ಬೆಂಗಳೂರು: ನಗರದ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವ್ಯಾಕ್ಸಿನ್ ನೀಡುತ್ತಿದ್ದಾರೆ. ಆದರೆ ಮೊದಲೇ ರಿಜಿಸ್ಟರ್ ಮಾಡಿಕೊಂಡು ಬಂದವರಿಗೆ ಮಾತ್ರ ವ್ಯಾಕ್ಸಿನ್ ನೀಡುತ್ತಿದ್ದು, ತಂತ್ರಜ್ಞಾನ ಅರಿಯದ, ಸ್ಮಾರ್ಟ್ ಫೋನ್ ಹೊಂದಿಲ್ಲದ ವಯಸ್ಸಾದವರು ವ್ಯಾಕ್ಸಿನ್ ಸಿಗದೇ ಹಿಂತಿರುಗಿ ಹೋಗುತ್ತಿದ್ದಾರೆ.
ಮೊದಲ ಬಾರಿಗೆ ವ್ಯಾಕ್ಸಿನ್ ಪಡೆದ 79 ವರ್ಷದ ಶಾರದಾ ಮೋಹನ್ ಮಾತನಾಡಿ ವ್ಯಾಕ್ಸಿನ್ ಪಡೆದಿದ್ದೇನೆ, ಏನೂ ವ್ಯತ್ಯಾಸ ಅನಿಸುತ್ತಿಲ್ಲ. ಸ್ವಲ್ಪ ಹೊತ್ತು ಕಾಯಬೇಕಾಯಿತು ಎಂದರು. ಮತ್ತೊಬ್ಬರು 74 ವರ್ಷದ ಜಯಾರಾವ್ ಅವರು ವ್ಯಾಕ್ಸಿನ್ ಪಡೆದರು.
ಇನ್ನು ನೋಂದಣಿ ಸಮಸ್ಯೆ ಆಗ್ತಿರುವ ಬಗ್ಗೆ ಆಸ್ಪತ್ರೆ ವೈದ್ಯರಾದ ಡಾ.ವೆಂಕಟೇಶಯ್ಯ ಮಾತನಾಡಿ, ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚಿಸಿ, ಮ್ಯಾನ್ಯುಯಲ್ ಮಾಡುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯ ರಿಜಿಸ್ಟ್ರೇಷನ್ ಮಾಡಿಕೊಂಡವರಿಗೆ ಮಾತ್ರ ವ್ಯಾಕ್ಸಿನ್ ನೀಡಲಾಗ್ತಿದೆ ಎಂದರು.