ETV Bharat / state

ಡಿಜಿಟಲ್ ಸ್ಕ್ಯಾನಿಂಗ್​ ಮೂಲಕ ಶಾಸನಗಳ ಸಂರಕ್ಷಣೆಗೆ ಮುಂದಾದ ಬೆಂಗಳೂರು ಮಿಥಿಕ್ ಸೊಸೈಟಿ

author img

By

Published : Nov 26, 2021, 6:45 PM IST

Updated : Nov 26, 2021, 7:24 PM IST

ರಾಜ್ಯ ಪುರಾತತ್ವ ಇಲಾಖೆಯ ಅನುಮತಿ ಪಡೆದು ಶಾಸನಗಳ 3ಡಿ ಡಿಜಿಟಲ್ ಸ್ಕ್ಯಾನಿಂಗ್ ಮಹತ್ವಾಕಾಂಕ್ಷೆಯ ಯೋಜನೆಯನ್ನು ಮಿಥಿಕ್ ಸೊಸೈಟಿ ಕೈಗೆತ್ತಿಕೊಂಡಿದೆ.

bengaluru miithic society
bengaluru miithic society

ಬೆಂಗಳೂರು: ಶಾಸನಗಳ ಸಂಗ್ರಹಕ್ಕೆ 3ಡಿ ಸ್ಪರ್ಶ ನೀಡಿ, ಡಿಜಿಟಲ್ ಸ್ಕ್ಯಾನಿಂಗ್​​​ಗೆ ಮಿಥಿಕ್ ಸೊಸೈಟಿ ಮುಂದಾಗಿದೆ. ಈ ಮೂಲಕ ಆಧುನಿಕ ಸಂಶೋಧನಾ ವಿಧಾನ, ವಿಜ್ಞಾನ-ತಂತ್ರಜ್ಞಾನ ಅವಿಷ್ಕಾರಗಳು, ದೇಶದ ಇತಿಹಾಸ, ಪುರಾತತ್ವ, ಸಾಂಸ್ಕೃತಿಕ ಅಧ್ಯಯನಗಳಲ್ಲಿ ಹೊಸ ಮತ್ತು ನಿಖರ ಮಾಹಿತಿಗಳನ್ನು ಬೆಳಕಿಗೆ ತರುತ್ತಿದೆ.

ಈ ಜ್ಞಾನಸಂಪತ್ತನ್ನು ಸರಳವಾಗಿ ಜನಸಾಮಾನ್ಯರಿಗೆ ತಿಳಿಸುವ ಕಾರ್ಯವನ್ನು ಮಿಥಿಕ್ ಸೊಸೈಟಿ ವಹಿಸಿಕೊಂಡಿದ್ದು, ಅದಕ್ಕನುಗುಣವಾಗಿ ಯೋಜನೆಗಳು, ಪರಿಕಲ್ಪನೆಗಳನ್ನು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಪುರಾತತ್ವ ಇಲಾಖೆಯ ಅನುಮತಿ ಪಡೆದು, ಶಾಸನಗಳ 3ಡಿ ಡಿಜಿಟಲ್ ಸ್ಕ್ಯಾನಿಂಗ್ ಎಂಬ ಮಹತ್ವಾಕಾಂಕ್ಷಿ ಯೋಜನೆ ಕೈಗೆತ್ತಿಕೊಂಡಿದೆ.

ಈಗಾಗಲೇ, ಬೆಂಗಳೂರು ನಗರನಲ್ಲಿ ಡಿಜಿಟಲ್ ಸ್ಕ್ಯಾನಿಂಗ್ ಮುಗಿಸಿದ್ದು, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಎಲ್ಲ ಶಿಲಾ ಶಾಸನಗಳನ್ನು ಸ್ಕ್ಯಾನ್ ಮಾಡುವ ಗುರಿ ಹೊಂದಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮಿಥಿಕ್ ಸೊಸೈಟಿ ಸದಸ್ಯ ಉದಯ್ ಕುಮಾರ್, 'ಈ ಯೋಜನೆಯು ದೇಶದಲ್ಲಿ ಇದೇ ಮೊದಲನೆಯದಾಗಿದ್ದು, ಸಾವಿರಾರು ಶಾಸನಗಳ ಡಿಜಿಟಲ್ ಸಂರಕ್ಷಣೆಗಾಗಿ ಅತ್ಯಾಧುನಿಕ ಸ್ಕ್ಯಾನಿಂಗ್ ಮತ್ತು ಕಂಪ್ಯೂಟರ್ ತಂತ್ರಜ್ಞಾನ ಬಳಸಲಾಗಿದೆ. ಯೋಜನೆಯಲ್ಲಿ ಶಿಲಾಶಾಸನ ಸಂರಕ್ಷಣೆಗೆ ಹೊಸ ದೃಷ್ಟಿ ಮತ್ತು ಆಯಾಮ ನೀಡಲಾಗಿದೆ. ಬೆಂಗಳೂರು ಇಂದು ವಿಶ್ವಮಟ್ಟದ ಜಾಗತಿಕ ನಗರವಾಗಿ ಬೆಳೆದಿದೆ. ಹಾಗೆಯೇ ಸಾವಿರಾರು ವರ್ಷಗಳ ಇತಿಹಾಸವನ್ನು ಬೆಂಗಳೂರು ಹೊಂದಿದೆ ಎಂದು ಹೇಳುವುದಕ್ಕೆ ಶಾಸನಗಳೇ ಅಧಿಕೃತ ಲಿಖಿತ ದಾಖಲೆಗಳಾಗಿವೆ. ಬೆಂಗಳೂರು ನಗರದಲ್ಲಿಯೇ C.E.750 ರಿಂದ 18ನೇ ಶತಮಾನದವರೆಗೆ ಸುಮಾರು 175 ಶಾಸನಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ' ಎಂದು ತಿಳಿಸಿದರು.

ತಿಳುವಳಿಕೆ ಕೊರತೆಯಿಂದ ಶೇ.40 ರಷ್ಟು ಶಿಲಾ ಶಾಸನ ನಾಶ:

ತಿಳುವಳಿಕೆಯ ಕೊರತೆ, ನಿರಾಸಕ್ತಿ ಮತ್ತು ಕ್ಷಿಪ್ರ ನಗರೀಕರಣದ ಪರಿಣಾಮವಾಗಿ ಕಳೆದ ಕೆಲವು ದಶಕಗಳಲ್ಲಿ ಸುಮಾರು ಶೇ 40 ರಷ್ಟು ಶಿಲಾ ಶಾಸನಗಳು ನಾಶವಾಗಿದೆ. ಭವ್ಯ ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಬೆಂಗಳೂರಿನ ಲಿಖಿತ ಇತಿಹಾಸವು ಈ ರೀತಿಯಾಗಿ ಹಾಳಾಗುವುದನ್ನು ತಪ್ಪಿಸಲು ಮಿಥಿಕ್ ಸೊಸೈಟಿಯು ಶಾಸನ ಪರಂಪರೆಯ ಉಳಿವಿಗಾಗಿ ಅಧುನಿಕ ತಂತ್ರಜ್ಞಾನದ ಮೂಲಕ ಶಾಶ್ವತವಾಗಿ ಅವುಗಳ ರಕ್ಷಣೆಗೆ ಮುಂದಾಗಿದೆ.

ಶಾಸನಗಳ ರಕ್ಷಣೆ ಮತ್ತು ಅದರ ಮಹತ್ವವನ್ನರಿತು ನಮ್ಮ ಪೂರ್ವಜರ ನಂಬಿಕೆ, ಆಚರಣೆ, ಸಂಪ್ರದಾಯಗಳನ್ನು ಪ್ರತಿಯೊಬ್ಬರೂ ತಿಳಿಯಬೇಕು. ದೂರದೃಷ್ಠಿಯಿಂದ ಪ್ರತಿಯೊಬ್ಬರಿಗೂ ಈ ಮಾಹಿತಿ ತಲುಪಬೇಕು ಹಾಗೂ ನಮ್ಮ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಆ ಕೆಲಸವನ್ನ ನಾವು ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

Last Updated : Nov 26, 2021, 7:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.