ETV Bharat / state

ಹನುಮನ ಭಕ್ತರು ಈ 40% ಕಮಿಷನ್ ಸರ್ಕಾರದ ವಿರುದ್ಧ ಗದಾಪ್ರಹಾರ ನಡೆಸಲಿದ್ದಾರೆ: ಎಐಸಿಸಿ ವಕ್ತಾರ ಗೌರವ್ ವಲ್ಲಭ್ - AICC spokesperson Gaurav Vallabh

ಚುನಾವಣೆ ಪ್ರಚಾರಕ್ಕೆ ಬರುತ್ತಿರುವ ಪ್ರಧಾನಿ ಮತ್ತು ಅವರ ತಂಡ ರಾಜ್ಯದಲ್ಲಿ ಬೆಲೆ ಏರಿಕೆ ಬಗ್ಗೆ ಮಾತನಾಡಿಲ್ಲ ಏಕೆ ಎಂದು ಗೌರವ್ ವಲ್ಲಭ್ ಪ್ರಶ್ನಿಸಿದ್ದಾರೆ.

ಎಐಸಿಸಿ ವಕ್ತಾರ ಗೌರವ್ ವಲ್ಲಭ್
ಎಐಸಿಸಿ ವಕ್ತಾರ ಗೌರವ್ ವಲ್ಲಭ್
author img

By

Published : May 2, 2023, 11:05 PM IST

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಂಡ ಕಳೆದ ಕೆಲವು ತಿಂಗಳಿನಿಂದ ರಾಜ್ಯಕ್ಕೆ ಆಗಮಿಸುತ್ತಿದ್ದು, 40% ಕಮಿಷನ್ ಸರ್ಕಾರದ ಬಗ್ಗೆ ಮಾತನಾಡಿಲ್ಲ. ರಾಜ್ಯದಲ್ಲಿ ಬೆಲೆ ಏರಿಕೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು.

ಶ್ರೀಮಂತರು ಹಾಗೂ ಬಡವರ ನಡುವಣ ಅಂತರ ಹೆಚ್ಚಾಗುತ್ತಿರುವುದರ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಅವರು ಚುನಾವಣೆ ಸಮಯದಲ್ಲಿ ಸಮಾಜವನ್ನು ಒಡೆಯಲು ತಮ್ಮ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಈ ಚುನಾವಣೆಯನ್ನು ಧಾರ್ಮಿಕ ವಿಚಾರದ ಮೇಲೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಪ್ರಧಾನಮಂತ್ರಿಗಳೇ ಭಗವಾನ್ ಹನುಮಂತನನ್ನು ಪೂಜಿಸುವ ಮಂಗಳವಾರದಂದು ನೀವು ಒಂದು ಪಾಪವನ್ನು ಮಾಡಿದ್ದೀರಿ. ನೀವು ಒಂದು ಸಂಘಟನೆ ಹಾಗೂ ಕೆಲವು ವ್ಯಕ್ತಿಗಳನ್ನು ಭಗವಂತ ಹನುಮಂತನಿಗೆ ಹೋಲಿಕೆ ಮಾಡಿದ್ದೀರಿ. ಇದನ್ನು ಯಾರೊಬ್ಬರೂ ಕ್ಷಮಿಸುವುದಿಲ್ಲ. ಕನ್ನಡಿಗರು ಕೂಡ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಗೌರವ್ ವಲ್ಲಭ್ ಹೇಳಿದ್ದಾರೆ.

ಹನುಮಂತ ರಾಜಧರ್ಮ ಪಾಲನೆಯ ಪ್ರತೀಕ, ಹನುಮಂತ ಗೌರವ ಹಾಗೂ ಕರ್ತವ್ಯದ ಪ್ರತೀಕ, ಹನುಮಂತ ಸೇವೆ ಹಾಗೂ ತ್ಯಾಗ ಪ್ರತೀಕ. ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ, ಶತೃತ್ವವನ್ನು ಬಿತ್ತುವ, ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹಲವು ಬಾರಿ ಹೇಳಿದರೂ ನೀವು ಅದನ್ನು ಪಾಲಿಸಲಿಲ್ಲ. ಇಂತಹ ಸಂಘಟನೆಗಳನ್ನು ನೀವು ಹನುಮಂತನಿಗೆ ಹೋಲಿಕೆ ಮಾಡಿ ದೊಡ್ಡ ಪಾಪವನ್ನು ಎಸಗಿದ್ದೀರಿ. ನೀವು ದೇಶ, ಸಮಾಜದಲ್ಲಿ ಜಾತಿ ಧರ್ಮದ ಆಧಾರದ ಮೇಲೆ ಒಡೆಯುವ ಸಂಘಟನೆಗಳನ್ನು ಹನುಮಂತನಿಗೆ ಹೋಲಿಕೆ ಮಾಡಿದ್ದೀರಿ. ಹನುಮಂತ ಪವಿತ್ರತೆಯ ಪ್ರತೀಕ. ಇಂತಹವರನ್ನು ಹನುಮಂತನ ಜತೆ ಹೋಲಿಕೆ ಮಾಡಿ ತಪ್ಪು ಮಾಡಿದ್ದೀರಿ ಎಂದು ಗೌರವ್ ವಲ್ಲಭ್ ಕಿಡಿಕಾರಿದರು.

ಪ್ರಧಾನ ಮಂತ್ರಿಗಳೇ ದಲಿತ ಯುವಕನೊಬ್ಬನನ್ನು ಬಜರಂಗದಳ ಸಂಘಟನೆ ಹತ್ಯೆ ಮಾಡಿದೆ. ಇಂತಹ ಸಂಘಟನೆಯನ್ನು ನೀವು ಹನುಮಂತನ ಜತೆ ಹೋಲಿಕೆ ಮಾಡುತ್ತೀರಾ? ನೀವು ಈ ಮೃತ ಯುವಕನ ಮನೆಗೆ ಭೇಟಿ ನೀಡಿದ್ದೀರಾ? ಈತನ ಹತ್ಯೆ ಮಾಡಿದವರ ವಿರುದ್ದ ಪ್ರಕರಣ ದಾಖಲಿಸಲು ನಿಮ್ಮ 40% ಸರ್ಕಾರಕ್ಕೆ ಮನವಿ ಮಾಡಿದ್ದೀರಾ? ನಿಮ್ಮ ಪ್ರಕಾರ ದಲಿತರು ಹಿಂದೂಗಳಲ್ಲವೇ? ಅವರೂ ಹಿಂದುಗಳು ಎಂದು ಭಾವಿಸಿದ್ದರೆ ಈತನ ಹತ್ಯೆ ಮಾಡಿದವರು ವಿರುದ್ದ ಪ್ರಕರಣ ದಾಖಲಿಸಲು ಯಾಕೆ ಸೂಚನೆ ನೀಡಲಿಲ್ಲ? ಎಂದು ಗೌರವ್ ವಲ್ಲಭ್ ಪ್ರಶ್ನಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ರಾಜಧರ್ಮ ಪಾಲನೆ ಮಾಡಲು ಹೇಳಿದ್ದರು. ಸಮಾಜದಲ್ಲಿ ಯಾರು ದ್ವೇಷ, ಶತೃತ್ವ ಭಾವನೆಯನ್ನು ಹರಡುತ್ತಾರೋ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದು ನಿಜವಾದ ರಾಜಧರ್ಮ. ಆದರೆ ಕಾಂಗ್ರೆಸ್ ಸರ್ಕಾರ ಇಂತಹ ಸಂಘಟನೆಗಳ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹನುಮಂತ ನಿಷ್ಪಕ್ಷಪಾತದ ಪ್ರತೀಕ. ಹನುಮಂತ ಸೇವೆ, ತ್ಯಾಗದ ಪ್ರತೀಕ. ಬಿ.ಎಲ್ ಸಂತೋಷ್ ಅವರೇ ನೀವು ಈ ವಿಚಾರದಲ್ಲಿ ಪ್ರಧಾನಮಂತ್ರಿಗಳಿಗೆ ಸಲಹೆ ನೀಡುತ್ತಿದ್ದೀರಿ ಎಂದು ತಿಳಿದಿದೆ.

ನೀವು ಈ ದಲಿತ ಯುವಕನ ಮನೆಗೆ ಭೇಟಿ ನೀಡಿದ್ದೀರಾ? ಸಮಾಜದಲ್ಲಿ ಯಾವುದೇ ವ್ಯಕ್ತಿ ಅಥವಾ ಗುಂಪು ದ್ವೇಷ ಹಾಗೂ ಶತೃತ್ವವನ್ನು ಪಸರಿಸಿ ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವವರಿಗೆ ನಾವು ಅವಕಾಶ ನೀಡುವುದಿಲ್ಲ. ಅಂತಹವರ ವಿರುದ್ಧ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪ್ರಧಾನಮಂತ್ರಿಗಳು ಹನುಮಂತನನ್ನು ಈ ಸಂಘಟನೆಗಳಿಗೆ ಹೋಲಿಕೆ ಮಾಡಿರುವ ಪಾಪವನ್ನು ಹನುಮಂತನ ಭಕ್ತರು ಕ್ಷಮಿಸುವುದಿಲ್ಲ. ಹನುಮಂತನ ಭಕ್ತರು ಈ 40% ಕಮಿಷನ್ ಸರ್ಕಾರದ ವಿರುದ್ಧ ಗಧಾಪ್ರಹಾರ ನಡೆಸಲಿದ್ದಾರೆ ಎಂದು ಗೌರವ್ ವಲ್ಲಭ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಕಾಂಗ್ರೆಸ್, ಬಿಜೆಪಿಗೆ ಸದ್ಯಕ್ಕೆ ಉಳಿದಿದ್ದು ವಿಷಕನ್ಯೆ, ವಿಷಸರ್ಪ ಅಷ್ಟೇ: ಹೆಚ್​​ ಡಿ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.