ಬೆಂಗಳೂರು: 40 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಬೈಕ್ ಸವಾರನಿಂದ ದಂಡ ವಸೂಲಿ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಓದಿ: ಬ್ಯಾಂಕ್ ದರೋಡೆಗೆ ವಿಫಲ ಯತ್ನ : ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಜೆಪಿ ನಗರ ಸಂಚಾರ ಠಾಣೆ ಎಎಸ್ಐ ನಾಗೇಶ್ರಿಂದ ದಂಡ ವಸೂಲಿ ಮಾಡಲಾಗಿದೆ. 40 ಬಾರಿ ಸಂಚಾರ ಉಲ್ಲಂಘನೆ ಮಾಡಿದ್ದ ಕೆಎ 04 ಹೆಚ್ ಜೆಡ್ 1395 ಸಂಖ್ಯೆಯ ದ್ವಿಚಕ್ರ ವಾಹನ ಸವಾರನಿಂದ ಒಟ್ಟು 16,700 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಇನ್ನು ಈ ವಾಹನ ಸವಾರ ಹಲವಾರು ಬಾರಿ ಸಿಗ್ನಲ್ ಜಂಪ್, ಹೆಲ್ಮೆಟ್ ರಹಿತ ಚಾಲನೆ ಹೀಗೆ ಹಲವಾರು ರೀತಿಯ ನಿಯಮ ಉಲ್ಲಂಘನೆ ಮಾಡಿದ್ದಾನೆ. ಇದೇ ರೀತಿ ನಿಯಮ ಉಲ್ಲಂಘನೆ ಮಾಡಿದ ವೇಳೆ ಜೀವನಭೀಮನಗರ ಸಂಚಾರ ವಿಭಾಗದ ಠಾಣೆ ASI ನಾಗೇಶ್ ಈತನ ವಾಹನ ಪರಿಶೀಲಿಸಿದಾಗ ಒಟ್ಟು 40 ಬಾರಿ ನಿಯಮ ಉಲ್ಲಂಘಿಸಿದ್ದು ಬೆಳಕಿದೆ ಬಂದಿದೆ.