ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೆಡೆಸಿದ ಸಿಇಟಿ-2020 ಕ್ರೀಡಾ ಕೋಟಾದಡಿ ಸೀಟು ಪಡೆಯಲು 364 ವಿದ್ಯಾರ್ಥಿಗಳು ಅನರ್ಹರಾಗಿದ್ದರೆ. 580 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಸೂಕ್ತ ದಾಖಲೆ ಸಲ್ಲಿಸದ ವಿದ್ಯಾರ್ಥಿಗಳನ್ನು ಪ್ರಾಧಿಕಾರ ಅನರ್ಹಗೊಳಿಸಿದೆ.
ಅರ್ಹ/ಅನರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ಕೆಇಎ ವೆಬ್ ಸೈಟ್ ನಲ್ಲಿ ಪ್ರಕಟಿಸಿಲಾಗಿದೆ. ಕ್ರೀಡಾ ಕೋಟಾದ ಸೀಟು ನೀಡಬೇಕಾದಲ್ಲಿ ಕೆಲವು ಮಾನದಂಡ ನಿಗದಿಪಡಿಸಲಾಗಿದೆ. ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. ಆದರೆ, ಬಹುತೇಕರು ರಾಜ್ಯಮಟ್ಟದ ಕಾಲೇಜು ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿ ಮೀಸಲಾತಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.