ETV Bharat / state

ರಾಜ್ಯದಲ್ಲಿ ಮುಂದುವರೆದ ಕೊರೊನಾ ಆರ್ಭಟ; ಮತ್ತೆ ಡಬಲ್​ ಆಯ್ತು ಸೋಂಕಿತರ ಸಂಖ್ಯೆ! - ಇಂದು ಹಲವರು ಜನರಿಗೆ ಕೊರೊನಾ

Karnataka COVID update: ರಾಜ್ಯದಲ್ಲಿ ಇಂದು ಕೊರೊನಾ ಭಾರೀ ಏರಿಕೆ ಕಂಡಿದೆ. ಕೊರೊನಾ ಆರ್ಭಟ ಮುಂದುವರೆದಿದ್ದು ಇಂದು 4246 ಮಂದಿಗೆ ಸೋಂಕು ದೃಢಪಟ್ಟಿದೆ.

ರಾಜ್ಯದಲ್ಲಿ ಮುಂದುವರೆದ ಕೊರೊನಾ ಆರ್ಭಟ
ರಾಜ್ಯದಲ್ಲಿ ಮುಂದುವರೆದ ಕೊರೊನಾ ಆರ್ಭಟ
author img

By

Published : Jan 5, 2022, 7:29 PM IST

Updated : Jan 5, 2022, 7:54 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. ಇಂದು 1,27,328 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಇದರಲ್ಲಿ 4246 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 30,17,572 ಏರಿಕೆ ಆಗಿದೆ.

362 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈ ತನಕ 29,61,772 ಡಿಸ್ಚಾರ್ಜ್ ಆಗಿದ್ದಾರೆ.‌ ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,257 ಏರಿಕೆ ಆಗಿದೆ.

ಇತ್ತ ಸಕ್ರಿಯ ಪ್ರಕರಣಗಳು ಏರಿಕೆಯಾಗುತ್ತಲೇ ಇದ್ದು, ಸದ್ಯ 17,414 ರಷ್ಟಿದೆ. ಇವತ್ತಿನ ಪಾಸಿಟಿವ್ ಪ್ರಮಾಣ 3.33 ರಷ್ಟಿದ್ದರೆ ಸಾವಿನ ಪ್ರಮಾಣ 0.04 ರಷ್ಟಿದೆ. ವಿಮಾನ ನಿಲ್ದಾಣಕ್ಕೆ ಬಂದ 1,519 ಪ್ರಯಾಣಿಕರು ಕೊರೊನಾ ತಪಾಸಣೆಗೊಳಪಟ್ಟಿದ್ದಾರೆ.ಹೈರಿಸ್ಕ್ ದೇಶದಿಂದ ಸುಮಾರು 112 ಜನರು ಆಗಮಿಸಿದ್ದಾರೆ.‌

ಬೆಂಗಳೂರಲ್ಲಿ 24 ಗಂಟೆಗಳಲ್ಲೇ ಡಬಲ್ ಆಗ್ತಿವೆ ಸೋಂಕಿತರ ಸಂಖ್ಯೆ:
ನಗರದಲ್ಲಿ ಇಂದು ಒಂದೇ ದಿನ 3605 ಜನರಲ್ಲಿ ಕೋವಿಡ್ ದೃಢಪಟ್ಟಿದೆ. ಇಬ್ಬರು ಮೃತಪಟ್ಟಿದ್ದಾರೆ. ಕಳೆದ ಮೂರು ದಿನದಿಂದ ಸೋಂಕಿತರ ಸಂಖ್ಯೆ ಪ್ರತಿನಿತ್ಯ ದುಪ್ಪಟ್ಟಾಗ್ತಿವೆ. ಮೂರೇ ದಿನದಲ್ಲಿ ಒಂದು ಸಾವಿರ ಬರುತ್ತಿದ್ದ ಸೋಂಕಿತರ ಸಂಖ್ಯೆ ಮೂರು ಸಾವಿರಕ್ಕೆ ಏರಿಕೆಯಾಗಿದೆ. ನಗರದ ಪಾಸಿಟಿವಿಟಿ ದರವೂ 6.45 ಕ್ಕೆ ಏರಿಕೆಯಾಗಿದೆ. ರಾಜ್ಯದ ಒಟ್ಟು ಪ್ರಕರಣಗಳ ಲೈಕಿ 85% ಪ್ರಕರಣ ರಾಜಧಾನಿಯಲ್ಲೇ ಪತ್ತೆಯಾಗ್ತಿವೆ. ನಗರದಲ್ಲಿ ಈವರೆಗೆ 151 ಮೈಕ್ರೋ ಕಂಟೈನ್ ಮೆಂಟ್ ಗಳಿವೆ. ಈ ಪೈಕಿ 1436 ಮನೆಗಳಲ್ಲಿ ಸೋಂಕಿತರಿದ್ದಾರೆ. 95 ಪಾರ್ಡ್ ಮೆಂಟ್ ಗಳನ್ನು ಕಂಟೈನ್ ಮೆಂಟ್ ವಲಯವೆಂದು ಘೋಷಿಸಲಾಗಿದೆ. ನಗರದ ಒಟ್ಟು ಸೋಂಕಿತರ ಸಂಖ್ಯೆ 12,72,050 ಗೆ ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆ 16,413 ಕ್ಕೆ ಏರಿಕೆಯಾಗಿದೆ‌. ಸಕ್ರಿಯ ಪ್ರಕರಣಗಳು 14,762 ಇವೆ.

ರೂಪಾಂತರಿ ಅಪ್​ಡೇಟ್ಸ್

  • ಅಲ್ಫಾ- 156
  • ಬೀಟಾ-08
  • ಡೆಲ್ಟಾ- 2537
  • ಡೆಲ್ಟಾ ಸಬ್ ಲೈನೇಜ್- 1350
  • ಕಪ್ಪಾ-160
  • ಈಟಾ-01
  • ಒಮಿಕ್ರಾನ್- 226

Last Updated : Jan 5, 2022, 7:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.