ETV Bharat / state

ಪ್ರಾಂತ್ಯವಾರು ಮತ ಹಂಚಿಕೆಯಲ್ಲಿ ಶೇ.4 ಏರಿಕೆ: ಕಾಂಗ್ರೆಸ್ ಪ್ರಚಂಡ ಗೆಲುವಿಗೆ ಇದೂ ಕಾರಣ

author img

By

Published : May 14, 2023, 10:30 AM IST

ಮೇ 10 ರಂದು ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಶನಿವಾರ(ನಿನ್ನೆ) ಪ್ರಕಟವಾಗಿದೆ. ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದು ಆಡಳಿತಾರೂಢ ಬಿಜೆಪಿಯನ್ನು ಮಣಿಸಿತು.

Congress leaders
ಕಾಂಗ್ರೆಸ್​​ ನಾಯಕರು

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ವಿವಿಧ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತ ಅಂದಾಜು ಶೇ 4ಕ್ಕಿಂತ ಹೆಚ್ಚು ಮತ ಪಾಲು(Vote share) ಪಡೆದಿದೆ. ಆಡಳಿತ ವಿರೋಧಿ ಅಲೆಯನ್ನು ಸರಿಯಾಗಿ ಗ್ರಹಿಸಿದ್ದ ನಾಯಕರು, ವರ್ಷದ ಮೊದಲೇ ನಡೆಸಿದ ತಯಾರಿ, ತೋರಿಸಿದ ಒಗ್ಗಟ್ಟು, ಘೋಷಿಸಿದ ಜನಕಲ್ಯಾಣ ಕಾರ್ಯಕ್ರಮಗಳು ಪಕ್ಷವನ್ನು 136ರ ಗಡಿ ದಾಟಿಸುವಲ್ಲಿ ಯಶಸ್ಸು ಕಂಡಿವೆ. ಜನತಾ ಪರಿವಾರದ ಆಡಳಿತ ಯುಗ ಆರಂಭವಾದ ಮೇಲೆ 1989ರಲ್ಲಿ ನಡೆದ ಚುನಾವಣೆಯಲ್ಲಿ 178 ಸ್ಥಾನಗಳನ್ನು ಕಾಂಗ್ರೆಸ್ ಗಳಿಸಿತ್ತು. ಅದಾದ ಬಳಿಕ, ಯಾವುದೇ ಪಕ್ಷ ಈ ಪರಿಯ ಗೆಲುವು ಸಾಧಿಸಿರಲಿಲ್ಲ.

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಶೇ.38ರಷ್ಟು ಮತ ಪಡೆದಿದ್ದರೆ, ಈ ಬಾರಿ ಅದು ಶೇ 43ಕ್ಕೆ ಏರಿದೆ. ಬಿಜೆಪಿ ಶೇ 36ರಲ್ಲೇ ಎರಡೂ ಚುನಾವಣೆಯಲ್ಲಿ ತನ್ನ ಶಕ್ತಿ ಕಾಯ್ದುಕೊಂಡಿತ್ತು. ಶೇ 18.36ರಷ್ಟು ಮತ ಪಡೆದಿದ್ದ ಜೆಡಿಎಸ್‌ ಈ ಸಲ ಶೇ 13.3ಕ್ಕೆ ಕುಸಿಯಿತು. ಈ ಲೆಕ್ಕಾಚಾರ ಗಮನಿಸಿದರೆ ಜೆಡಿಎಸ್‌ನ ಶೇ 5 ಮತಗಳು ಕಾಂಗ್ರೆಸ್ ಪಾಲಾಗುವ ಜತೆಗೆ, ಲಿಂಗಾಯತ ಸಮುದಾಯದ ದೊಡ್ಡ ಪ್ರಮಾಣದ ಮತ ಕಾಂಗ್ರೆಸ್‌ಗೆ ದಕ್ಕಿರುವುದು ಗೊತ್ತಾಗುತ್ತದೆ.

Karnataka Election Result
ಕರ್ನಾಟಕ ವಿಧಾನಸಭೆ 224 ಕ್ಷೇತ್ರಗಳ ಘೋಷಿತ ಫಲಿತಾಂಶ

ಕರ್ನಾಟಕ ವಿಧಾನಸಭೆ 224 ಕ್ಷೇತ್ರಗಳ ಘೋಷಿತ ಫಲಿತಾಂಶ:

  • ಕಾಂಗ್ರೆಸ್​-135
  • ಬಿಜೆಪಿ-66
  • ಜೆಡಿಎಸ್​-19
  • ಇತರೆ-4

ಪಕ್ಷಗಳು ಪಡೆದ ಶೇಕಡಾವಾರು ಮತ ಪ್ರಮಾಣ: ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಕಾಂಗ್ರೆಸ್​ ಮತ ಹಂಚಿಕೆ ಶೇಕಡಾ 4ಕ್ಕಿಂತ ಹೆಚ್ಚಾದರೆ, ಜೆಡಿಎಸ್ ಶೇ.5ಕ್ಕೆ ಕುಸಿತ ಕಂಡಿದೆ. 2018 ರ ಚುನಾವಣೆಯಲ್ಲಿ ಕಾಂಗ್ರೆಸ್ 38.04 ಶೇಕಡಾ ಮತಗಳನ್ನು ಗಳಿಸಿತು. ನಂತರ ಬಿಜೆಪಿ (36.22 ಶೇ) ಮತ್ತು ಜೆಡಿಎಸ್ ಶೇ.​ 18.36 ಮತಗಳನ್ನು ಗಳಿಸಿತ್ತು. ಈಗಷ್ಟೇ ಮುಕ್ತಾಯಗೊಂಡ ಮತದಾನದಲ್ಲಿ ಕಾಂಗ್ರೆಸ್‌ ಮತಗಳ ಪ್ರಮಾಣವು 42.88 ಪ್ರತಿಶತಕ್ಕೆ ಏರಿದೆ. ಜೆಡಿಎಸ್ ಶೇ.13.29ಕ್ಕೆ ಕುಸಿದಿದೆ. ಬಿಜೆಪಿಯ ಮತಗಳಿಕೆ ಶೇ.36.

ವರದಿಗಳ ಪ್ರಕಾರ, 'ಕಿತ್ತೂರು ಕರ್ನಾಟಕ' ಪ್ರದೇಶದಲ್ಲಿ ಕಾಂಗ್ರೆಸ್ 50ರಲ್ಲಿ 33 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. 'ಕಲ್ಯಾಣ ಕರ್ನಾಟಕ' ಪ್ರದೇಶದಲ್ಲಿ 41 ಸ್ಥಾನಗಳಲ್ಲಿ 26 ಸ್ಥಾನಗಳನ್ನು ಗೆದ್ದಿದೆ(ಕಳೆದ ಬಾರಿ 20). ಆದರೆ ಈ ಪ್ರದೇಶದಲ್ಲಿ ಬಿಜೆಪಿಯ ಸಂಖ್ಯೆ 17 ರಿಂದ 10ಕ್ಕೆ ಇಳಿದಿದೆ. ದಕ್ಷಿಣ ಕರ್ನಾಟಕದ ಒಕ್ಕಲಿಗ ಪ್ರಾಬಲ್ಯವಿರುವ ಹಳೆ ಮೈಸೂರು ಭಾಗದಲ್ಲಿ 59 ಕ್ಷೇತ್ರಗಳ ಪೈಕಿ 37 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಪಕ್ಷ ಜಯಗಳಿಸಿದೆ. 2018ರಲ್ಲಿ ಜೆಡಿಎಸ್ 29 ರಿಂದ 14ಕ್ಕೆ ಇಳಿದರೆ, ಬಿಜೆಪಿ 9 ರಿಂದ 6ಕ್ಕೆ ಇಳಿದಿದೆ.

2023 ಕರ್ನಾಟಕ ವಿಧಾನಸಭಾ ಚುನಾವಣೆಯ ಕುತೂಹಲಕಾರಿ ಫಲಿತಾಂಶವೆಂದರೆ ರಾಜ್ಯದಲ್ಲಿ ಬಿಜೆಪಿ ತನ್ನ ಒಟ್ಟು ಶೇ.36 ರಷ್ಟು ಮತಗಳನ್ನು ಉಳಿಸಿಕೊಂಡಿದೆ. ಆದರೆ ಅಸೆಂಬ್ಲಿಯಲ್ಲಿ ಅದರ ಅಸ್ತಿತ್ವದಲ್ಲಿರುವ 116 ಸ್ಥಾನಗಳಲ್ಲಿ ಶೇ. 40 ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಕಳೆದುಕೊಂಡಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಗೆದ್ದಿರುವ ಕ್ಷೇತ್ರವಾರು ಸೀಟುಗಳ ವಿಘಟನೆಯನ್ನು ಗಮನಿಸಿದರೆ ಕಾಂಗ್ರೆಸ್ ದಾಖಲೆಯ ಶೇ.73 ರಷ್ಟು ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ. "ಕರ್ನಾಟಕದ ಜನರ ನಿರ್ಣಾಯಕ ತೀರ್ಪಿನ ಫಲವಾಗಿ ಕಾಂಗ್ರೆಸ್ ಗೆಲುವು ಸಾಧಿಸಿದೆ" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನು ಓದಿ: ದಕ್ಷಿಣ ಭಾರತ ಬಿಜೆಪಿ ಮುಕ್ತವಾಗಿದೆ, ನಾನು ಕರ್ನಾಟಕದ ಭೂಮಿ ಪುತ್ರ : ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಟಾಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.