ಬೆಂಗಳೂರು: ಬಾಪೂಜಿನಗರ ಮತ್ತು ಪಾದರಾಯನಪುರ ವಾರ್ಡ್ಗಳನ್ನು ಸೀಲ್ ಡೌನ್ ಮಾಡಿದ್ದರೂ, ಕಳೆದ ಎರಡು ದಿನಗಳಿಂದ ಅನಗತ್ಯವಾಗಿ ರಸ್ತೆಗಿಳಿದ 350ಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕೊರೊನಾ ಸೋಂಕು ಬಾಪೂಜಿನಗರ ಮತ್ತು ಪಾದರಾಯನಪುರ ವಾರ್ಡ್ ಬಳಿ ಹೆಚ್ಚಾದ ಹಿನ್ನೆಲೆ ಸರ್ಕಾರದ ಆದೇಶದಂತೆ ಬಿಬಿಎಂಪಿ ಹಾಗೂ ಪೊಲಿಸ್ ಇಲಾಖೆ ಎರಡು ಪ್ರದೇಶದಲ್ಲಿ ಸೀಲ್ ಡೌನ್ ಹಾಕಿ ಆದೇಶ ಹೊರಡಿಸಿದೆ. ಹೀಗಾಗಿ ಬಾಪೂಜಿನಗರ ಮತ್ತು ಪಾದರಾಯನಪುರ ಬಳಿ ವಿನಾಕಾರಣ ಯಾರು ಓಡಾಟ ಮಾಡುವ ಹಾಗಿಲ್ಲ ಒಂದು ವೇಳೆ ಎಮರ್ಜೆನ್ಸಿ ಇದ್ದರೆ ಮಾತ್ರ ರಸ್ತೆಗೆ ಇಳಿಯಬೇಕು ಎಂದು ಜಾಗೃತಿ ಕೂಡ ಮೂಡಿಸಲಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಅನಗತ್ಯವಾಗಿ ರಸ್ತೆಗೆ ಇಳಿದ 350ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಅಡ್ಡಾದಿಡ್ಡಿ ಓಡಾಡುತ್ತಿದ್ದ ಕಾರಣ ಬೈಕ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ವಾಹನ ಚಾಲಕರು ಕುಂಟು ನೆಪ ಹೇಳಿಕೊಂಡು ಬೇಕಾಬಿಟ್ಟಿಯಾಗಿ ಅನಗತ್ಯ ಓಡಾಡಾ ಮಾಡ್ತಿದ್ರು. ಹೀಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಬೈಕ್ಗಳನ್ನು ವಶಕ್ಕೆ ಪಡೆಯುವಂತೆ ಜೆಜೆ ನಗರ ಪೊಲೀಸರಿಗೆ ಸೂಚನೆ ನೀಡಿದ್ರು . ಸದ್ಯ 350ಕ್ಕೂ ಹೆಚ್ಚು ವಾಹನಗಳನ್ನ ಜಪ್ತಿ ಮಾಡಿ ರಾಷ್ಟ್ರೀಯ ವಿಪತ್ತು ನಿರ್ವಹಣ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.