಧರಿ, ಕಾವೇರಿ, ಸುಶ್ಮಾ ಗೋಡ್ಬೋಲೆ, ಶೆಟ್ಟೆನ್ನವರ್, ಅಭಿರಾಂ ಶಂಕರ್, ಸಿಂದು ಬಿ ರೂಪೇಶ್, ಕುರ್ಮಾ ರಾವ್, ಶರತ್. ಬಿ., ಸಿ.ಎನ್. ಶ್ರೀಧರ, ಲಕ್ಷ್ಮೀಕಾಂತ ರೆಡ್ಡಿ, ಲಕ್ಷ್ಮಿ ಪ್ರಿಯ. ಕೆ., ಮೊಹಮ್ಮದ್ ರೋಷನ್ ಸೇರಿ ಒಟ್ಟು 46 ಐಎಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ವೇತನ ಮುಂಬಡ್ತಿ ನೀಡಿದೆ. ಇನ್ನು ಕೆಲ ಕೆಎಎಸ್ ಅಧಿಕಾರಿಗಳಿಗೂ ವೇತನ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಇದನ್ನೂ ಓದಿ: ಅಭಿವೃದ್ಧಿ ಕಾರ್ಯ ಜಾರಿಗಾಗಿ ಕೆಎಎಸ್ ಅಧಿಕಾರಿಗಳಿಗೆ ತಾಲೂಕು ಉಸ್ತುವಾರಿ: ಸರ್ಕಾರದ ಆದೇಶ