ETV Bharat / state

ರಾಜ್ಯದಲ್ಲಿ ವಾರಕ್ಕೆ 400 ಮಂದಿಗೆ ಬ್ಲ್ಯಾಕ್ ಫಂಗಸ್ ತಗಲುವ ಸಾಧ್ಯತೆ: ಹೈಕೋರ್ಟ್​ಗೆ ಮಾಹಿತಿ - Chief justice A S Oka

ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.

ಹೈಕೋರ್ಟ್​
ಹೈಕೋರ್ಟ್​
author img

By

Published : May 24, 2021, 7:24 PM IST

ಬೆಂಗಳೂರು: ರಾಜ್ಯದಲ್ಲಿ ವಾರಕ್ಕೆ 400ಕ್ಕೂ ಅಧಿಕ ಮಂದಿಗೆ ಬ್ಲಾಕ್ ಫಂಗಸ್ ರೋಗ ತಗುಲುವ ಅಂದಾಜು ಇರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್​​ಗೆ ಮಾಹಿತಿ ನೀಡಿದೆ. ಹಾಗೆಯೇ, ಚಿಕಿತ್ಸೆಗೆ ಅಗತ್ಯವಿರುವ 'ಲೈಪೊಸೋಮಲ್ ಆ್ಯಂಫೋಟೆರಿಸಿನ್ ಬಿ' ಚುಚ್ಚುಮದ್ದಿನ 20 ಸಾವಿರ ವಯಲ್ಸ್​ಗಳನ್ನು ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದೆ.

ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ ಈ ಮಾಹಿತಿ ನೀಡಲಾಗಿದೆ.

ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚಲಿರುವ ಬ್ಲ್ಯಾಕ್ ಫಂಗಸ್ ಪ್ರಕರಣಗಳಿಗೆ ಅನುಗುಣವಾಗಿ ಚುಚ್ಚುಮದ್ದು ಪೂರೈಸಲು ಮೇ 12ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಚಿಕಿತ್ಸೆಗೆ ಅಗತ್ಯವಿರುವ 'ಲೈಪೊಸೋಮಲ್ ಆ್ಯಂಫೋಟೆರಿಸಿನ್ ಬಿ'ಯ 20 ಸಾವಿರ ವಯಲ್‌ಗಳನ್ನು ಪೂರೈಸುವಂತೆ ಮನವಿ ಮಾಡಿದ್ದೇವೆ. ಬ್ಯ್ಲಾಕ್ ಫಂಗಸ್ ರೋಗಕ್ಕೆ ತುತ್ತಾದವರಿಗೆ 10 ರಿಂದ 12 ದಿನಗಳವರೆಗೆ ಚಿಕಿತ್ಸೆ ನೀಡಬೇಕಿದ್ದು, ಚಿಕಿತ್ಸಾ ಅವಯಲ್ಲಿ ನಿತ್ಯ 4 ವಯಲ್‌ಗಳಂತೆ ರೋಗಿಯೊಬ್ಬರಿಗೆ ಒಟ್ಟು 50 ವಯಲ್‌ಗಳ ಅಗತ್ಯವಿರುತ್ತದೆ. ಈ ಅಧಾರದಲ್ಲಿ 20 ಸಾವಿರ ವಯಲ್‌ಗಳನ್ನು ಪೂರೈಸುವಂತೆ ಕೇಂದ್ರಕ್ಕೆ ಮನವಿ ಮಾಡಿರುವುದಾಗಿ ಸರ್ಕಾರ ತಿಳಿಸಿದೆ.

ಅಲ್ಲದೇ, ರಾಜ್ಯ ಔಷಧ ಪೂರೈಕೆ ನಿಗಮದ ಮೂಲಕ ಖಾಸಗಿ ಔಷಧ ತಯಾರಕರಿಂದ 1,050 ವಯಲ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಮೇ 17ಕ್ಕೆ ಅನುಗುಣವಾಗಿ ಒಟ್ಟು 450 ವಯಲ್‌ಗಳನ್ನು ರಾಜ್ಯ ಸ್ವೀಕರಿಸಿದೆ. ಈ ಚುಚ್ಚುಮದ್ದನ್ನು ಕೋವಿಡ್ ಚಿಕಿತ್ಸೆಗೆ ಬಳಸುವ 'ಟೊಸಿಲಿಜುಮಾಬ್' ಚುಚ್ಚುಮದ್ದು ಪೂರೈಸುವ ಮಾದರಿಯಲ್ಲಿಯೇ ಹಂಚಿಕೆ ಮಾಡಲಾಗುತ್ತಿದ್ದು, ರಾಜ್ಯ ವಾರ್ ರೂಂ‌ಗಳಲ್ಲಿ ಇದರ ಹಂಚಿಕೆಯ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.